ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆಗೆ ದರ ಎಷ್ಟು? ತಪ್ಪು ಮಾಹಿತಿ ಬಗ್ಗೆ ಸರ್ಕಾರದ ಸ್ಪಷ್ಟನೆ

|
Google Oneindia Kannada News

ನವದೆಹಲಿ, ಫೆಬ್ರವರಿ 27: ಮಾರ್ಚ್ 1ರಿಂದ ಆರಂಭವಾಗುವ ಲಸಿಕೆ ಕಾರ್ಯಕ್ರಮದ ಎರಡನೆಯ ಹಂತದ ಕುರಿತು, ಲಸಿಕೆಯ ಬೆಲೆ ಸೇರಿದಂತೆ ತಪ್ಪು ದಾರಿಗೆ ಎಳೆಯುವಂತಹ ಅನೇಕ ವದಂತಿಗಳು ಹರಿದಾಡುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದಾಗಿ ಕೆಲವು ರಾಜಕೀಯ ಪಕ್ಷಗಳು ಭರವಸೆ ನೀಡಿವೆ. ಹಾಗೆಯೇ ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡುವಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಲಸಿಕೆಗಳ ಉಚಿತವಾಗಿ ಲಭ್ಯವಾಗದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ರಾಜ್ಯದಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಯು 250 ರೂಗೆ ಲಭ್ಯವಾಗುತ್ತದೆ ಎಂದು ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ತಿಳಿಸಿದ್ದಾರೆ.

ಇದರಲ್ಲಿ ಭಾರತವೇನೂ ನಮ್ಮನ್ನು ಸೋಲಿಸಿಲ್ಲ: ಚೀನಾ ಹೇಳಿಕೆಇದರಲ್ಲಿ ಭಾರತವೇನೂ ನಮ್ಮನ್ನು ಸೋಲಿಸಿಲ್ಲ: ಚೀನಾ ಹೇಳಿಕೆ

ದೇಶದಲ್ಲಿ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನೂ ಈ ಲಸಿಕೆ ಕಾರ್ಯಕ್ರಮಕ್ಕೆ ಸೇರಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

 Government Says Several Misleading Claims Are Being Spread Over Second Phase Of Vaccination

ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿರುವ ಸಂದೇಶಗಳಲ್ಲಿ ಲಸಿಕೆಯ ದರವು ಸುಮಾರು 500 ರೂ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇದುವರೆಗೂ ಲಸಿಕೆಯ ದರ ಬಗ್ಗೆ ಆರೋಗ್ಯ ಸಚಿವಾಲಯ ಅಧಿಕೃತ ಮಾಹಿತಿ ನೀಡಿಲ್ಲ. ಯಾವುದೇ ಅಧಿಕೃತ ಖಾಸಗಿ ಕೋವಿಡ್ ಆರೊಗ್ಯ ಚಿಕಿತ್ಸಾಲಯದಲ್ಲಿ ಕೋವಿಡ್ ಲಸಿಕೆ ಪಡೆಯುವವರಿಗೆ ಪೂರ್ವ ನಿಗದಿತ ಶುಲ್ಕ ವಿಧಿಸಲಾಗುವುದು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

 ಬೆಂಗಳೂರಿನಲ್ಲಿ 10 ದಿನದಲ್ಲಿ ಕೊರೊನಾ ಏರಿಕೆ; 9 ಕಂಟೇನ್ಮೆಂಟ್ ಝೋನ್ ಘೋಷಣೆ ಬೆಂಗಳೂರಿನಲ್ಲಿ 10 ದಿನದಲ್ಲಿ ಕೊರೊನಾ ಏರಿಕೆ; 9 ಕಂಟೇನ್ಮೆಂಟ್ ಝೋನ್ ಘೋಷಣೆ

ಮಾರ್ಚ್ 1ರಿಂದ ಹೊಸ ಲಸಿಕೆ ನೀತಿ ಜಾರಿಯಾಗಲಿದೆ. ಲಸಿಕೆಯ ದರ ಅಂದಾಜು 500 ರೂ ಇರಲಿದೆ. ಪ್ರತಿ ದಿನ ಮೊದಲೇ ನೋಂದಾಯಿಸಿಕೊಂಡವರಿಗೆ ಶೇ 40ರಷ್ಟು ಮತ್ತು ಶೇ 60ರಷ್ಟು ಮಂದಿಗೆ ನೇರವಾಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತದೆ. ನೇರ ಭೇಟಿ ಮಾಡುವವರೂ ಅಲ್ಲಿ ನೋಂದಣಿ ಮಾಡಿಕೊಳ್ಳಬೇಕು. 60 ವರ್ಷ ದಾಟಿದವರು ತಮ್ಮ ವೋಟರ್ ಐಡಿ ಅಥವಾ ಪಾನ್ ಕಾರ್ಡ್ ತರಬೇಕು ಎಂದು ವಾಟ್ಸಾಪ್ ಸಂದೇಶದಲ್ಲಿ ಹೇಳಲಾಗಿದೆ. ಆದರೆ ಇದು ತಪ್ಪು ಮಾಹಿತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದೇ ಮೊದಲ ಬಾರಿಗೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಾಗುತ್ತಿವೆ. ಸರ್ಕಾರವು ಸೆರಮ್ ಸಂಸ್ಥೆಯಿಂದ ಕೋವಿಶೀಲ್ಡ್ ಲಸಿಕೆಯನ್ನು ತೆರಿಗೆ ಹೊರತುಪಡಿಸಿ ಡೋಸ್‌ಗೆ 200 ರೂ. ದಂತೆ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಡೋಸ್‌ಗೆ 295 ರೂ ದಂತೆ ಖರೀದಿಸಿದೆ.

English summary
The government said several misleading claimes are being circulated over the second phase of vaccination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X