ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಂಚಣಿದಾರರಿಗೆ ಶುಭ ಸುದ್ದಿ ನೀಡುವ ಸುಳಿವು ಕೊಟ್ಟ ನಿರ್ಮಲಾ

|
Google Oneindia Kannada News

ನವದೆಹಲಿ, ಜೂನ್ 26: ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA)ವು ಪಿಂಚಣಿ ಮೊತ್ತ ಮತ್ತು ವಯಸ್ಸಿನ ಮಿತಿಯನ್ನು ಹೆಚ್ಚಿಸಲು ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದೆ. ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ಬದಲಾವಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಲಿಖಿತ ಉತ್ತರ ನೀಡಿದ್ದಾರೆ.

ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ಸರ್ಕಾರದಿಂದ 60 ವರ್ಷ ವಯಸ್ಸಿನ ಜನರಿಗೆ 1000, 2000, 3000, 4000 ಮತ್ತು 5000 ರೂಪಾಯಿ ಕನಿಷ್ಠ ತಿಂಗಳ ಪಿಂಚಣಿ ನೀಡಲಾಗುತ್ತಿದೆ.

ಕೇಂದ್ರದಿಂದ ಕೊಡುಗೆ : ಕನಿಷ್ಟ ಪಿಂಚಣಿ ಮೊತ್ತ ಹೆಚ್ಚಳಕ್ಕೆ ಶಿಫಾರಸು ಕೇಂದ್ರದಿಂದ ಕೊಡುಗೆ : ಕನಿಷ್ಟ ಪಿಂಚಣಿ ಮೊತ್ತ ಹೆಚ್ಚಳಕ್ಕೆ ಶಿಫಾರಸು

ತಿಂಗಳಿಗೆ ಕೇವಲ 42 ರು ಪಾವತಿ ಮಾಡಿ ನೋಂದಣಿಸಿಕೊಂಡರೆ 18 ವರ್ಷದಿಂದ 40 ವರ್ಷ ವಯಸ್ಸಿನವರು ಈ ಯೋಜನೆಯಿಂದ 1000 ರೂಪಾಯಿ ಪಿಂಚಣಿ ಪಡೆಯಬಹುದು.

Govt considering hike in pension age limit under Atal Pension Yojana

ಈ ಯೋಜನೆಯಲ್ಲಿ ನೋಂದಾಯಿಸಿದ ವ್ಯಕ್ತಿಯೂ ಅವಧಿಗೂ ಮುನ್ನ(60 ವರ್ಷ ಗರಿಷ್ಠ) ಮೃತಪಟ್ಟರೆ, ಅಂಥ ವ್ಯಕ್ತಿಯು ಯಾರನ್ನು ನಾಮಿನಿ ಮಾಡಿರುತ್ತಾರೋ ಅವರಿಗೆ ಉಳಿದ ತಿಂಗಳುಗಳಿಗೆ ಹಣ ಸಿಗಲಿದೆ. ಒಂದೇ ಬಾರಿಗೆ ಕೂಡಾ ಹಣವನ್ನು ಕ್ಲೇಮ್ ಮಾಡಬಹುದು. ಸುಮಾರು 8.5 ಲಕ್ಷ ರು ತನಕ ಕ್ಲೇಮ್ ಮಾದಬಹುದಾಗಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆಯ ವಯೋಮಿತಿಯನ್ನು 60ರಿಂದ 65ಕ್ಕೇರಿಸಲು ಪಿಂಚಣಿ ನಿಯಂತ್ರಣ ಮಂಡಳಿ ಈಗಾಗಲೆ ಅನುಮೋದನೆ ನೀಡಿ ವರ್ಷಗಳು ಕಳೆದಿವೆ. ಆದರೆ, ಅಧಿಸೂಚನೆ ಹೊರಡಿಸಿಲ್ಲ.

ಭವಿಷ್ಯ ನಿಧಿ ವಿಥ್ ಡ್ರಾ ನಿಯಮದಲ್ಲಿ ಏನಿದು ಹೊಸ ಬದಲಾವಣೆ ಭವಿಷ್ಯ ನಿಧಿ ವಿಥ್ ಡ್ರಾ ನಿಯಮದಲ್ಲಿ ಏನಿದು ಹೊಸ ಬದಲಾವಣೆ

ಹಾಲಿ ಯೋಜನೆಯ ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿ 60 ವರ್ಷ ಹಾಗೂ ಗರಿಷ್ಠ ಪಿಂಚಣಿ ಮೊತ್ತ 1000 ರು ನಿಂದ 5000ರು ತನಕ ಪ್ರತಿ ತಿಂಗಳಿನಂತೆ ನೀಡಲಾಗಿದೆ. ಈ ಮೊತ್ತವನ್ನು ಹೆಚ್ಚಿಸಲು ಬೇಡಿಕೆ ಬಂದಿದೆ. ಈ ಬಗ್ಗೆ ಕೇಂದ್ರ ಬಜೆಟ್ ನಲ್ಲಿ ಘೋಷಣೆ ನಿರೀಕ್ಷಿಸಲಾಗಿದೆ.

English summary
The Pension Fund Regulatory and Development Authority (PFRDA) has submitted a proposal to increase the limit of pension and age which the government is looking into.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X