ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ ಲೈನ್ ಮಾಧ್ಯಮಕ್ಕೆ ಮೂಗುದಾರ ಹಾಕಲು ಮುಂದಾದ ಮಾಹಿತಿ, ಪ್ರಸಾರ ಸಚಿವಾಲಯ

|
Google Oneindia Kannada News

ನವದೆಹಲಿ, ನವೆಂಬರ್ 11: ಆನ್ ಲೈನ್ ಸುದ್ದಿ ಮಾಧ್ಯಮಗಳನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ತರಲು ಸರ್ಕಾರ ಆದೇಶ ಹೊರಡಿಸಿದೆ.

ಡಿಜಿಟಲ್ ಅಥವಾ ಆನ್ ಲೈನ್ ಮಾಧ್ಯಮ, ಆನ್ ಲೈನ್ ಚಲನಚಿತ್ರ, ಆನ್ ಲೈನ್ ಆಡಿಯೋ, ದೃಶ್ಯ ಮಾಧ್ಯಮ, ಆನ್ ಲೈನ್ ಸುದ್ದಿ, ಪ್ರಚಲಿತ ವಿದ್ಯಮಾನಗಳನ್ನು ಬಿತ್ತರಿಸುವ ಯಾವುದೇ ಆನ್ ಲೈನ್ ಮಾಧ್ಯಮವನ್ನು ಮಾಹಿತಿ ಹಾಗೂ ಪ್ರಸಾರ ಸಚಿವಾಲಯದಡಿಗೆ ತರುವ ಆದೇಶವನ್ನು ಸರ್ಕಾರ ಹೊರಡಿಸಿದೆ.

ಡಿಜಿಟಲ್ ಮಾಧ್ಯಮವನ್ನು ನಿಯಂತ್ರಿಸಲು ಯಾವುದೇ ನಿಯಮ, ಕಾನೂನು ಅಥವಾ ಸ್ವಾಯತ್ತ ಸರ್ಕಾರ ಸಂಸ್ಥೆಯು ಇಲ್ಲದಿರುವ ಹಿನ್ನೆಲೆಯಲ್ಲಿ, ಈ ಆದೇಶವನ್ನು ಹೊರಡಿಸಲಾಗಿದೆ. ಈ ಆದೇಶವು ಆನ್ ಲೈನ್ ನಲ್ಲಿ ತೆರೆ ಕಾಣುವ ಚಲನಚಿತ್ರಗಳು, ಆಡಿಯೋ ವಿಷುಯಲ್ ಕಾರ್ಯಕ್ರಮಗಳಿಗೂ ಅನ್ವಯಿಸುತ್ತದೆ ಎಂದು ತಿಳಿಸಲಾಗಿದೆ.

ಆನ್ ಲೈನ್ ಮಾಧ್ಯಮಕ್ಕೆ ಕಡಿವಾಣ ಹಾಕಲು ಹೊಸ ಸಮಿತಿಆನ್ ಲೈನ್ ಮಾಧ್ಯಮಕ್ಕೆ ಕಡಿವಾಣ ಹಾಕಲು ಹೊಸ ಸಮಿತಿ

Government Order To Bring Online News Portals Under Information And Broadcasting Ministry

ಕಳೆದ ವರ್ಷ, ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ಮಾಧ್ಯಮದ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯಾವುದೇ ಕ್ರಮವನ್ನು ಸರ್ಕಾರ ತೆಗೆದುಕೊಳ್ಳುವುದಿಲ್ಲ ಎಂದಿದ್ದರು. ಜೊತೆಗೆ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ಇರುವಂತೆ ಆನ್ ಲೈನ್ ಮಾಧ್ಯಮಕ್ಕೂ ನಿಯಂತ್ರಣದ ಅವಶ್ಯಕತೆ ಇದೆ ಎಂದಿದ್ದರು.

English summary
The government has issued an order bringing online news portals under the Ministry of Information and Broadcasting,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X