ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್‌ಗೆ ಕೊನೆಯ ಎಚ್ಚರಿಕೆ ನೋಟಿಸ್ ನೀಡಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಜೂನ್ 05: ನೂತನ ಮಾಹಿತಿ ತಂತ್ರಜ್ಞಾನ ನಿಯಮ ಪಾಲಿಸದ ಟ್ವಿಟ್ಟರ್ ಇಂಡಿಯಾಗೆ ಕೇಂದ್ರ ಸರ್ಕಾರವು ಕೊನೆಯ ಎಚ್ಚರಿಕೆಯ ಸಂದೇಶವನ್ನು ಕಳುಹಿಸಿದೆ.

ಕೇಂದ್ರ ಸರ್ಕಾರವು ಮೇ 26ರಿಂದ ಅನ್ವಯವಾಗುವಂತೆ ರೂಪಿಸಿರುವ ನೂತನ ಐಟಿ ನೀತಿಯನ್ನು ಟ್ವಿಟ್ಟರ್ ಕೂಡಲೇ ಪಾಲಿಸಬೇಕು, ಇಲ್ಲವಾದಲ್ಲಿ ನೂತನ ಕಾಯ್ದೆ ಪ್ರಕಾರ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಹೇಳಿದೆ.

ಬಳಕೆದಾರರು ವಾಟ್ಸಾಪ್ ನಿಲ್ಲಿಸಲು ಸ್ವತಂತ್ರರು: ದೆಹಲಿ ಹೈಕೋರ್ಟ್‌ಗೆ ಅಫಿಡವಿಟ್ಬಳಕೆದಾರರು ವಾಟ್ಸಾಪ್ ನಿಲ್ಲಿಸಲು ಸ್ವತಂತ್ರರು: ದೆಹಲಿ ಹೈಕೋರ್ಟ್‌ಗೆ ಅಫಿಡವಿಟ್

ನೂತನ ಕಾಯ್ದೆಯ ಪ್ರಕಾರ ಟ್ವಿಟ್ಟರ್ ಸಂಸ್ಥೆಯು ನೂತನ ಅನುಸರಣ ಅಧಿಕಾರಿಯನ್ನು ನೇಮಿಸಬೇಕಿತ್ತು, ಆದರೆ ಟ್ವಿಟ್ಟರ್ ಉಲ್ಲೇಖಿಸಿರುವ ಮುಖ್ಯ ಅನುಸರಣ ಅಧಿಕಾರಿ ಸಂಸ್ಥೆಯ ಉದ್ಯೋಗಿಯೇ ಅಲ್ಲ. ಹಾಗೆಯೇ ಅವರು ಅಲ್ಲಿ ನೀಡಲಾಗಿರುವ ಕಚೇರಿ ವಿಳಾಸ ಕೂಡ ಟ್ವಿಟ್ಟರ್ ಸಂಸ್ಥೆಯದ್ದಲ್ಲ. ಇದು ಕಾಯ್ದೆಗೆ ವಿರುದ್ಧವಾಗಿದೆ.

Government Of India Gives Final Notice To Twitter For Compliance With New IT Rules

ಟ್ವಿಟ್ಟರ್ ಸಂಸ್ಥೆ ಕಡ್ಡಾಯವಾಗಿ ಮುಖ್ಯ ಅನುಸರಿಣ ಅಧಿಕಾರಿಯನ್ನು ನೇಮಿಸಬೇಕು ಅದೂ ಟ್ವಿಟ್ಟರ್ ಉದ್ಯೋಗಿಯೇ ಆಗಿರಬೇಕು. ಕಳೆದ ಎರಡು ವಾರಗಳಿಂದ ಟ್ವಿಟ್ಟರ್ ಹಾಗೂ ಕೇಂದ್ರ ಸರ್ಕಾರದ ನಡುವೆ ಸಾಕಷ್ಟು ವಾದ-ವಿವಾದಗಳು ನಡೆಯುತ್ತಲೇ ಇದೆ. ಕೇಂದ್ರ ಸರ್ಕಾರದ ಈ ನೋಟಿಸ್ ಈ ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡುವ ಲಕ್ಷಣ ಕಾಣಿಸುತ್ತಿದೆ.

ಈಗಾಗಲೇ ಈ ವಿಚಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ನಿಯಮ ಪಾಲಿಸದ ಟ್ವಿಟ್ಟರ್ ವಿರುದ್ಧ ಹೈಕೋರ್ಟ್‌ನಿಂದಲೂ ನೋಟಿಸ್ ಜಾರಿಯಾಗಿದೆ, ಇನ್ನೊಂದೆಡೆ ಸರ್ಕಾರದ ವಿರುದ್ಧ ಟ್ವಿಟ್ಟರ್ ಕೂಡ ಕಾನೂನು ಸಮರ ಸಾರುವ ಸಾಧ್ಯತೆ ಇದೆ. ಈಗಾಗಲೇ ನೂತನ ಐಟಿ ನೀತಿ ವಿರುದ್ಧ ವಾಟ್ಸಾಪ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ.

English summary
Government has sent a final notice to Twitter for compliance with the new IT rules. The Ministry of Electronics and Information Technology (MeitY) in a notice said that the new intermediary guideline rules have become effective from May 26, 2021 and it has been more than a week but Twitter has refused to comply with the provisions of these rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X