ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲ ಬೆಲೆ ಇಳಿಕೆ , ದೇಶದ ಜನತೆಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರ್ಕಾರ

|
Google Oneindia Kannada News

Recommended Video

ತೈಲ ಬೆಲೆ ಇಳಿಕೆ : ದೇಶದ ಜನತೆಗೆ ಕೊಂಚ ರಿಲೀಫ್ ನೀಡಿದ ಮೋದಿ ಸರ್ಕಾರ | Oneindia Kannada

ನವದೆಹಲಿ, ಅಕ್ಟೋಬರ್ 04: ಸತತ ಬೆಲೆ ಏರಿಕೆ ಬಿಸಿಯಿಂದ ಕಂಗೆಟ್ಟಿದ್ದ ದೇಶದ ಜನತೆಗೆ ಮೋದಿ ಸರ್ಕಾರವು ಗುರುವಾರದಂದು ಸಿಹಿ ಸುದ್ದಿ ನೀಡಿದೆ. ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಸಲಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಘೋಷಿಸಿದ್ದಾರೆ.

ಅಬಕಾರಿ ಸುಂಕ ಒಂದೂವರೆ ರುಪಾಯಿ ಕಡಿತ ಮಾಡಲಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 1 ರುಪಾಯಿ ದರ ಇಳಿಕೆ ಮಾಡುವುದರಿಂದ ಒಟ್ಟಾರೆ, ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್ ಮೇಲೆ 2.50 ರುಪಾಯಿ ಕಡಿತಗೊಳ್ಳಲಿದೆ ಎಂದರು.

ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಜೇಟ್ಲಿ ಸುದ್ದಿಗೋಷ್ಠಿಯ ಪೂರ್ಣ ವಿವರಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಜೇಟ್ಲಿ ಸುದ್ದಿಗೋಷ್ಠಿಯ ಪೂರ್ಣ ವಿವರ

ಸೆಪ್ಟೆಂಬರ್ ತಿಂಗಳ ಮೊದಲಿನಿಂದ ನಾಲ್ಕು ಪ್ರತಿ ಲೀಟರ್ ನಂತೆ ಬೆಲೆ ಏರಿಕೆಯಾಗಿದೆ. ಸದ್ಯ ಸರಾಸರಿ ಪೆಟ್ರೋಲ್ ಮೇಲೆ ಪ್ರತಿ ಲೀಟರ್ ಗೆ 19.48 ರು ನಷ್ಟು ಅಬಕಾರಿ ಸುಂಕವಿದ್ದರೆ, ಡೀಸೆಲ್ ಮೇಲೆ 15.33ರಷ್ಟು ಸುಂಕವಿದೆ. ಈ ಸುಂಕ ತಗ್ಗಿಸುವಂತೆ ಕೇಂದ್ರ ಸರ್ಕಾರದ ಮೇಲೆ ಭಾರಿ ಒತ್ತಡ ಹಾಕಲಾಗಿತ್ತು. ಕೊನೆಗೂ ಒತ್ತಡಕ್ಕೆ ಮಣಿದು, ಬೆಲೆ ಇಳಿಸಿದೆ.

ಪೆಟ್ರೋಲ್ ಬೆಲೆ ಮತ್ತೆ ಏರಿಕೆ, ಅಬಕಾರಿ ಸುಂಕ ಇಳಿಸಲು ಆಗ್ರಹಪೆಟ್ರೋಲ್ ಬೆಲೆ ಮತ್ತೆ ಏರಿಕೆ, ಅಬಕಾರಿ ಸುಂಕ ಇಳಿಸಲು ಆಗ್ರಹ

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ತೆರಿಗೆಯನ್ನೂ ಇಳಿಸಿವೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾತೈಲ ಬೆಲೆ ಏರಿಕೆಯಾಗಿದ್ದು, ಡಾಲರ್ ಎದುರು ರುಪಾಯಿ ಅಪಮೌಲ್ಯ ಎಲ್ಲವೂ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ.ಸ್ಥಳೀಯ ತೆರಿಗೆ ತಗ್ಗಿಸುವಂತೆ ರಾಜ್ಯಗಳಿಗೆ ಸೂಚಿಸುವುದಿಲ್ಲ. ಆದು ಆಯಾ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದು ಎಂದು ಜೇಟ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಪ್ರಮುಖ ನಗರಗಳಲ್ಲಿ ಗುರುವಾರದಂದು ಇಂಧನ ಬೆಲೆ

ಪ್ರಮುಖ ನಗರಗಳಲ್ಲಿ ಗುರುವಾರದಂದು ಇಂಧನ ಬೆಲೆ

ಪ್ರಮುಖ ನಗರಗಳಲ್ಲಿ ಗುರುವಾರದಂದು ಇಂಧನ ಬೆಲೆ: (ನಗರ, ರುಪಾಯಿ/ಪ್ರತಿ ಲೀಟರ್ ಬೆಲೆ)
ನವದೆಹಲಿ : ಪೆಟ್ರೋಲ್ 84, ಡೀಸೆಲ್ 75.45
ಕೋಲ್ಕತ್ತಾ: ಪೆಟ್ರೋಲ್ 85.80, ಡೀಸೆಲ್ 77.30
ಮುಂಬೈ :ಪೆಟ್ರೋಲ್ 91.34, ಡೀಸೆಲ್ 80.10
ಚೆನ್ನೈ : ಪೆಟ್ರೋಲ್ 87.33, ಡೀಸೆಲ್ 79.79
ಬೆಂಗಳೂರು : ಪೆಟ್ರೋಲ್ 84.67, ಡೀಸೆಲ್ 75.84
ಹೈದರಾಬಾದ್ : ಪೆಟ್ರೋಲ್ 89.06, ಡೀಸೆಲ್ -82.07

ಪೆಟ್ರೋಲ್ ದರ ನಿರ್ಧಾರ ಹೇಗೆ? ಯಾರಿಗೆಷ್ಟು ಪಾಲು? ಯಾವ ದೇಶದಲ್ಲೆಷ್ಟು?ಪೆಟ್ರೋಲ್ ದರ ನಿರ್ಧಾರ ಹೇಗೆ? ಯಾರಿಗೆಷ್ಟು ಪಾಲು? ಯಾವ ದೇಶದಲ್ಲೆಷ್ಟು?

ತೈಲ ಬೆಲೆ ನಿರಂತರ ಹೆಚ್ಚಳ

ತೈಲ ಬೆಲೆ ನಿರಂತರ ಹೆಚ್ಚಳ

ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಮುಖ ಮೂರು ತೈಲ ಕಂಪನಿಗಳು ಪ್ರತಿದಿನದಂದು ಇಂಧನ ಬೆಲೆ ಪರಿಷ್ಕರಣೆ ಮಾಡಿದ ಬಳಿಕ ಆಯಾ ರಾಜ್ಯಗಳು ತಮ್ಮ ಆರ್ಥಿಕ ಮಾರ್ಗದರ್ಶನಕ್ಕೆ ಅನುಗುಣವಾಗಿ ವ್ಯಾಟ್, ಸೆಸ್ ಸೇರಿಸಬಹುದು. ಬೇರೆ ಎಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಹೆಚ್ಚಾಗಿದೆ.

ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಪ್ರತಿ ಬ್ಯಾರೆಲ್ ಬೆಲೆ 80 ಡಾಲರ್ ದಾಟಿದೆ. ಇದು 100 ಡಾಲರ್ ಪ್ರತಿ ಬ್ಯಾರೆಲ್ ಆಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಮತ್ತೆ ಜನಸಾಮಾನ್ಯನ ಜೇಬಿಗೆ ಕತ್ತರಿ!ತೈಲಬೆಲೆ ಕಡಿಮೆನೇ ಆಗ್ವಲ್ದು ರೀ! ಮತ್ತೆ ಜನಸಾಮಾನ್ಯನ ಜೇಬಿಗೆ ಕತ್ತರಿ!ತೈಲಬೆಲೆ ಕಡಿಮೆನೇ ಆಗ್ವಲ್ದು ರೀ!

ತೆರಿಗೆ ಹಾಕುವುದು ಅನಿವಾರ್ಯ

ತೆರಿಗೆ ಹಾಕುವುದು ಅನಿವಾರ್ಯ

ಕರ್ನಾಟಕದಲ್ಲಿ ಪೆಟ್ರೋಲ್ ಮೇಲೇ ಶೇ 30 ಹಾಗೂ ಡೀಸೆಲ್ ಮೇಲೆ ಶೇ 19ರಷ್ಟು ವ್ಯಾಟ್ ಹಾಕಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಶೇ. 39.12 ಗಳಷ್ಟಿದೆ. ತೆಲಂಗಾಣದಲ್ಲಿ ಡೀಸೆಲ್ ಮೇಲೆ ಶೇ.26ರ ವ್ಯಾಟ್ ಹೇರಲಾಗುತ್ತಿದೆ. ವ್ಯಾಟ್ ಶೇ 4ರಷ್ಟು ಅಥವಾ 2 ರು ತಗ್ಗಿಸಿದರೂ ರಾಜ್ಯಕ್ಕೆ ವಾರ್ಷಿಕ ಸಾವಿರದಿಂದ 2 ಸಾವಿರ ಕೋಟಿ ರು ಹೊರೆ ಬೀಳಲಿದೆ. ಈಗಾಗಲೇ ಜಿಎಸ್ಟಿ ಬಂದ ಮೇಲೆ ಪ್ರವೇಶ ದರ ರದ್ದಾಗಿ ವಾರ್ಷಿಕ 2 ಸಾವಿರ ಕೋಟಿ ರು ನಷ್ಟವಾಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿರುವುದನ್ನು ಕೇಂದ್ರ ಸರ್ಕಾರದ ಉನ್ನತ ಮೂಲಗಳು ಸಮರ್ಥಿಸಿಕೊಂಡಿದ್ದು, ಇದರಿಂದ ಬರುವ ಆದಾಯದಿಂದ ಹಿಂದಿನ ಯುಪಿಎ ಸರ್ಕಾರ ಪಾವತಿಸದೇ ಬಾಕಿ ಉಳಿಸಿದ್ದ ತೈಲ ಸಬ್ಸಿಡಿ ನಿಭಾಯಿಸಲಾಗುತ್ತಿದೆ. ಅಲ್ಲದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಳಕೆಯಾಗುತ್ತಿದೆ ಎಂದಿದೆ.

ಪೆಟ್ರೋಲ್ ಬೆಲೆ ಮತ್ತೆ ಏರಿಕೆ, ಅಬಕಾರಿ ಸುಂಕ ಇಳಿಸಲು ಆಗ್ರಹ ಪೆಟ್ರೋಲ್ ಬೆಲೆ ಮತ್ತೆ ಏರಿಕೆ, ಅಬಕಾರಿ ಸುಂಕ ಇಳಿಸಲು ಆಗ್ರಹ

ಅಬಕಾರಿ ಸುಂಕದ ಲೆಕ್ಕಾಚಾರ

ಅಬಕಾರಿ ಸುಂಕದ ಲೆಕ್ಕಾಚಾರ

ಅಬಕಾರಿ ಸುಂಕದ ಲೆಕ್ಕಾಚಾರ: ಪ್ರತಿ ಲೀಟರ್ ಪೆಟ್ರೋಲ್ ಮೇಲೆ 19.48ರು ನಷ್ಟಿದ್ದರೆ, ಡೀಸೆಲ್ ಮೇಲೆ 15.33ರು ಪ್ರತಿ ಲೀಟರ್ ಸುಂಕ ತೆರಬೇಕಾಗಿದೆ. ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದಲ್ಲಿ ಶೇ6ರಷ್ಟು ಮಾರಾಟ ತೆರಿಗೆ ಹಾಕಲಾಗುತ್ತಿದೆ. ಅಲ್ಲದೆ, ಇಂಧನ ಮೇಲಿನ ಅಬಕಾರಿ ಸುಂಕ ಇಳಿಸುವ ಗೋಜಿಗೆ ಕೇಂದ್ರ ಸರ್ಕಾರ ಹೋಗುತ್ತಿಲ್ಲ. ಅಬಕಾರಿ, ಇಂಧನ ಮುಂತಾದ ಉತ್ಪನ್ನಗಳ ಮೇಲೆ ಸದ್ಯ ಜಿಎಸ್ಟಿ ಜಾರಿಯಾಗಿಲ್ಲ.

ಜಿಎಸ್ಟಿ ಜಾರಿಗೆ ಬಂದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಮಾನವಾಗಿ ತೆರಿಗೆ ವಿಧಿಸಲಿದೆ. ಸದ್ಯ ವಾಹನ ಸವಾರರು ಪೆಟ್ರೋಲ್ ಗೆ ಶೇಕಡಾ 55.5 ಹಾಗೂ ಡಿಸೇಲ್ ಗೆ 47.3ರಷ್ಟು ತೆರಿಗೆ ನೀಡುತ್ತಾರೆ. ಇದ್ರಲ್ಲಿ ಮುಖ್ಯವಾಗಿ ಕೇಂದ್ರ ಸರ್ಕಾರದ ತೆರಿಗೆ ಸುಂಕ ಹಾಗೂ ರಾಜ್ಯ ಸರ್ಕಾರಗಳ ವ್ಯಾಟ್, ಸೆಸ್ ಕೂಡಾ ಸೇರಿವೆ. ಪೆಟ್ರೋಲ್ ಗೆ ಶೇ 97.54ರಷ್ಟು ತೆರಿಗೆ ಹಾಕಲಾಗುತ್ತಿದೆ

ಜಿಎಸ್ಟಿ ಶೇ 18ರಷ್ಟು ತೆರಿಗೆ ವಿಧಿಸಿದರೆ ಮಾತ್ರ ಗ್ರಾಹಕರಿಗೆ ಲಾಭ

ಜಿಎಸ್ಟಿ ಶೇ 18ರಷ್ಟು ತೆರಿಗೆ ವಿಧಿಸಿದರೆ ಮಾತ್ರ ಗ್ರಾಹಕರಿಗೆ ಲಾಭ

ಈ ಎಲ್ಲಾ ಲೆಕ್ಕಾಚಾರ ಗರಿಷ್ಠ ಶೇ 18ರಷ್ಟು ತೆರಿಗೆ ವಿಧಿಸಿದರೆ ಬರುವ ಮೊತ್ತವಾಗಿದೆ. ಆದರೆ, ಜಿಎಸ್ಟಿ ವ್ಯಾಪಿಗೆ ಬಂದರೆ ಶೇ 5 ರಿಂದ ಶೇ 28ರಷ್ಟು ವಿಧಿಸಬಹುದಾಗಿದೆ. ಹೀಗಾಗಿ, ಶೇ 28ರಷ್ಟು ಜಿಎಸ್ಟಿ ಹೇರಿಕೆಯಾದರೆ ಜತೆಗೆ ಆಯಾ ರಾಜ್ಯಗಳ ಮಾರಾಟ ತೆರಿಗೆ, ಸೆಸ್ ಸೇರಿಸಿದರೆ ತೈಲ ಬೆಲೆ ಈಗಿನಷ್ಟೇ ಆಗಲಿದೆ. ಉದಾಹರಣೆಗೆ ಸದ್ಯ ದೆಹಲಿಯಲ್ಲಿ ಪೆಟ್ರೋಲ್ ಮೇಲೆ ವ್ಯಾಟ್ ಶೇ 27ರಷ್ಟಿದ್ದರೆ, ಡೀಸೆಲ್ ಮೇಲೆ 17.2ರು ಪ್ರತಿ ಲೀಟರ್ ಗೆ ಪಡೆಯಲಾಗುತ್ತಿದೆ. ಮುಂಬೈ, ಥಾಣೆ ಹಾಗೂ ನವೀ ಮುಂಬೈನಲ್ಲಿ ಈ ಪ್ರಮಾಣ ಶೇ 39.12ರಷ್ಟಿದೆ, ತೆಲಂಗಾಣದಲ್ಲಿ ಶೇ26ರಷ್ಟಿದೆ. ಕರ್ನಾಟಕದಲ್ಲಿ ಶೇ30ರಷ್ಟಿದೆ.

English summary
Government announces excise duty cut of Rs. 2.5 per litre on petrol, diesel. Finance Minister Arun Jaitley on Thursday announced a reduction in excise duty applicable to petrol and diesel in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X