ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಸಂಸ್ಥೆ ಮಾರಾಟ, ಉದ್ಯೋಗ ನಾಶ, ಮೋದಿ ಸಾಧನೆ: ರಾಹುಲ್

|
Google Oneindia Kannada News

ನವದೆಹಲಿ,ಸೆ. 8: ಕೊರೊನಾವೈರಸ್ ಸೋಂಕಿನಿಂದ ಆರ್ಥಿಕ ಸಂಕಷ್ಟದಲ್ಲಿರುವ ದೇಶದ ಜನತೆಗೆ ಆರ್ಥಿಕ ಬೆಂಬಲ, ಸರ್ಕಾರಿ ಸಂಸ್ಥೆಗಳಿಗೆ ಬಲ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಸೃಷ್ಟಿಸಬೇಕಾಗಿರುವ ಮೋದಿ ಸರ್ಕಾರವು ಎಲ್ಲವನ್ನು ನಾಶ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Recommended Video

ಕೊನೆಗೂ ಡ್ರಗ್ ಕೇಸ್ ನಲ್ಲಿ ತಗಲಾಕೊಂಡ Sushant ಪ್ರೇಯಸಿ Rhea | Oneindia Kannada

ಭಾರತದ ಎರಡನೇ ಅತಿದೊಡ್ಡ ರೀಟೈಲರ್, ಮೂರನೇ ಅತಿದೊಡ್ಡ ರಿಫೈನರಿ ಸಂಸ್ಥೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಗೆ ಸೇರಿರುವ ಸುಮಾರು ಶೇ 52.98 ಪಾಲನ್ನು ಮಾರಾಟಕ್ಕೆ ಸರ್ಕಾರ ಮುಂದಾಗಿರುವುದನ್ನು ರಾಹುಲ್ ಟೀಕಿಸಿದ್ದಾರೆ.

PM ವಿರುದ್ಧ Comment,Dislike ಹೆಚ್ಚಿರುವ ವಿಡಿಯೋ ಡಿಲೀಟ್: ಹೀಗ್ಯಾಕೆ?PM ವಿರುದ್ಧ Comment,Dislike ಹೆಚ್ಚಿರುವ ವಿಡಿಯೋ ಡಿಲೀಟ್: ಹೀಗ್ಯಾಕೆ?

"ಅನಗತ್ಯ ಖಾಸಗೀಕರಣದ ಮೂಲಕ ದುರಂತಕ್ಕೆ ನಾಂದಿ ಹಾಡುತ್ತಿದ್ದಾರೆ. ಯುವ ಜನಾಂಗಕ್ಕೆ ಉದ್ಯೋಗ ಬೇಕಾಗಿದ್ದು, ಸರ್ಕಾರ ಉದ್ಯೋಗ ಸೃಷ್ಟಿ ಬದಲು ಉದ್ಯೋಗ ಅವಕಾಶವನ್ನು ನಾಶಪಡಿಸುತ್ತಿದೆ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಮಾರಾಟ ಮಾಡಿ ಖಾಸಗಿಯವರ ಕೈಗೆ ನೀಡುತ್ತಿದೆ'' ಎಂದು ರಾಹುಲ್ ಕಿಡಿಕಾರಿದ್ದಾರೆ.

Government privatising PSUs, destroying jobs: Rahul Gandhi

ಎಲ್ ಐಸಿ ಪಾಲು ಮಾರಾಟ
ಜೀವ ವಿಮಾ ನಿಗಮ(ಎಲ್ ಐಸಿ) ಕ್ಕೆ ಸೇರಿದ ಶೇ 25ರಷ್ಟು ಷೇರನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿರುವ ವರದಿ ಬಂದಿದೆ. ಸರ್ಕಾರದ ಕ್ರಮವನ್ನು ಖಂಡಿಸಿ ರಾಹುಲ್ ಟ್ವೀಟ್ ಮಾಡಿದ್ದಾರೆ.

ಮೋದಿ ಅವ್ರೇ ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡುವ ಅಭಿಯಾನ ನಡೆಸುತ್ತಿದ್ದೀರಾ, ಸ್ವಯಂ ಅಪರಾಧದಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ಮುಚ್ಚಿ ಹಾಕಲು ಸರ್ಕಾರದ ಆಸ್ತಿಯನ್ನು ಒಂದೊಂದಾಗಿ ಮಾರಾಟ ಮಾಡಲಾಗುತ್ತಿದೆ. ಇದು ನಾಚಿಕೆಗೇಡಿನ ಕ್ರಮ ಎಂದು ಕಿಡಿಕಾರಿದ್ದಾರೆ.

English summary
Congress leader Rahul Gandhi on September 7 accused the government of privatising Public Sector Units (PSUs) and destroying jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X