ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರಿ ನೌಕರರ ಬಾಯಿಗೆ ಮತ್ತೆ ಲಡ್ಡು

By Mahesh
|
Google Oneindia Kannada News

ನವದೆಹಲಿ, ಸೆ.25: ಕೇಂದ್ರ ಸರ್ಕಾರಿ ನೌಕರರಿಗೆ ಇತ್ತೀಚೆಗಷ್ಟೇ ತುಟ್ಟಿ ಭತ್ಯೆ ಘೋಷಿಸಿದ್ದ ಕೇಂದ್ರದ ಮನಮೋಹನ್ ಸಿಂಗ್ ಸರ್ಕಾರ ಬುಧವಾರ(ಸೆ.25) ಮತ್ತೊಂದು ಸಿಹಿ ಸುದ್ದಿ ನೀಡಿದೆ. ವೇತನ ಮತ್ತು ನಿವೃತ್ತಿ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ 7ನೇ ವೇತನ ಆಯೋಗವನ್ನು ಕೇಂದ್ರದ ಯುಪಿಎ ಸರ್ಕಾರ ಪ್ರಕಟ ಮಾಡಿದೆ.

7ನೇ ವೇತನ ಆಯೋಗವನ್ನು ಬುಧವಾರ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಂಗೀಕರಿಸಿದ್ದಾರೆ. ಈ ವೇತನ ಆಯೋಗವು ಜನವರಿ 1, 2016ರಿಂದ ಜಾರಿಗೆ ಬರುವ ಸಾಧ್ಯತೆಗಳಿವೆ ಎಂದು ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ಅವರು ತಿಳಿಸಿದ್ದಾರೆ.

7ನೇ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ ಸುಮಾರು 50 ಲಕ್ಷ ಕೇಂದ್ರ ಸರ್ಕಾರದ ನೌಕರರಿಗೆ ಲಾಭದಾಯಕವಾಗಲಿದೆ. ಇದರಲ್ಲಿ ರಕ್ಷಣಾ ಇಲಾಖೆ ಮತ್ತು ರೇಲ್ವೇ ಇಲಾಖೆಯ ನೌಕರರು ಸೇರಿದ್ದಾರೆ. ಅಲ್ಲದೆ ನಿವೃತ್ತಿ ವೇತನ ಪಡೆಯುತ್ತಿರುವ ಸುಮಾರು 30 ಲಕ್ಷ ನೌಕರರಿಗೆ ಇದರಿಂದ ಲಾಭವಾಗಲಿದೆ.

7th pay panel set up, additional burden for next govt seen Rs 1 lakh cr

ಮುಂದಿನ ನವೆಂಬರ್ ತಿಂಗಳಿನಲ್ಲಿ 5 ರಾಜ್ಯಗಳಲ್ಲಿ ನಡೆಯುವ ವಿಧಾನಸಭಾ ಚುನಾವಣೆ ಹಾಗೂ ಮುಂದಿನ ವರ್ಷದಲ್ಲಿ ನಡೆಯುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 7ನೇ ವೇತನ ಆಯೋಗವನ್ನು ಒಪ್ಪಿಕೊಂಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ಕೇಂದ್ರ ಸರ್ಕಾರಿ ನೌಕರರ ವೇತನ ಭತ್ಯೆ ಹೆಚ್ಚಳ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ 7ನೇ ವೇತನ ಆಯೋಗವು ಮುಂದಿನ ಎರಡು ವರ್ಷಗಳಲ್ಲಿ ಸಂಪೂರ್ಣ ಮಾಹಿತಿ ನೀಡಲಿದೆ. ಆಯೋಗ ನೀಡಿದ ವರದಿ ಅನ್ವಯ ಕೇಂದ್ರ ಸರ್ಕಾರಿ ನೌಕರರ ಸಂಬಳವನ್ನು ಹೆಚ್ಚಿಸಲಾಗುತ್ತದೆ. ಈ ಆಯೋಗದ ಶಿಫಾರಸ್ಸಿನಂತೆ ನೌಕರರ ವೇತನ ಹೆಚ್ಚಳ ಜನವರಿ 1, 2016ರಿಂದ ಜಾರಿಗೆ ಬರಲಿದೆ.

7ನೇ ಆಯೋಗದ ಮುಖ್ಯಸ್ಥರು ಸೇರಿದಂತೆ ಸದಸ್ಯರ ಹೆಸರುಗಳನ್ನು ಸದ್ಯದಲ್ಲೇ ಅಂತಿಮಗೊಳಿಸಲಾಗುವುದು ಎಂದು ಚಿದಂಬರಂ ತಿಳಿಸಿದ್ದಾರೆ. 7ನೇ ವೇತನ ಆಯೋಗದ ಅಂಗೀಕಾರದಿಂದ ಸರ್ಕಾರದ ಬೊಕ್ಕಸಕ್ಕೆ 1 ಲಕ್ಷ ಕೋಟಿ ರು ಹೆಚ್ಚಿನ ಹೊರೆ ಬೀಳಲಿದೆ. ಸಾಮಾನ್ಯವಾಗಿ ಪ್ರತಿ 9-10 ವರ್ಷಕ್ಕೊಮ್ಮೆ ವೇತನಾ ಆಯೋಗ ರಚನೆಗೊಂಡು ಪರಿಷ್ಕರಣೆಗೊಳ್ಲುತ್ತದೆ. 2006 ರ ಜನವರಿ 1 ರಂದು ಜಾರಿಗೆ ಬಂದ ಆರನೇ ವೇತನಾ ಆಯೋಗದಿಂದ ಸರ್ಕಾರ 40000 ಕೋಟಿ ಹೊರೆ ಬಿದ್ದಿತ್ತು.(ಪಿಟಿಐ)

English summary
Ahead of elections, the government today (Sept.25) announced constitution of the Seventh Pay Commission, which will go into the salaries, allowances and pensions of about 80 lakh of its employees and pensioners, increasing the government’s payout burden by an estimated Rs 1 lakh crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X