ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಬಿಪಿ, ಶುಗರ್, ಕ್ಯಾನ್ಸರ್, ಟಿಬಿ ಸೇರಿ 39 ಔಷಧಿಗಳ ಬೆಲೆ ಕಡಿತಗೊಳಿಸಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಸಪ್ಟೆಂಬರ್ 3: ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಪ್ರಮುಖ ಔಷಧಿಗಳ ಬೆಲೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ರೋಗಿಗಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಲ್ಲಿ ಸರ್ಕಾರ ಕ್ರಮ ತೆಗೆದುಕೊಂಡಿದ್ದು, ಕ್ಯಾನ್ಸರ್ ವಿರೋಧಿ ಔಷಧಿಗಳು, ಮಧುಮೇಹ ವಿರೋಧಿ, ವೈರಲ್, ಬ್ಯಾಕ್ಟೀರಿಯಾ ವಿರೋಧಿ ಔಷಧಗಳು, ಆಂಟಿರೆಟ್ರೋವೈರಲ್ ಔಷಧಿಗಳು, ಟಿಬಿ ವಿರೋಧಿ ಔಷಧಗಳು, ಕೋವಿಡ್ ಚಿಕಿತ್ಸೆಯಲ್ಲಿ ಬಳಸುವ ಔಷಧಗಳು ರಾಷ್ಟ್ರೀಯ ಸಾಮಾನ್ಯ ಔಷಧಿಗಳ ಪಟ್ಟಿಯಲ್ಲಿರುವ ಸುಮಾರು 39 ಔಷಧಿಗಳ ಬೆಲೆಯನ್ನು ಸರ್ಕಾರ ಕಡಿತಗೊಳಿಸಿದೆ.

ಬೆಲೆ ನಿಯಂತ್ರಣಕ್ಕೆ ಒಳಪಡುವ ಸಾಮಾನ್ಯವಾಗಿ ಬಳಸುವ ಔಷಧಿಗಳಲ್ಲಿ ಟೆನೆಲಿಗ್ಲಿಪ್ಟಿನ್-ಆಂಟಿ ಡಯಾಬಿಟಿಸ್ ಔಷಧ, ಜನಪ್ರಿಯ ಟಿಬಿ ಔಷಧಗಳಾದ ಬೆಡಕ್ವಿಲಿನ್ ಮತ್ತು ಡೆಲಾಮನಿಡ್, ಕೋವಿಡ್ ಚಿಕಿತ್ಸೆಯಲ್ಲಿ ಬಳಸುವ ಐವರ್ಮೆಕ್ಟಿನ್, ರೋಟವೈರಸ್ ಲಸಿಕೆಗಳು ಸಹ ಸೇರಿವೆ.

ಕೊರೊನಾವೈರಸ್ ಸೋಂಕಿನಿಂದ ಪಾರಾಗಲು ಮೂರನೇ ಡೋಸ್ ಬೇಕಾ!? ಕೊರೊನಾವೈರಸ್ ಸೋಂಕಿನಿಂದ ಪಾರಾಗಲು ಮೂರನೇ ಡೋಸ್ ಬೇಕಾ!?

ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಮನ್ಸುಖ್ ಮಾಂಡವೀಯಾ ಪರಿಷ್ಕೃತ ರಾಷ್ಟ್ರೀಯ ಸಾಮಾನ್ಯ ಔಷಧಿಗಳ ಪಟ್ಟಿಯನ್ನು ಗುರುವಾರ ಬಿಡುಗಡೆಗೊಳಿಸಿದರು.

ಪರ್ಯಾಯ ಔಷಧಿಗಳನ್ನು ಪರಿಚಯಿಸಲು ಮುಂದು

ಪರ್ಯಾಯ ಔಷಧಿಗಳನ್ನು ಪರಿಚಯಿಸಲು ಮುಂದು

"ಈಗ ಬಳಸುತ್ತಿರುವ ಔಷಧಿಗಳ ಪೈಕಿ ಕೆಲವು ಔಷಧಿಗಳನ್ನು ನಿಲ್ಲಿಸಲಾಗಿದೆ, ಅದರ ಬದಲಿಗೆ ಹೊಸ ಚಿಕಿತ್ಸೆ ಮತ್ತು ಉತ್ತಮ ಪರ್ಯಾಯಗಳನ್ನು ಪರಿಚಯಿಸಲಾಗಿದೆ. ಆದ್ದರಿಂದ ಅವುಗಳನ್ನು ಅಳಿಸುವುದು ಮುಖ್ಯವಾಗಿತ್ತು," ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೀಗೆ ಅಳಿಸಲಾದ ಔಷಧಿಗಳ ಪಟ್ಟಿಯಲ್ಲಿ ಬ್ಲೀಚಿಂಗ್ ಪೌಡರ್, ಎರಿಥ್ರೊಮೈಸಿನ್, ಆಂಟಿರೆಟ್ರೋವೈರಲ್-ಸ್ಟಾವುಡಿನ್+ಲಮಿವುಡಿನ್, ಇತರೆ ಔಷಧಿಗಳು ಸೇರಿವೆ.

ಭಾರತದಲ್ಲಿ ರಾಷ್ಟ್ರೀಯ ಸಾಮಾನ್ಯ ಔಷಧಿಗಳ ಪಟ್ಟಿ ಜಾರಿ

ಭಾರತದಲ್ಲಿ ರಾಷ್ಟ್ರೀಯ ಸಾಮಾನ್ಯ ಔಷಧಿಗಳ ಪಟ್ಟಿ ಜಾರಿ

ಕೇಂದ್ರ ಸರ್ಕಾರವು ದೇಶದಲ್ಲಿ ಬಳಸುವ ಸಾಮಾನ್ಯ ಔಷಧಿಗಳ ಪಟ್ಟಿಯನ್ನು ಒಳಗೊಂಡಿರುವ ಒಂದು ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿ (NLEM)ಯನ್ನು ಸಿದ್ಧಪಡಿಸಲು ಪ್ರಾರಂಭಿಸಿತು. ಕಳೆದ 2015ರಲ್ಲಿ ಈ ಪಟ್ಟಿ ಬಗ್ಗೆ ಸೂಚಿಸಲಾಗಿದ್ದು, ಪರಿಷ್ಕರಿಸಿದ ಔಷಧೀಯ ಪಟ್ಟಿಯನ್ನು 2016 ರಲ್ಲಿ ಜಾರಿಗೆ ತರಲಾಯಿತು. ಇದು ಅಸ್ತಿತ್ವದಲ್ಲಿರುವ ಪದ್ಧತಿಗಿಂತ ಹೊರತಾಗಿದೆ. ಇಲ್ಲಿ ಎಲ್ಲಾ ಅಗತ್ಯ ಔಷಧಗಳು ಅವುಗಳ ಬೆಲೆಯನ್ನು ಮಿತಿಗೊಳಿಸುವುದಿಲ್ಲ. ರಾಷ್ಟ್ರೀಯ ಔಷಧಿಗಳ ಸ್ಥಾಯಿ ಸಮಿತಿಯು, ಯಾವ ಔಷಧಿಗಳು ಸಾಕಷ್ಟು ಸಂಖ್ಯೆಯಲ್ಲಿ ಮತ್ತು ಖಚಿತ ಪ್ರಮಾಣದಲ್ಲಿ ಲಭ್ಯವಿರಬೇಕು ಎಂಬುದರ ಬಗ್ಗೆ ಶಾರ್ಟ್ ಲಿಸ್ಟ್ ಸಿದ್ಧಪಡಿಸುವ ಕೆಲಸ ಮಾಡುತ್ತದೆ.

ಔಷಧಿಗಳ ಬೆಲೆ ನಿಗದಿ ಮತ್ತು ನಿಯಂತ್ರಣ ಪ್ರಕ್ರಿಯೆ ಹೇಗಿರುತ್ತದೆ?

ಔಷಧಿಗಳ ಬೆಲೆ ನಿಗದಿ ಮತ್ತು ನಿಯಂತ್ರಣ ಪ್ರಕ್ರಿಯೆ ಹೇಗಿರುತ್ತದೆ?

ಆರೋಗ್ಯ ಸಂಶೋಧನಾ ವಿಭಾಗದ ಕಾರ್ಯದರ್ಶಿ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಬಲರಾಮ್ ಭಾರ್ಗವ ನೇತೃತ್ವದ ಸಮಿತಿಯು ಯಾವ ಔಷಧಿಗಳನ್ನು ಬೆಲೆಯನ್ನು ನಿಯಂತ್ರಣಕ್ಕೆ ಒಳಪಡಿಸಬೇಕು ಎಂದು ನಿರ್ಧರಿಸಲಾಗುತ್ತದೆ. ಹೀಗೆ ನಿರ್ಧರಿಸಿದ ಪಟ್ಟಿಯನ್ನು ಎರಡನೇ ಸಮಿತಿಗೆ ಕಳುಹಿಸಲಾಗುತ್ತದೆ. ಈ ಎರಡನೇ ಸಮಿತಿಯು ಔಷಧೀಯ ಇಲಾಖೆಯ ಕಾರ್ಯದರ್ಶಿ, ನೀತಿ ಆಯೋಗದ ಹಿರಿಯ ಅಧಿಕಾರಿಗಳು, ಆರೋಗ್ಯ ಕಾರ್ಯದರ್ಶಿಗಳು ಇರುತ್ತಾರೆ. ಇದು ಪ್ರಸ್ತುತ ಜಾರಿಯಲ್ಲಿರುವ ವಿಧಾನಕ್ಕಿಂತ ವಿಭಿನ್ನವಾಗಿರುತ್ತದೆ. ಈ ಪಟ್ಟಿಯಲ್ಲಿರುವ ಎಲ್ಲ ಔಷಧಿಗಳು ಸ್ವಯಂಚಾಲಿತವಾಗಿ ನಿಯಂತ್ರಣಕ್ಕೆ ಒಳಪಡುತ್ತವೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಸಮಿತಿಯು ವಿಶ್ವ ಆರೋಗ್ಯ ಸಂಸ್ಥೆಯ ಪರಿಷ್ಕೃತ ಅಗತ್ಯ ಔಷಧಿಗಳ ಪಟ್ಟಿಯಿಂದ ಒಂದು ಸುಳಿವನ್ನು ಪಡೆದುಕೊಂಡಿದೆ.

Recommended Video

ದೇಶಭಕ್ತ ವಿನಾಯಕ ದಾಮೋದರ್ ಸಾವರ್ಕರ್ ಜೀವನ ಚರಿತ್ರೆ | Oneindia Kannada
ಈ ಮೊದಲು ಔಷಧಿಗಳ ಬೆಲೆ ನಿಯಂತ್ರಣ ಹೇಗೆ?

ಈ ಮೊದಲು ಔಷಧಿಗಳ ಬೆಲೆ ನಿಯಂತ್ರಣ ಹೇಗೆ?

ಭಾರತದಲ್ಲಿ ಈ ಮೊದಲಿನ ಕಾರ್ಯವಿಧಾನದ ಅಡಿಯಲ್ಲಿ, ಆರೋಗ್ಯ ಸಚಿವಾಲಯವು ಬೆಲೆ ನಿಯಂತ್ರಣಕ್ಕೆ ಅರ್ಹವಾದ ಔಷಧಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿತ್ತು. ಅದರ ನಂತರ ಔಷಧೀಯ ಇಲಾಖೆಯು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ಅಡಿಯಲ್ಲಿ ಔಷಧ ಬೆಲೆ ನಿಯಂತ್ರಣ ಆದೇಶದ ವೇಳಾಪಟ್ಟಿ 1ರಲ್ಲಿ ಸೇರಿಸಲ್ಪಡುತ್ತವೆ. ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು ನಂತರ ಔಷಧಿಗಳ ಬೆಲೆಯನ್ನು ನಿಗದಿಪಡಿಸುತ್ತಿತ್ತು. NLEM ನಲ್ಲಿ ಪಟ್ಟಿ ಮಾಡಲಾದ ಔಷಧಿಗಳು ಮತ್ತು ಸಾಧನಗಳನ್ನು NPPA ನಿಗದಿಪಡಿಸಿದ ಬೆಲೆಯಲ್ಲಿ ಮಾರಾಟ ಮಾಡಬೇಕು, ಆದರೆ ವೇಳಾಪಟ್ಟಿಯಲ್ಲದ ಪಟ್ಟಿಯಲ್ಲಿರುವವರಿಗೆ ಗರಿಷ್ಠ ವಾರ್ಷಿಕ ಬೆಲೆ ಏರಿಕೆಯನ್ನು ಶೇ.10ರಷ್ಟು ಅನುಮತಿಸಲಾಗುತ್ತದೆ.

English summary
Government slashed prices of about 39 drugs including anti cancer drugs, anti diabetes, anti viral, antibacterial drugs, antiretroviral drugs, anti-TB drugs, drugs used in Covid treatment. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X