ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ಕೊವಿಡ್ ನಿರ್ವಹಣೆ ಭಾರತದ ಜಿಡಿಪಿಯನ್ನು ಪ್ರಪಾತಕ್ಕೆ ತಳ್ಳಿದೆ :ರಾಹುಲ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 12: ಕೇಂದ್ರ ಸರ್ಕಾರದ ಕೊವಿಡ್ ನಿರ್ವಹಣೆಯ ವಿರುದ್ಧದ ಹೋರಾಟವು ಭಾರತದ ಜಿಡಿಪಿಯನ್ನ ಪ್ರಪಾತಕ್ಕೆ ನೂಕಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಕೊರೊನಾ ವೈರಸ್ ನಮಗೆ ದೊಡ್ಡ ಸವಾಲಾಗಿದೆ. ಆದರೆ, ಅದರ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಯೋಜಿತ ಹೋರಾಟ ನಡೆಯುತ್ತಿದೆ ಮತ್ತು ನಮ್ಮ ಪ್ರಯತ್ನಗಳನ್ನು ಇಡೀ ಜಗತ್ತು ಗುರುತಿಸುತ್ತಿದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದರು.

ಭಾರತದಲ್ಲಿ ಒಂದೇ ದಿನ ಬರೋಬ್ಬರಿ 97,570 ಕೊರೊನಾ ಸೋಂಕಿತರು ಪತ್ತೆ ಭಾರತದಲ್ಲಿ ಒಂದೇ ದಿನ ಬರೋಬ್ಬರಿ 97,570 ಕೊರೊನಾ ಸೋಂಕಿತರು ಪತ್ತೆ

ಕೊವಿಡ್ ವಿರುದ್ಧ ಮೋದಿ ಸರ್ಕಾರದ 'ಯೋಜಿತ ಹೋರಾಟ'ವು ಭಾರತವನ್ನು ಪ್ರಪಾತಕ್ಕೆ ತಳ್ಳಿದೆ ಎಂದಿದ್ದಾರೆ.
1. ಶೇ.24ರಷ್ಟು ಐತಿಹಾಸಿಕ ಜಿಡಿಪಿ ಕುಸಿತ
2. 12 ಕೋಟಿ ಉದ್ಯೋಗಗಳ ನಷ್ಟ
3. 15.5 ಲಕ್ಷ ಕೋಟಿ ರೂ. ಹೆಚ್ಚುವರಿ ಒತ್ತಡದ ಸಾಲ
4. ಜಾಗತಿಕವಾಗಿ ಅತಿ ಹೆಚ್ಚು ದೈನಂದಿನ ಕೋವಿಡ್ ಪ್ರಕರಣಗಳು ಮತ್ತು ಸಾವುಗಳು
ಆದರೆ, ಭಾರತ ಸರ್ಕಾರ ಮತ್ತು ಮಾಧ್ಯಮಗಳಿಗೆ ಮಾತ್ರ ಎಲ್ಲವೂ ಚೆನ್ನಾಗಿದೆ' ಎಂದು ರಾಹುಲ್‌ ವ್ಯಂಗ್ಯವಾಡಿದ್ದಾರೆ. ಶೇ.24 ರಷ್ಟು ಜಿಡಿಪಿ ಕಡಿಮೆಯಾಗಿದೆ. 12 ಕೋಟಿ ಮಂದಿಯ ಉದ್ಯೋಗ ಹೋಗಿದೆ. 15.5 ಲಕ್ಷ ಹೆಚ್ಚುವರಿ ಒತ್ತಡದ ಸಾಲ ಹೊಂದಿದ್ದಾರೆ.

Governments Well Planned Fight Against COVID Has Put India In Abyss Of GDP Reduction

Recommended Video

ಇದೆ ಕಾರಣಕ್ಕೆ Randeep Surjewalaಗೆ ಕರ್ನಾಟಕ ಉಸ್ತುವಾರಿ | Oneindia Kannada

ಭಾರತದಲ್ಲಿ ಹೊಸದಾಗಿ 97,570 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನ 1201 ಮಂದಿ ಸಾವನ್ನಪ್ಪಿದ್ದಾರೆ.
ಒಟ್ಟು 46,59,985 ಕೊರೊನಾ ಸೋಂಕಿತರಿದ್ದಾರೆ.

9,58,316 ಸಕ್ರಿಯ ಪ್ರಕರಣಗಳಿವೆ.36,24,197 ಮಂದಿ ಗುಣಮುಖರಾಗಿದ್ದಾರೆ. ಇದುವರೆಗೂ 77,472 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

English summary
Taking a dig at the government, Congress leader Rahul Gandhi today said its "well planned fight" against coronavirus has allegedly put India in an "abyss" of GDP reduction of 24 per cent, 12 crore job losses, 15.5 lakh crore additional stressed loans and globally highest daily COVID-19 cases and deaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X