ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಗಾಸಸ್ ಬೇಹುಗಾರಿಕೆ: ಕೇಂದ್ರ ಸರ್ಕಾರದ ಸ್ಪಷ್ಟನೆ ಏನು?

|
Google Oneindia Kannada News

ನವದೆಹಲಿ, ಜುಲೈ 19: ಭಾರತದಲ್ಲಿ ಪ್ರಭಾವಿಗಳನ್ನು ಗುರಿಯಾಗಿಸಿಕೊಂಡು ಬೇಹುಗಾರಿಗೆ ನಡೆಯುತ್ತಿದೆ ಎನ್ನುವ ಆರೋಪ ಆಧಾರರಹಿತ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಪತ್ರಕರ್ತರು, ರಾಜಕಾರಣಿಗಳು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಬೇಹುಗಾರಿಕೆ ನಡೆಸಲಾಗಿದೆ ಎಂಬ ವರದಿಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಿದೆ.
ಈಗಾಗಲೇ ಪ್ರಭಾವಿಗಳನ್ನು ಗುರಿಯಾಗಿಸಿಕೊಂಡು ಯಾವುದೇ ಬೇಹುಗಾರಿಕೆ ನಡೆಸಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದು, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಮಾಡಿದ ವರದಿಗಳೆಲ್ಲವೂ ಸುಳ್ಳು ಎಂದು ಹೇಳಿದೆ.

ಭಾರತದ ಪತ್ರಕರ್ತರು, ರಾಜಕಾರಣಿಗಳ ಮೇಲೆ ಇಸ್ರೇಲ್‌ನ ಗೂಢಚರ್ಯೆ ತಂತ್ರಾಂಶ ಭಾರತದ ಪತ್ರಕರ್ತರು, ರಾಜಕಾರಣಿಗಳ ಮೇಲೆ ಇಸ್ರೇಲ್‌ನ ಗೂಢಚರ್ಯೆ ತಂತ್ರಾಂಶ "ಪೆಗಾಸಸ್" ಕಣ್ಣು

ಮಾತನಾಡುವುದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಭೂತ ಹಕ್ಕಾಗಿದೆ. ಮುಕ್ತ ಸಂವಾದದ ಸಂಸ್ಕೃತಿಕ ಒತ್ತು ನೀಡಿ ನಾಗರಿಕರ ಗೌಪ್ಯತೆಯನ್ನು ಕಾಪಾಡುವ ಸರ್ಕಾರ ಬದ್ಧವಾಗಿದೆ ಎಂದು ಹೇಳಲಾಗಿದೆ.

Government Response On Pegasus Controversy

ಸರ್ಕಾರಿ ಸಂಸ್ಥೆಗಳಿಂದ ಯಾವುದೇ ಅನಧಿಕೃತ ಹಸ್ತಕ್ಷೇಪ ನಡೆದಿಲ್ಲ ಎಂದು ಹೇಳಲಾಗಿದ್ದು, ಸರ್ಕಾರಿ ಸಂಸ್ಥೆಗಳು ಪ್ರೋಟೊಕಾಲ್‌ಗಳನ್ನು ಹೊಂದಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಉನ್ನತ ಶ್ರೇಣಿಯ ಅಧಿಕಾರಿಗಳಿಂದ ಅನುಮೋದನೆ ಮತ್ತು ಮೇಲ್ವಿಚಾರಣೆ ಒಳಗೊಂಡ ಸ್ಪಷ್ಟವಾದಕಾರಣಗಳಿಗಾಗಿ ಮತ್ತು ರಾಷ್ಟ್ರೀಯಹಿತಾ ಸಕ್ತಿಗಾಗಿ ಮಾತ್ರ ಸರ್ಕಾರ ತಿಳಿಸಿದ್ದು, ಪ್ರತಿಬಂಧ, ಮೇಲ್ವಿಚಾರಣೆ ಪ್ರಕರಣಗಳನ್ನು ಪ್ರಾಧಿಕಾರ ಅಂಗೀಕರಿಸಿದೆ ಎಂದು ಹೇಳಲಾಗಿದೆ. ಪೆಗಾಸಸ್ ಸಾಫ್ಟ್‌ವೇರ್ ಬಳಸಿ ಹ್ಯಾಕ್ ಮಾಡಲಾಗಿದೆ ಎಂಬ ವರದಿಯನ್ನು ತಳ್ಳಿ ಹಾಕಿದ್ದು, ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ದಿ ಗಾರ್ಡಿಯನ್, ದಿ ವಾಷಿಂಗ್ಟನ್ ಪೋಸ್ಟ್‌ಮತ್ತು ಭಾರತದ ದಿ ವೈರ್ ಸೇರಿದಂತೆ 17 ಮಾಧ್ಯಮ ಸಂಸ್ಥೆಗಳ ಒಕ್ಕೂಟದಿಂದ ಪೆಗಾಸಸ್ ಸ್ಪೇವೇರ್ ಫೋನ್ ಹ್ಯಾಕಿಂಗ್ ಸಾಫ್ಟ್‌ವೇರ್ ವಿಶ್ವಾದ್ಯಂತ ಸಾವಿರಾರುಜನರನ್ನು ಗುರಿಯಾಗಿಸಲು ಬಳಕೆ ಮಾಡಲಾಗಿದೆ.

ಈ ಸಾಫ್ಟ್‌ವೇರ್ ಅನ್ನು ಇಸ್ರೇಲ್ ಮೂಲದ ಎನ್‌ಎಸ್‌ಒ ತಯಾರಿಸಿದ್ದು, ಇದನ್ನು ಸರ್ಕಾರಗಳಿಗೆ ಮಾತ್ರ ಸರಬರಾಜು ಮಾಡಲಾಗುತ್ತದೆ ಎಂದು ದೂರಲಾಗಿದೆ.

ಆದರೆ, ಇದನ್ನು ಅಲ್ಲಗಳೆದಿರುವ ಭಾರತ ಸರ್ಕಾರ, ನಿರ್ದಿಷ್ಟ ಜನರ ಮೇಲೆ ಸರ್ಕಾರದ ಯಾವುದೇ ಕಣ್ಗಾವಲು ಇಲ್ಲ, ಇಂತಹ ಹೇಳಿಕೆಗಳನ್ನು ದೃಢಪಡಿಸುವ ಆಧಾರಗಳಿಲ್ಲ ಎಂದು ಹೇಳಿದೆ.

English summary
The centre has responded to the allegations that phones numbers of Indian ministers, opposition leaders and journalists have been found on a leaked database of targets for hacking that used Israeli spyware 'Pegasus'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X