ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಡೆರಹಿತ ಸಂಚಾರಕ್ಕೆ ಸರ್ಕಾರದಿಂದ ಬಿಎಚ್‌ ನೋಂದಣಿ ಪರಿಚಯ: ಯಾರಿಗೆ ಸಹಕಾರಿ?

|
Google Oneindia Kannada News

ನವದೆಹಲಿ, ಆಗಸ್ಟ್‌ 28: ರಾಜ್ಯಗಳಾದ್ಯಂತ ವೈಯಕ್ತಿಕ ವಾಹನಗಳ ತಡೆರಹಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು, ರಸ್ತೆ ಸಾರಿಗೆ ಸಚಿವಾಲಯವು ಹೊಸ ವಾಹನಗಳಿಗೆ ಹೊಸ ನೋಂದಣಿ ಗುರುತು ನೀಡಿದೆ. ಅದುವೇ ಭಾರತ್ ಸಿರೀಸ್‌ (ಬಿಎಚ್-ಸಿರೀಸ್‌).

ಈ ನಿಟ್ಟಿನಲ್ಲಿ, ಸರ್ಕಾರವು ಹೊಸ ವಾಹನ ನೋಂದಣಿ ಆಡಳಿತಕ್ಕೆ ಸೂಚನೆ ನೀಡಿದ್ದು ಇನ್ನು ಮುಂದೆ ವಾಹನ ಮಾಲೀಕರು ಒಂದು ರಾಜ್ಯ/ಕೇಂದ್ರಾಡಳಿತ ಪ್ರದೇಶದಿಂದ ಮತ್ತೊಂದು ರಾಜ್ಯಕ್ಕೆ ಅಥವಾ ಕೇಂದ್ರಾಡಳಿತ ಪ್ರದೇಶದಕ್ಕೆ ಸ್ಥಳಾಂತರಗೊಂಡಾಗ ಮರು ನೋಂದಣಿ ಪ್ರಕ್ರಿಯೆಯು ಮಾಡುವ ಅಗತ್ಯ ಇರುವುದಿಲ್ಲ.

ಹಳೆಯ ವಾಹನಗಳ ಸಂಖ್ಯೆಯಲ್ಲಿ ದೇಶದಲ್ಲಿ ಕರ್ನಾಟಕವೇ ನಂಬರ್ 1ಹಳೆಯ ವಾಹನಗಳ ಸಂಖ್ಯೆಯಲ್ಲಿ ದೇಶದಲ್ಲಿ ಕರ್ನಾಟಕವೇ ನಂಬರ್ 1

"ಭಾರತ್ ಸಿರೀಸ್‌ (ಬಿಎಚ್-ಸಿರೀಸ್‌) ಅಡಿಯಲ್ಲಿ ಈ ವಾಹನ ನೋಂದಣಿ ಸೌಲಭ್ಯವನ್ನು ರಕ್ಷಣಾ ಸಿಬ್ಬಂದಿ, ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ/ ಕೇಂದ್ರ/ ರಾಜ್ಯ ಸಾರ್ವಜನಿಕ ವಲಯದ ಉದ್ಯೋಗಿಗಳು ಮತ್ತು ಖಾಸಗಿ ವಲಯದ ಕಂಪನಿಗಳು/ ಸಂಸ್ಥೆಗಳಿಗೆ ಸ್ವಯಂಪ್ರೇರಿತ ಆಧಾರದ ಮೇಲೆ ಮಾಡಿಕೊಳ್ಳಬಹುದು. ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ತಮ್ಮ ಕಚೇರಿಯನ್ನು ಹೊಂದಿರುವ ಹಿನ್ನೆಲೆ ರಕ್ಷಣಾ ಸಿಬ್ಬಂದಿಗಳು, ಸಾರ್ವಜನಿಕ ವಲಯದ ಉದ್ಯೋಗಿಗಳು, ಖಾಸಗಿ ವಲಯದ ಕಂಪನಿಗಳ ಉದ್ಯೋಗಿಗಳು ಸ್ವಯಂಪ್ರೇರಿತವಾಗಿ ಈ ನೋಂದಣಿ ಮಾಡಿಕೊಳ್ಳಬಹುದು," ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

 Govt brings new BH registration series for seamless transfer of vehicles: Check details In kannada

ಈ ಭಾರತ್ ಸಿರೀಸ್‌ (ಬಿಎಚ್-ಸಿರೀಸ್‌) ಯೋಜನೆಯು, ಒಂದು ರಾಜ್ಯದಿಂದ ಅಥವಾ ಕೇಂದ್ರಾಡಳಿತ ಪ್ರದೇಶದಿಂದ ಇನ್ನೊಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಸ್ಥಳಾಂತರಗೊಂಡ ನಂತರ ಭಾರತದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ವೈಯಕ್ತಿಕ ವಾಹನಗಳ ಮುಕ್ತ ಸಂಚಾರ ನಡೆಸಲು ಅನುಕೂಲವಾಗಲಿದೆ ಎಂದು ಕೂಡಾ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.

ಈವರೆಗೆ ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಿಂದ ಇನ್ನೊಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಸ್ಥಳಾಂತರ ಹೊಂದಿದರೆ ವಾಹನವನ್ನು ಮರು ನೋಂದಣಿ ಮಾಡಿಕೊಳ್ಳುವುದು ಅತ್ಯಗತ್ಯವಾಗಿತ್ತು. ಆದರೆ ಈಗ ಜಾರಿಗೆ ಬಂದಿರುವ ''ಭಾರತ್ ಸಿರೀಸ್‌ (ಬಿಎಚ್-ಸಿರೀಸ್‌) ಯೋಜನೆಯು ನಿಮಗೆ ಆ ತೊಂದರೆಯಿಂದ ಮುಕ್ತವಾಗಿಸುತ್ತದೆ. ಇದು ನಿಮಗೆ ಒಂದು ಪರಿಹಾರವನ್ನು ಕಲ್ಪಿಸುತ್ತದೆ," ಎಂದು ಹೇಳಿಕೆಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ.

ವಾಹನ ವಿಮೆ ನವೀಕರಣದಲ್ಲಿ ವಿನಾಯಿತಿ ಇಲ್ಲ: ಜಿಐ ಕೌನ್ಸಿಲ್ ಸ್ಪಷ್ಟನೆವಾಹನ ವಿಮೆ ನವೀಕರಣದಲ್ಲಿ ವಿನಾಯಿತಿ ಇಲ್ಲ: ಜಿಐ ಕೌನ್ಸಿಲ್ ಸ್ಪಷ್ಟನೆ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು 2021 ರ ಆಗಸ್ಟ್ 26 ರಂದು ಹೊರಡಿಸಿದ ಅಧಿಸೂಚನೆಯ ಮೂಲಕ ಹೊಸ ವಾಹನಗಳಿಗೆ ಹೊಸ ನೋಂದಣಿ ಭಾರತ್ ಸಿರೀಸ್‌ (ಬಿಎಚ್-ಸಿರೀಸ್‌) ಮೂಲಕ ಹೊಸ ಗುರುತನ್ನು ನೀಡುವ ಪ್ರಸ್ತಾಪವನ್ನು ಮಾಡಿದೆ. ಈ ಭಾರತ್ ಸಿರೀಸ್‌ (ಬಿಎಚ್-ಸಿರೀಸ್‌) ನೋಂದಣಿ ಗುರುತು ಹೊಂದಿರುವ ವಾಹನಕ್ಕೆ ಹೊಸ ನೋಂದಣಿ ಗುರುತು ನೀಡುವ ಅಗತ್ಯವಿಲ್ಲ. ವಾಹನದ ಮಾಲಕರು ಒಂದು ರಾಜ್ಯದಿಂದ ಸ್ಥಳಾಂತರಗೊಳ್ಳಬಹುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೇಳಿಕೆಯಲ್ಲಿ ವಿವರಿಸಿದೆ.

ಪ್ರಸ್ತುತ ಒಬ್ಬ ವ್ಯಕ್ತಿಯು ವಾಹನವನ್ನು ನೋಂದಾಯಿಸಿದ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶವನ್ನು ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ಗರಿಷ್ಠ 12 ತಿಂಗಳುಗಳ ಕಾಲ ಇರಿಸಿಕೊಳ್ಳಲು ಅವಕಾಶವಿದೆ. 12 ತಿಂಗಳ ಅವಧಿ ಮುಗಿಯುವ ಮುನ್ನ ಈ ವಾಹನದ ಮಾಲಕರು ಆ ವಾಹನದ ಮರು ನೋಂದಣಿ ಮಾಡಿಕೊಳ್ಳಬೇಕು. ಆದರೆ ಈ ಭಾರತ್ ಸಿರೀಸ್‌ (ಬಿಎಚ್-ಸಿರೀಸ್‌) ಹೊಸ ನಿಯಮದ ಪ್ರಕಾರ 12 ತಿಂಗಳುಗಳ ಕಾಲ ಅವಧಿ ಮುಗಿದರೂ ಹೊಸ ನೋಂದಣಿ ಮಾಡಬೇಕಾಗಿಲ್ಲ.

(ಒನ್‌ ಇಂಡಿಯಾ ಸುದ್ದಿ)

English summary
To ensure seamless transfer of personal vehicles across states, the road transport ministry has come up with a new registration mark for new vehicles: Check details In kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X