ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರಾನಾವೈರಸ್ ಭೀತಿಯಲ್ಲಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿ

|
Google Oneindia Kannada News

ನವದೆಹಲಿ, ಮಾರ್ಚ್ 2: ಚೀನಾದಿಂದ ಜಗತ್ತಿನಾದ್ಯಂತ ಹರಡುತ್ತಿರುವ ಮಹಾಮಾರಿ ಕೋವಿಡ್ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ದಿನದಿಂದ ದಿನಕ್ಕೆ ಸೋಂಕು ತಗುಲಿದವರ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೊನಾ ವೈರಸ್ ಬಗ್ಗೆ ಅನೇಕ ಊಹಾಪೋಹ ಸುದ್ದಿಗಳು ಹರಡುತ್ತಿರುವುದರಿಂದ ಸಾರ್ವಜನಿಕರು ಗಾಬರಿಯಾಗಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಇಲಾಖೆ ದೇಶದೆಲ್ಲೆಡೆ ಬಳಕೆಯಾಗುವಂಥ ಸಹಾಯವಾಣಿಯನ್ನು ಪ್ರಕಟಿಸಿದೆ.

ಟೆಕ್ಕಿಗೆ ಕೊರೊನಾ; ಮಹತ್ವದ ಸಭೆ ಕರೆದ ಆರೋಗ್ಯ ಸಚಿವ ಶ್ರೀರಾಮುಲುಟೆಕ್ಕಿಗೆ ಕೊರೊನಾ; ಮಹತ್ವದ ಸಭೆ ಕರೆದ ಆರೋಗ್ಯ ಸಚಿವ ಶ್ರೀರಾಮುಲು

ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಅವರು ಸೋಮವಾರದಂದು ಕೊರೊನಾ ವೈರಸ್ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ದೆಹಲಿ ಹಾಗೂ ತೆಲಂಗಾಣದಲ್ಲಿ ಕೊರೊನಾ ವೈರಾಣು ಸೋಂಕಿತರ ಪ್ರಕರಣ ಕಂಡು ಬಂದಿದೆ. ಕೇರಳದಲ್ಲಿ ಸೋಂಕಿತರಿಬ್ಬರು ಚಿಕಿತ್ಸೆ ಮೂಲಕ ಗುಣಮುಖರಾಗಿದ್ದಾರೆ. ಕೊರೊನಾ ವೈರಸ್ ನಿಂದ ತಪ್ಪಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಇಲಾಖೆ ನೀಡಿದೆ ಎಂದರು.

Government shares 24x7 helpline no. for queries, help related to coronavirus

ನೋವಾ ಕೊರಾನಾ ಭೀತಿಯಲ್ಲಿರುವವರು ಅಥವಾ ಈ ವೈರಾಣು, ಕಾಯಿಲೆ, ಸೋಂಕಿತರು, ಚಿಕಿತ್ಸೆ ಬಗ್ಗೆ ಅಗತ್ಯ ಮಾಹಿತಿ ಪಡೆಯಲು ಇಚ್ಛಿಸುವವರು +91-11-23978046ಗೆ ಕರೆ ಮಾಡಬಹುದು. ಇದು 24/7 ಲಭ್ಯವಿರಲಿದೆ. ಸಾರ್ವಜನಿಕರು ಇಲಾಖೆಯು ಹೊರಡಿಸಿರುವ ಪ್ರತ್ಯೇಕ ಇಮೇಲ್ ಐಡಿ [email protected]ಗೂ ಮೇಲ್ ಮಾಡಬಹುದು.

ಭಾರತದ ಬಹುತೇಕ ಎಲ್ಲಾ ಏರ್‌ಪೋರ್ಟ್‌ಗಳಲ್ಲಿ ಕೂಡ ತೀವ್ರ ನಿಗಾ ವಹಿಸಲಾಗುತ್ತಿದೆ. 6 ಸೋಂಕು ತಗುಲಿರುವ ಪ್ರಕರಣಗಳು ಕಂಡು ಬಂದರೂ ಭಾರತದಲ್ಲಿ ಇನ್ನೂ ಯಾರಿಗೂ ಪಾಸಿಟಿವ್ ಎಂದು ದೃಢಪಟ್ಟಿಲ್ಲ. ಕೊರೊನಾ ವೈರಾಣು ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೊರಡಿಸಿರುವ ಪ್ರಶ್ನೋತ್ತರ ಇಲ್ಲಿದೆ ಓದಿ

English summary
Health Minister Harsh Vardhan on Monday appealed people to contact 24x7 helpline number (+91-11-23978046) for queries related to coronavirus symptoms. This comes after Delhi and Telangana reported their first confirmed cases of coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X