ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆಟ್ ಫ್ಲಿಕ್ಸ್, ಅಮೆಜಾನ್ ವಿಡಿಯೋ ನಿಯಂತ್ರಣಕ್ಕೆ ನಿಯಮ ರೂಪಿಸಲು ಚಿಂತನೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 3: ನಕಲಿ ಸುದ್ದಿಯು ಪೇಯ್ದ್ ನ್ಯೂಸ್ ಗಳಿಗಿಂತ ಹೆಚ್ಚು ಅಪಾಯಕಾರಿ. ಇದರ ವಿರುದ್ಧ ಸರ್ಕಾರ ಹಾಗೂ ಮಾಧ್ಯಮ ಒಟ್ಟಾಗಿ ಹೋರಾಡಬೇಕಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಅಭಿಪ್ರಾಯ ಪಟ್ಟಿದ್ದಾರೆ.

ಮಾಧ್ಯಮಗಳ ಸ್ವಾತಂತ್ರ್ಯ ಕಡಿತಗೊಳಿಸಲು ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಆದರೆ ಓವರ್ ದ ಟಾಪ್ ಪ್ಲಾಟ್ ಫಾರ್ಮ್ಸ್ (ಒಟಿಟಿ)ಗೆ ಕೆಲ ನಿಯಮಗಳನ್ನು ತರಬೇಕಿದೆ. ಮುದ್ರಣ, ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಸಿನಿಮಾಗಳಿಗೂ ತರಬೇಕಿದೆ ಎಂದು ಅವರು ಹೇಳಿದ್ದಾರೆ.

ಬಹು ನಿರೀಕ್ಷಿತ ಸೇಕ್ರೆಡ್ ಗೇಮ್ಸ್ 2 ಲೀಕ್; ನೆಟ್ ಫ್ಲಿಕ್ಸ್ ಗೆ ಭಾರಿ ನಷ್ಟಬಹು ನಿರೀಕ್ಷಿತ ಸೇಕ್ರೆಡ್ ಗೇಮ್ಸ್ 2 ಲೀಕ್; ನೆಟ್ ಫ್ಲಿಕ್ಸ್ ಗೆ ಭಾರಿ ನಷ್ಟ

ಒಟಿಟಿ ಪ್ಲಾಟ್ ಫಾರ್ಮ್ಸ್ ನಲ್ಲಿ ಸುದ್ದಿ ಪೋರ್ಟಲ್, ಜತೆಗೆ ಹಾಟ್ ಸ್ಟಾರ್, ನೆಟ್ ಫ್ಲಿಕ್ಸ್ ಮತ್ತು ಅಮೆಜಾನ್ ವಿಡಿಯೋ ಕೂಡ ಸೇರಿಸಲು ಚಿಂತನೆ ನಡೆಸಲಾಗಿದೆ. ಹಲವು ಮುಖ್ಯವಾಹಿನಿ ಮಾಧ್ಯಮಗಳು ಈ ಬಗ್ಗೆ ಸರ್ಕಾರವನ್ನು ಸಂಪರ್ಕಿಸಿ, ಮಾತನಾಡಿವೆ ಎಂದಿದ್ದಾರೆ.

Netflix

ಒಟಿಟಿಯಲ್ಲಿ ಬರುತ್ತಿರುವ ಸಾಮಾನ್ಯ ಸಿನಿಮಾಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಸಲಹೆಗಳನ್ನು ಕೇಳಲಾಗಿದೆ. ಇವುಗಳನ್ನೆಲ್ಲ ನಿರ್ವಹಿಸುವುದು ಹೇಗೆ. ಒಟಿಟಿಯಲ್ಲಿ ಬರುವುದಕ್ಕೆ ಸರ್ಟಿಫಿಕೇಷನ್ ಸಂಸ್ಥೆ ಇಲ್ಲ. ಅದೇ ರೀತಿ ನ್ಯೂಸ್ ಪೋರ್ಟಲ್ ಗಳಿಗೂ ಇಲ್ಲ ಎಂದು ಅವರು ಹೇಳಿದ್ದಾರೆ.

ಈ ವಿಷಯದ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿಲ್ಲ ಎಂದು ಕೂಡ ಜಾವಡೇಕರ್ ಹೇಳಿದ್ದಾರೆ.

English summary
Union government planning to regulate OTT platforms like Netflix, Amazon video etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X