ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿ ದಿನದ ಕೆಲಸದ ಅವಧಿ 9 ಗಂಟೆಗಳ ಕಾಲ ಎಂದು ನಿಗದಿ?

|
Google Oneindia Kannada News

ನವದೆಹಲಿ, ನವೆಂಬರ್ 04: ಉದ್ಯೋಗಿಗಳ ಪ್ರತಿದಿನದ ಕೆಲಸದ ಅವಧಿ, ಗೃಹಭತ್ಯೆ ಬಗ್ಗೆ ಭಾರತ ಸರ್ಕಾರ ವೇತನ ಸಂಹಿತೆ ಶಿಫಾರಸುಗಳನ್ನು ಸಿದ್ಧಪಡಿಸಿದೆ. ಆದರೆ ರಾಷ್ಟ್ರೀಯ ಕನಿಷ್ಠ ವೇತನದಲ್ಲಿ ಯಾವುದೇ ಬದಲಾವಣೆ ಮಾಡಲಾಗಿದೆ.

ವೇತನ ಸಂಹಿತೆಯ ಕರಡು ಪ್ರತಿಯಂತೆ ಉದ್ಯೋಗಿಗಳು ದಿನಕ್ಕೆ 9 ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ವೇತನವನ್ನು ನಿರ್ಧರಿಸಲು ಮೂರು ಭೌಗೋಳಿಕ ವರ್ಗೀಕರಣಗಳನ್ನು ಸೂಚಿಸಲಾಗಿದೆ. ಗೃಹಭತ್ಯೆಯನ್ನು ನಗರಕ್ಕೆ ಅನುಗುಣವಾಗಿ ವಿಂಗಡಿಸುವುದರ ಬಗ್ಗೆ ಯಾವುದೇ ಸೂಚನೆ ಇಲ್ಲ.

ನವೆಂಬರ್ ತಿಂಗಳಿನಲ್ಲಿ ಮೋದಿ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಬಂಪರ್ನವೆಂಬರ್ ತಿಂಗಳಿನಲ್ಲಿ ಮೋದಿ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಬಂಪರ್

ಹಾಲಿ ಪ್ರತಿ ದಿನದ ಕೆಲಸದ ಅವಧಿಯ ಪ್ರಕಾರ, ತಿಂಗಳ ವೇತನವನ್ನು ನಿಗದಿಪಡಿಸಲು ತಿಂಗಳಲ್ಲಿ 26 ದಿನಗಳ ಕೆಲಸಕ್ಕೆ ಎಂಟು ಗಂಟೆಗಳ ದೈನಂದಿನ ಕೆಲಸವನ್ನು ಲೆಕ್ಕ ಹಾಕಲಾಗುತ್ತದೆ.

Govt avoids fixing minimum wage in draft rules, suggests 9-hour working day

ಉತ್ಪಾದನಾ ಕಾರ್ಖಾನೆಗಳೂ ಪ್ರತಿ ದಿನ 9 ಗಂಟೆ ಅವಧಿ ಕೆಲಸ ಮಾಡುವಂತೆ ಮನವಿ ಮಾಡಿವೆ. ಆದರೆ ಸರ್ಕಾರ ಹೊಸ ವೇತನ ಸಂಹಿತೆಯ ನಿಯಮ ಅಳವಡಿಸಿಕೊಳ್ಳಲು ನಮ್ಮ ಒಕ್ಕೂಟದ ವಿರೋಧವಿದೆ ಎಂದು ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ ಉಪಾಧ್ಯಕ್ಷ ಎ.ಕೆ. ಪದ್ಮನಾಭನ್ ಹೇಳಿದ್ದಾರೆ.

ಕನಿಷ್ಠ ವೇತನದಲ್ಲಿ ಬದಲಾವಣೆ ಇಲ್ಲ: ಕರಡು ಸಂಹಿತೆಯಲ್ಲಿ ಕನಿಷ್ಠ ವೇತನವನ್ನು ನಿಗದಿ ಮಾಡಿಲ್ಲ. ಕೇಂದ್ರದ್ರ ಕಾರ್ಮಿಕ ಸಚಿವಾಲಯದ ಆಂತರಿಕ ಸಮಿತಿಯು ಜನವರಿಯಲ್ಲಿ ಬಿಡುಗಡೆ ಮಾಡಿದ ವರದಿಯಂತೆ, ಜುಲೈ 2018ರ ಪ್ರಕಾರ ಕನಿಷ್ಠ ವೇತನ 375 ರೂ., ಕನಿಷ್ಠ ಮಾಸಿಕ ವೇತನ 9,750 ರೂ ಹಾಗೂ ನಗರ ಮೂಲದ ಕಾರ್ಮಿಕರಿಗೆ 1,430 ರೂ. ವಸತಿ ಭತ್ಯೆಯನ್ನು ನೀಡಬೇಕೆಂದು ಸೂಚಿಸಲಾಗಿದೆ.

40 ಲಕ್ಷ ಜನಸಂಖ್ಯೆ ಇರುವ ನಗರ, 10 ಲಕ್ಷ ಹಾಗೂ ಗ್ರಾಮೀಣ ಪ್ರದೇಶ ಹೀಗೆ ಮೂರು ಭೌಗೋಳಿಕ ವಿಂಗಡಣೆ ಮಾಡಿ ವೇತನ ನಿಗದಿಯಾಗಲಿದೆ. ಮೂಲ ವೇತನದ ಶೇ10ರಷ್ಟು ಮನೆ ಬಾಡಿಗೆಗೆ ಸಿಗಲಿದೆ. ಇಂಧನ, ವಿದ್ಯುತ್ ಪೂರೈಕೆ, ಇನ್ನಿತರ ಸೌಲಭ್ಯಗಳಿಗಾಗಿ ಶೇ 20ರಷ್ಟು ಕಡಿತವಾಗಲಿದ್ದು, ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

English summary
The number of hours which shall constitute a normal working day…shall be of nine hours, said the draft rules now available in public domain for comments.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X