ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರ ವಾಟ್ಸಾಪ್‌ ಕರೆಗಳನ್ನು ರೆಕಾರ್ಡ್ ಮಾಡುತ್ತಾ? ಗೊಂದಲಗಳಿಗೆ ಇಲ್ಲಿದೆ ಉತ್ತರ

|
Google Oneindia Kannada News

ನವದೆಹಲಿ, ಮೇ 27: ಸರ್ಕಾರ ಹೊಸ ಐಟಿ ನಿಯಮಗಳನ್ನು ಜಾರಿಗೆ ತರುತ್ತಿರುವ ಹಿನ್ನೆಲೆಯಲ್ಲಿ ಅನೇಕ ಗೊಂದಲಗಳು ಸಾಮಾನ್ಯರಲ್ಲಿದೆ. ನಿತ್ಯ ಜೀವನದ ಭಾಗವೇ ಆಗಿರುವ ಸಾಮಾಜಿಕ ಜಾಲತಾಣಗಳು ಬ್ಯಾನ್ ಆಗುತ್ತಾ? ವಾಟ್ಸಾಪ್‌ ಬಳಕೆಯನ್ನು ನಿಷೇಧಿಸಲಾಗುತ್ತದೆಯಾ ಎಂಬ ಪ್ರಶ್ನೆಗಳು ಎದ್ದಿವೆ. ಇದರ ಜೊತೆಗೆ ಈಗ ವಾಟ್ಸಾಪ್‌ನ ಕರೆಗಳನ್ನು ಸರ್ಕಾರ ರೆಕಾರ್ಡ್ ಮಾಡಿಕೊಳ್ಳುತ್ತದೆ ಎಂಬ ಸಂದೇಶಗಳು ಹರಿದಾಡುತ್ತಿರುವುದು ವಾಟ್ಸ್‌ಆಪ್ ಬಳಕೆದಾರರ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದೆ.

Recommended Video

ಸರ್ಕಾರದ ಈ ನಿರ್ಧಾರಕ್ಕೆ ಕಾರಣ ಏನು? | Oneindia Kannada

ಹೊಸ ನಿಯಮಗಳ ಪ್ರಕಾರ ವಾಟ್ಸಾಪ್‌ನ ಎಲ್ಲಾ ಕರೆಗಳನ್ನು ಸರ್ಕಾರ ರೆಕಾರ್ಡ್ ಮಾಡಿಕೊಳ್ಳುತ್ತದೆ ಮತ್ತು ಸಚಿವಾಲಯದ ವ್ಯವಸ್ಥೆಗೆ ಬಳಕೆದಾರರ ಮೊಬೈಲ್ ಸಂಪರ್ಕವನ್ನು ಹೊಂದಿರುತ್ತದೆ ಎಂಬಂತಾ ವಿಚಾರಗಳು ಹೀಗೆ ಹರಿದಾಡುತ್ತಿರುವ ಸಂದೇಶದಲ್ಲಿದೆ.

ಇಷ್ಟು ಮಾತ್ರವಲ್ಲದೆ ವಾಟ್ಸಾಪ್‌ ಸಂದೇಶ ಮೂರು 'ಟಿಕ್' ಗುರುತು ಹೊಂದಿದ್ದರೆ ಸರ್ಕಾರ ನಿಮ್ಮ ಸಂದೇಶವನ್ನು ಗಮನಿಸಿದೆ. ಎರಡು ನೀಲಿ ಹಾಗೂ ಒಂದು ಕೆಂಪು ಟಿಕ್ ಗುರುತು ಇದ್ದರೆ ಸರ್ಕಾರ ನಿಮ್ಮ ಸಂದೇಶದ ಮಾಹಿತಿಯನ್ನು ಪರಿಶೀಲಿಸುತ್ತಿದೆ ಎಂದು ಈ ಸಂದೇಶ ಹೇಳುತ್ತಿದೆ. ಕೊನೆಯದಾಗಿ ಮೂರು ಕೆಂಪು ಟಿಕ್ ಗುರುತುಗಳು ಇದ್ದರೆ ಸರ್ಕಾರ ವಿಚಾರಣೆಯನ್ನು ಆರಂಭಿಸಿದೆ ಎಂದು ಈ ಸಂದೇಶದಲ್ಲಿ ಹೇಳಲಾಗಿದೆ.

Government not recording WhatsApp calls and not introduced new tick system for messages

ಆದರೆ ಈ ಸಂದೇಶದಲ್ಲಿ ಹರಿದಾಡುತ್ತಿರುವ ಈ ಮಾಹಿತಿಗಳು ನಿಜವಲ್ಲ. ಇವುಗಳಲ್ಲಿ ಯಾವುದನ್ನು ಕೂಡ ಸರ್ಕಾರ ತನ್ನ ನಿಯಮಗಳಲ್ಲಿ ತಿಳಿಸಿಲ್ಲ. ಹೊಸ ನಿಯಮಗಳು ಬಳಕೆದಾರರ ಗೌಪ್ಯತೆಗೆ ಪರಿಣಾಮವನ್ನು ಬೀರುತ್ತದೆ ಎಂದು ಸರ್ಕಾರ ನ್ಯಾಯಾಲಯದ ಮೆಟ್ಟಿಲೇರಿದ್ದರೆ, ಸರ್ಕಾರ ದೇಶದ ಸಾರ್ವಭೌಮತ್ವಕ್ಕೆ ಬೆದರಿಕೆಯನ್ನು ಒಡ್ಡುವಂತಾ ಸಂದೇಶಗಳು ಇದ್ದಾಗ ಅಂತಾ ಸಂದೇಶಗಳ ಮೂಲವನ್ನು ಚಾಟ್ ಫೋರಂನಿಂದ ಪಡೆಯುವುದಾಗಿ ಸರ್ಕಾರ ಹೇಳಿದೆ.

ಸಾಮಾಜಿಕ ಜಾಮತಾಣಗಳ ವಿಚಾರವಾಗಿ ಸರ್ಕಾರ ಎಲ್ಲಾ ಸಾಮಾಜಿಕ ಜಾಲತಾಣ ವೇದಿಕೆಗಳಿಗೆ ಬರೆದ ಪತ್ರದಲ್ಲಿ, ಹೊಸ ಸಾಮಾಜಿಕ ಮಾಧ್ಯಮ ನಿಯಮಗಳ ಅಡಿಯಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಂದ ನೇಮಕಗೊಂಡಿರುವ ಚೀಫ್ ಕಾಂಪ್ಲಿಯೆನ್ಸ್ ಆಫಿಸರ್, ರೆಸಿಡೆಂಟ್ ಗ್ರಿಯೇವೆನ್ಸ್ ಆಫಿಸರ್ ಮತ್ತು ನೋಡಲ್ ಕಾಂಟಾಕ್ಟ್ ಪರ್ಸನ್ ಇವರುಗಳ ವಿವರಗಳನ್ನು ಮತ್ತು ಸಂಪರ್ಕ ಮಾಹಿತಿಯನ್ನು ಐಟಿ ಸಚಿವಾಲಯ ಕೋರಿದೆ. ಆದರೆ ಕರೆಗಳನ್ನು ರೆಕಾರ್ಡ್ ಮಾಡಿಕೊಳ್ಳುವ ಬಗ್ಗೆ ಯಾವುದೇ ಉಲ್ಲೇಖಗಳು ಈ ಹೊಸ ನಿಯಮದಲ್ಲಿ ಇಲ್ಲ. ಹೊಸ ಟಿಕ್ ಗುರುತುಗಳ ಬಗ್ಗೆಯೂ ಯಾವುದೇ ಉಲ್ಲೇಖಗಳು ಇಲ್ಲ. ಈಗ ಇರುವ ಟಿಕ್ ಗುರುತುಗಳು ಸಂದೇಶಗಳನ್ನು ಓದಿರುವ ಮಾಹಿತಿಯನ್ನು ನೀಡುತ್ತದೆ. ಹಾಗಾಗಿ ಈ ರೋತಿಯ ಸಂದೇಶಗಳಿಗೆ ಹೆಚ್ಚಿನ ಒತ್ತು ನೀಡುವ ಅಗತ್ಯಗಳು ಇಲ್ಲ.

English summary
Government not recording WhatsApp calls and not introduced new tick system for messages. full information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X