ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ಸರ್ಕಾರದ ತಡೆ

|
Google Oneindia Kannada News

ನವದೆಹಲಿ, ಏಪ್ರಿಲ್ 28; ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಬೇಡಿ ಎಂದು ಸರ್ಕಾರ ಬೈಕ್ ತಯಾರಿಕಾ ಕಂಪನಿಗಳಿಗೆ ಸೂಚಿಸಿದೆ. ಬೈಕ್‌ಗಳಿಗೆ ಬೆಂಕಿ ತಗುಲುತ್ತಿರುವ, ಕೆಲವರು ಸಾವನ್ನಪ್ಪಿರುವ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಎಲೆಕ್ಟ್ರಿಕ್ ಬೈಕ್‌ಗಳಿಗೆ ಬೆಂಕಿ ತಗುಲಿದ ಪ್ರಕರಣಗಳ ಬಗ್ಗೆ ಪ್ರತ್ಯೇಕ ತನಿಖೆಯಾಗಬೇಕು. ಈ ತನಿಖೆ ಪೂರ್ಣಗೊಳ್ಳುವ ತನಕ ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಬಾರದು ಎಂದು ಸೂಚನೆ ನೀಡಲಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ: 4 ದಿನಗಳಲ್ಲಿ 4ನೇ ಘಟನೆ- ಜನರಲ್ಲಿ ಆತಂಕ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ: 4 ದಿನಗಳಲ್ಲಿ 4ನೇ ಘಟನೆ- ಜನರಲ್ಲಿ ಆತಂಕ

ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಲೆಕ್ಟ್ರಿಕ್ ಬೈಕ್ ತಯಾರಿಕಾ ಕಂಪನಿಗಳ ಜೊತೆ ಸಭೆ ನಡೆಸಿದೆ. ಈ ಸಭೆಯಲ್ಲಿ ಸೂಚನೆ ಕೊಡಲಾಗಿದ್ದು, ಯಾವುದೇ ಬೈಕ್ ಬೆಂಕಿಗೆ ಆಹುತಿಯಾಗಿದ್ದರೆ ಆ ಬ್ಯಾಚ್‌ನ ಎಲ್ಲಾ ವಾಹನಗಳನ್ನು ವಾಪಸ್ ಪಡೆದು ಮರು ಪರಿಶೀಲನೆ ಮಾಡುವಂತೆ ಸಹ ಹೇಳಿದೆ.

ಆಂಧ್ರದಲ್ಲಿ ಮತ್ತೊಂದು ಇವಿ ಬೈಕ್ ಬ್ಯಾಟರಿ ಸ್ಫೋಟ: ವೃದ್ಧ ಸಾವು, ಪತ್ನಿ ಗಂಭೀರಆಂಧ್ರದಲ್ಲಿ ಮತ್ತೊಂದು ಇವಿ ಬೈಕ್ ಬ್ಯಾಟರಿ ಸ್ಫೋಟ: ವೃದ್ಧ ಸಾವು, ಪತ್ನಿ ಗಂಭೀರ

Govt Asked Electric Two Wheeler Manufacturers Not To Launch New Vehicles

ಸಭೆಯಲ್ಲಿ ಎಲೆಕ್ಟ್ರಿಕ್ ಬೈಕ್ ತಯಾರಿಕಾ ಕಂಪನಿಗಳಿಗೆ ಹೊಸ ಬೈಕ್ ಬಿಡುಗಡೆ ಮಾಡದಂತೆ ಮೌಖಿಕವಾಗಿ ಸೂಚನೆ ನೀಡಲಾಗಿದೆ. ಈಗ ಬೆಂಕಿ ಹೊತ್ತಿಕೊಂಡಿರುವ ಬೈಕ್‌ಗಳ ಬಗ್ಗೆ ತನಿಖೆ ನಡೆದು, ನಿಖರ ಕಾರಣ ಪತ್ತೆಯಾಗದ ಬಳಿಕ ಹೊಸ ಬೈಕ್‌ಗಳು ಬಿಡುಗಡೆಗೊಳ್ಳಲಿವೆ.

ಮಂಗಳೂರು: ಕಾಲೇಜು ಕ್ಯಾಂಪಸ್ ಗಸ್ತಿಗೆ ವಿದ್ಯಾರ್ಥಿಗಳಿಂದಲೇ ತಯಾರಾಯ್ತು ಇ-ಬೈಕ್ಮಂಗಳೂರು: ಕಾಲೇಜು ಕ್ಯಾಂಪಸ್ ಗಸ್ತಿಗೆ ವಿದ್ಯಾರ್ಥಿಗಳಿಂದಲೇ ತಯಾರಾಯ್ತು ಇ-ಬೈಕ್

ಕಳೆದ ವಾರ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ದೋಷ ಪೂರಿತ ಬೈಕ್‌ಗಳನ್ನು ತಯಾರಕರೇ ಸತಃ ವಾಪಸ್ ಪಡೆಯಬೇಕು ಎಂದು ಹೇಳಿದ್ದರು. ಸಚಿವರ ಹೇಳಿಕೆ ಬಳಿಕ ವಿವಿಧ ಕಂಪನಿಗಳು 7 ಸಾವಿರ ಬೈಕ್‌ಗಳನ್ನು ವಾಪಸ್ ಪಡೆದಿದ್ದವು.

Recommended Video

ಪಂತ್ ಗಾಗಿ IPL ನಿಯಮವನ್ನೇ ಚೇಂಜ್ ಮಾಡಿ ಎಂದ ಮುಂಬೈ ಇಂಡಿಯನ್ಸ್ | Oneindia Kannada

ದೇಶದ ವಿವಿಧ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ಬೈಕ್‌ಗಳಿಗೆ ಬೆಂಕಿ ಬಿದ್ದ ಪ್ರಕರಣಗಳು ದಾಖಲಾಗಿದ್ದವು. ಕೆಲವು ಬೈಕ್ ಸವಾರರು ಸಾವನ್ನಪ್ಪಿದ್ದರು. ಈ ಘಟನೆಗಳ ಬಳಿಕ ಸರ್ಕಾರ ಬೈಕ್ ತಯಾರಿಕಾ ಕಂಪನಿಗಳ ಜೊತೆ ಸಭೆ ನಡೆಸಿತ್ತು.

English summary
After fire accident cases government has asked electric two-wheeler manufacturers not to launch new vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X