ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಿಂದ ನೇಮಕಗೊಂಡ ರಾಜ್ಯಪಾಲರಿಂದ ಚುನಾಯಿತ ಸರ್ಕಾರಗಳಿಗೆ ತೊಂದರೆ : ಅರವಿಂದ್ ಕೇಜ್ರಿವಾಲ್

ಈ ಲಾತ್ ಸಾಹಿಬ್‌ಗಳಿಂದ (ಗವರ್ನರ್‌ಗಳು ಹಾಗೂ ಲೆಫ್ಟಿನೆಂಟ್ ಗವರ್ನರ್) ಪ್ರಜಾಪ್ರಭುತ್ವವನ್ನು ಹೇಗೆ ಉಳಿಸುವುದು ಎಂದು ನಾವು ಯೋಚಿಸಬೇಕಾಗಿದೆ ಎಂದು ಕೇಜ್ರಿವಾಲ್ ಹೇಳಿದರು.

|
Google Oneindia Kannada News

ನವದೆಹಲಿ, ಜನವರಿ25: ಕೇಂದ್ರದಿಂದ ನೇಮಕಗೊಂಡ ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳಿಂದ ದೇಶದ ಹಲವಾರು ರಾಜ್ಯಗಳ ಕೆಲಸಕ್ಕೆ ತಡೆಯೊಡ್ಡುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆರೋಪಿಸಿದ್ದಾರೆ.

ದೆಹಲಿ ಸರ್ಕಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಚುನಾಯಿತ ಸರ್ಕಾರದ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ಇನ್ನೂ ಅವರ ನಡೆಗಳು ಸಂವಿಧಾನಕ್ಕೆ ಕಪ್ಪು ಚುಕ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Republic Day: ಗಣರಾಜ್ಯೋತ್ಸವ ಪರೇಡ್‌ಗೆ ಹಾಜರಾಗುವುದು, ಟಿಕೆಟ್ ಖರೀದಿಸುವುದು ಹೇಗೆ; ವಿವರಗಳು ಇಲ್ಲಿವೆRepublic Day: ಗಣರಾಜ್ಯೋತ್ಸವ ಪರೇಡ್‌ಗೆ ಹಾಜರಾಗುವುದು, ಟಿಕೆಟ್ ಖರೀದಿಸುವುದು ಹೇಗೆ; ವಿವರಗಳು ಇಲ್ಲಿವೆ

ಈ ಲಾತ್ ಸಾಹಿಬ್‌ಗಳಿಂದ (ಗವರ್ನರ್‌ಗಳು ಹಾಗೂ ಲೆಫ್ಟಿನೆಂಟ್ ಗವರ್ನರ್) ಪ್ರಜಾಪ್ರಭುತ್ವವನ್ನು ಹೇಗೆ ಉಳಿಸುವುದು ಎಂದು ನಾವು ಯೋಚಿಸಬೇಕಾಗಿದೆ ಎಂದು ಕೇಜ್ರಿವಾಲ್ ಹೇಳಿದರು.

Governors lt Governors Obstructing Elected Governments Says Arvind Kejriwal

ಇನ್ನೂ ಕೇಂದ್ರ ಸರ್ಕಾರವೂ ನ್ಯಾಯಾಂಗದೊಂದಿಗೆ, ರಾಜ್ಯ ಸರ್ಕಾರಗಳು ಮತ್ತು ರೈತರು ಮತ್ತು ವ್ಯಾಪಾರಿಗಳೊಂದಿಗೆ ಸಂಘರಷದಲ್ಲಿದ್ದು, ಇವೆಲ್ಲಾ ಅಂತ್ಯವಾದರೇ ಭಾರತವು ವಿಶ್ವದ "ನಂಬರ್ ಒನ್" ದೇಶವಾಗಲು ಇಂತಹ ಹೋರಾಟಗಳನ್ನು ಕೊನೆಗೊಳಿಸುವಂತೆ ಕರೆ ನೀಡಿದರು.

ಈ ದಿನಗಳಲ್ಲಿ ಅವರು ನ್ಯಾಯಾಂಗದ ವಿರುದ್ಧ ಹೋರಾಡುತ್ತಿದ್ದಾರೆ. ನ್ಯಾಯಾಧೀಶರೊಂದಿಗೆ ಹೋರಾಡುವ ಅಗತ್ಯವೇನು? ಅವರು ರಾಜ್ಯ ಸರ್ಕಾರಗಳು, ರೈತರು ಮತ್ತು ವ್ಯಾಪಾರಸ್ಥರೊಂದಿಗೆ ಹೋರಾಡುತ್ತಿದ್ದಾರೆ. ನಾವು ಒಟ್ಟಾಗಿ ಕೆಲಸ ಮಾಡಿದರೆ ಮತ್ತು ಪರಸ್ಪರ ಕಲಿಯುತ್ತಿದ್ದರೆ, ಭಾರತವು ವಿಶ್ವದ ನಂಬರ್ ಒನ್ ದೇಶವಾಗುವುದನ್ನು ತಡೆಯಲು ಯಾವುದೂ ಸಾಧ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದರು.

ತೆಲಂಗಾಣ ಸರ್ಕಾರವು ರಾಜ್ಯದಲ್ಲಿ 4 ಕೋಟಿ ಜನರಿಗೆ ಉಚಿತ ಕಣ್ಣಿನ ತಪಾಸಣೆ ಮತ್ತು ನಂತರದ ಚಿಕಿತ್ಸೆಯನ್ನು ನೀಡಲು ನಿರ್ಧರಿಸಿದೆ ಎಂದು ಹೇಳಿದರು.

ಜಿಎಸ್‌ಟಿಯಿಂದ ಆಹಾರ ಪದಾರ್ಥಗಳಿಗೆ ವಿನಾಯಿತಿ ನೀಡಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದರು, ಇದು ದೇಶದ ಜನರಿಗೆ ಅಗತ್ಯವಾದ ಪರಿಹಾರವನ್ನು ನೀಡುತ್ತದೆ ಎಂದು ಹೇಳಿದರು. ದೇಶದ ಶೇ.99 ರಷ್ಟು ವ್ಯಾಪಾರಿಗಳು ತೆರಿಗೆ ಪಾವತಿಸಲು ಬಯಸಿದ್ದಾರೆ , ಸಂಪೂರ್ಣ ಜಿಎಸ್‌ಟಿ ಪದ್ಧತಿಯನ್ನು ಸರಳಗೊಳಿಸುವಂತೆ ಮನವಿ ಮಾಡಿದರು.

English summary
governors lt governors obstructing elected governments says arvind kejriwal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X