ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ಯಾಜ್ಯ ನಿರ್ವಹಣೆ: 2 ಲಕ್ಷ ಗ್ರಾಮಗಳಿಗೆ 40,700 ಕೋಟಿ ರೂ. ಅನುದಾನ

|
Google Oneindia Kannada News

ನವದೆಹಲಿ, ಜೂನ್ 08: ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ 2 ಲಕ್ಷ ಗ್ರಾಮಗಳಿಗೆ 40,700 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಘನ ತ್ಯಾಜ್ಯ ಹಾಗೂ ದ್ರವ ತ್ಯಾಜ್ಯಗಳನ್ನು ನಿರ್ವಹಣೆ ಮಾಡುವುದಕ್ಕಾಗಿ 2 ಲಕ್ಷಕ್ಕೂ ಹೆಚ್ಚಿನ ಗ್ರಾಮಗಳಿಗೆ ಸ್ವಚ್ಛ ಭಾರತ್ ಮಿಷನ್‌ ಯೋಜನೆಯಲ್ಲಿ ಅನುದಾನ ಒದಗಿಸಲಾಗಿದೆ.

"ಕೇಂದ್ರ ಸರ್ಕಾರ 14,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರೆ, ರಾಜ್ಯಗಳು 8,300 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ, 12,730 ಕೋಟಿ ರೂಪಾಯಿ 15 ನೇ ಹಣಕಾಸು ಆಯೋಗದಿಂದ ಹಾಗೂ 4,100 ಕೋಟಿ ರೂಪಾಯಿ ಎಂಜಿಎನ್ ಆರ್ ಇಜಿಎಸ್ ನ ಮೂಲಕ ಸಂಗ್ರಹಿಸಲಾಗುತ್ತದೆ. ಉಳಿದ 1,500 ಕೋಟಿ ರೂಪಾಯಿಗಳನ್ನು ರಾಜ್ಯಗಳಿಂದಲೇ ಉದ್ಯಮದ ಮಾಡಲ್, ಸಿಎಸ್ ಆರ್ ಹಾಗೂ ಇನ್ನಿತರ ಯೋಜನೆಗಳಿಂದ ಸಂಗ್ರಹಿಸಲಾಗುತ್ತದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

Govt Allocates Rs 40,700 Cr For Waste Management In 2 Lakh Villages Under Swacch Bharat Mission

ಜಲ್ ಶಕ್ತಿ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರ 14,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರೆ, ರಾಜ್ಯಗಳು 8,300 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ಉಳಿದ ಹಣ ಬೇರೆ ಮೂಲಗಳಿಂದ ಬರಲಿದೆ ಎಂದು ಹೇಳಿದೆ.

ಸ್ವಚ್ಛಭಾರತ್ ಮಿಷನ್ ಗ್ರಾಮೀಣ್ (ಎಸ್ ಬಿಎಂ-ಜಿ) ಎರಡನೇ ಹಂತದಲ್ಲಿ ಜಲ ಶಕ್ತಿ ಸಚಿವಾಲಯ 2 ಲಕ್ಷಕ್ಕೂ ಹೆಚ್ಚಿನ ಗ್ರಾಮಗಳಿಗೆ ತ್ಯಾಜ್ಯ ನಿರ್ವಹಣೆಗೆ ನೆರವು ನೀಡಲಿದ್ದು 2021-22 ನೇ ಸಾಲಿನಲ್ಲಿ 40,700 ಕೋಟಿ ಅನುದಾನ ಒದಗಿಸಲಿದೆ ಎಂದು ಸಚಿವಾಲಯ ಹೇಳಿದೆ.

ಎಸ್ ಡಬ್ಲ್ಯುಬಿ (ಜಿ) ಪ್ರಗತಿಯನ್ನು ಸೋಮವಾರದಂದು ಇಲಾಖೆಯ ರಾಜ್ಯ ಸಚಿವ ಲಾಲ್ ಕಠಾರಿಯಾ ಪರಿಶೀಲನೆ ನಡೆಸಿದರು.

English summary
Over Rs 40,700 crore have been allocated to help over two lakh villages achieve solid and liquid waste management (SLWM) under the Swacch Bharat Mission (Grameen), the Jal Shakti Ministry said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X