• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರೇಷನ್ ಕಾರ್ಡ್ - ಆಧಾರ್ ಸಂಖ್ಯೆ ಜೋಡಣೆ ಬಗ್ಗೆ ಮಹತ್ವದ ಆದೇಶ

|

ನವದೆಹಲಿ, ಮೇ 12: ರೇಷನ್ ಕಾರ್ಡ್ ಜೊತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡದಿದ್ದರೆ, ಅಂಥ ರೇಷನ್ ಕಾರ್ಡ್ ರದ್ದಾಗಲಿದೆ ಎಂಬ ಸುದ್ದಿ ಹಬ್ಬಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ. ರೇಷನ್ ಕಾರ್ಡ್ ಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30 ರತನಕ ವಿಸ್ತರಿಸಲಾಗಿದೆ ಹಾಗೂ ರೇಷನ್ ಕಾರ್ಡ್ ರದ್ದಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

   ಉತ್ತರ ಕರ್ನಾಟಕದ ಈರುಳ್ಳಿ ರೈತನ ಮಾತು ಸರ್ಕಾರಕ್ಕೆ ಕೇಳಲಿ | Onion Price | Oneindia Kannada

   ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆಹಾರ ಹಾಗೂ ಸಾರ್ವಜನಿಕ ವಿತರಣಾ ಸಚಿವಾಲಯವು, ಫೆಬ್ರವರಿ 07, 2020ರಂದು ನೀಡಿದ ಆದೇಶವನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡಲಾಗಿದೆ. ಸೆಪ್ಟೆಂಬರ್ 30 ರವರೆಗೆ ರೇಷನ್ ಕಾರ್ಡ್ ಜೊತೆಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ಗಡುವು ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಆಧಾರ್ ಸಂಖ್ಯೆಯನ್ನು ಜೋಡಣೆ ಆಗಿಲ್ಲ ಎನ್ನುವ ಕಾರಣಕ್ಕೆ ಯಾವುದೇ ಫಲಾನುಭವಿಗಳಿಗೆ ರೇಷನ್ ಕಾರ್ಡ್ ರದ್ದುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

   ಬಯೋಮೆಟ್ರಿಕ್ ಇಲ್ಲದಿದ್ದರೂ ಪಡಿತರ ವಿತರಣೆಗೆ ಇಲಾಖೆ ಸೂಚನೆ

   ಎಲ್ಲಾ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ಅನ್ವಯವಾಗಲಿದೆ. ರಾಷ್ಟ್ರೀಯ ಆಹಾರ ಸುರಕ್ಷಾ ಅನ್ವಯ ಸಾರ್ವಜನಿಕ ಆಧಾರ್ ಜೋಡಣೆಯಾಗಿಲ್ಲ ಎಂಬ ಕಾರಣಕ್ಕೆ ಯಾವುದೇ ಫಲಾನುಭವಿಯ ಪಡಿತರ ಚೀಟಿಯ ಮಾಹಿತಿ ತೆಗೆದು ಹಾಕುವುದು ಅಥವಾ ರದ್ದುಗೊಳಿಸುವಂತಿಲ್ಲ ಎಂದು ಸಚಿವಾಲಯ ಸ್ಪಷ್ಟ ಆದೇಶವನ್ನು ನೀಡಿದೆ.

   ಬಯೋಮೆಟ್ರಿಕ್ ಬಗ್ಗೆ ಸ್ಪಷ್ಟನೆ: ಬಯೋಮೆಟ್ರಿಕ್/ ಆಧಾರ್ ಸಂಖ್ಯೆ ದೃಢೀಕರಣವಾಗಿಲ್ಲ ಎಂಬ ಕಾರಣಕ್ಕೆ NFSC ಅಡಿಯಲ್ಲಿ ಸಿಗಬೇಕಿರುವ ಆಹಾರ ಧಾನ್ಯಗಳನ್ನು ವಿತರಣೆ ಮಾಡದಿರುವುದು ಸರಿಯಲ್ಲ. ಇಂಥ ಕಠಿಣ ಪರಿಸ್ಥಿತಿಯಲ್ಲಿ ತಾಂತ್ರಿಕ ತೊಂದರೆಗಳನ್ನು ಬದಿಗೊತ್ತಿ, ಮಾನವೀಯ ದೃಷ್ಟಿಯಿಂದ ಪಡಿತರ, ಆಹಾರ ಧಾನ್ಯ ವಿತರಣೆಗೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಸಚಿವಾಲಯ ಸೂಚನೆ ನೀಡಿದೆ. ಇಲ್ಲಿ ತನಕ ಸುಮಾರು 80 ಕೋಟಿ ಫಲಾನುಭವಿಗಳ ಪೈಕಿ ಶೇ 80ರಷ್ಟು ಮಂದಿಯ ರೇಷನ್ ಕಾರ್ಡ್ -ಆಧಾರ್ ಕಾರ್ಡ್ ಜೋಡಣೆಯಾಗಿದೆ.

   English summary
   It has been reported in a section of newspapers today that ration cards of those who do not provide Aadhar number will be cancelled.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X