ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಬಯೋಟೆಕ್ ಮತ್ತು ಎಸ್‌ಐಐಗಳಿಗೆ ಕೇಂದ್ರದಿಂದ 4,500 ಕೋಟಿ ರೂ. ಸಾಲ

|
Google Oneindia Kannada News

ನವದೆಹಲಿ, ಏಪ್ರಿಲ್ 19: ಕೋವಿಡ್-19 ಲಸಿಕೆ ಉತ್ಪಾದಕ ಕಂಪೆನಿಗಳಾದ ಭಾರತ್ ಬಯೋಟೆಕ್ ಮತ್ತು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗಳಿಗೆ ಸಾಲ ಪೂರೈಕೆ ಮಾಡಲು ಹಣಕಾಸು ಸಚಿವಾಲಯ ಸೋಮವಾರ ಅನುಮೋದನೆ ನೀಡಿದೆ.

ಈ ಸಾಲವನ್ನು ಕೋವಿಡ್-19 ಉಸ್ತುವಾರಿ ನಡೆಸುತ್ತಿರುವ ನೋಡಲ್ ಸಚಿವರಿಗೆ ಮಂಜೂರು ಮಾಡಲಾಗುತ್ತದೆ. ಅವರು ಅದನ್ನು ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಈ ಎರಡೂ ಕಂಪೆನಿಗಳಿಗೆ ವರ್ಗಾವಣೆ ಮಾಡಲಿದ್ದಾರೆ ಎಂದು ವರದಿ ತಿಳಿಸಿದೆ.

ಪುಣೆ ಮೂಲದ ಎಸ್‌ಐಐಗೆ 3,000 ಕೋಟಿ ರೂ ಮತ್ತು ಹೈದರಾಬಾದ್ ಮೂಲಕ ಭಾರತ್ ಬಯೋಟೆಕ್ ಕಂಪೆನಿಗೆ 1,500 ಕೋಟಿ ರೂ ಸಾಲ ಒದಗಿಸಲು ಸಚಿವಾಲಯ ಅಂಗೀಕಾರ ನೀಡಿದೆ. ಈ ಮೊತ್ತವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ. ಕೋವಿಡ್ ಲಸಿಕೆಗಳ ಉತ್ಪಾದನೆಯ ಸಾಮರ್ಥ್ಯವನ್ನು ತಿಂಗಳಿಗೆ 100 ಮಿಲಿಯನ್ ಡೋಸ್‌ಗಿಂತಲೂ ಅಧಿಕ ಮಟ್ಟಕ್ಕೆ ವೃದ್ಧಿಸಲು 3,000 ಕೋಟಿ ರೂ ಸಾಲ ನೀಡುವಂತೆ ಎಸ್‌ಐಐ ಸಿಇಒ ಆದಾರ್ ಪೂನಾವಲ್ಲಾ ಸರ್ಕಾರವನ್ನು ಕೋರಿದ್ದರು. ಅದರ ಬೆನ್ನಲ್ಲೇ ಸರ್ಕಾರ ಈ ನೆರವು ನೀಡಲು ಮುಂದಾಗಿದೆ.

 Govt Approves Rs 4500 Crore Credit To Serum Institute, Bharat Biotech

ಕೆಲವು ದಿನಗಳ ಹಿಂದಷ್ಟೇ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಕ ಭಾರತ್ ಬಯೋಟೆಕ್ ಸಂಸ್ಥೆಗೆ ಸೌಲಭ್ಯ ವೃದ್ಧಿಯ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರ 65 ಕೋಟಿ ರೂ ಅನುದಾನ ಘೋಷಿಸಿತ್ತು.

English summary
Finance Ministry approved Rs 4500 crore credit to Serum Institute and Bharat Biotech companies to ramp up vaccine production.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X