ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಮಾಜಿಕ ಜಾಲತಾಣ ನಿಯಂತ್ರಣಕ್ಕೆ ಕೇಂದ್ರದ ಹೊಸ ಮಾರ್ಗಸೂಚಿ

|
Google Oneindia Kannada News

ನವದೆಹಲಿ, ಫೆಬ್ರವರಿ.25: ಸಾಮಾಜಿಕ ಜಾಲತಾಣಗಳನ್ನು ನಕಲಿ ಸುದ್ದಿಗಳನ್ನು ಹರಡುವ ವೇದಿಕೆಗಳನ್ನಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಆತಂಕ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಸೋಷಿಯಲ್ ಮೀಡಿಯಾದ ದುರುಪಯೋಗ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ಮಾರ್ಗಸೂಚಿಯನ್ನು ಜಾರಿಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಾಹಿತಿ ತಂತ್ರಜ್ಞಾನ ನಿಯಮ 2021ರ (ಮಧ್ಯವರ್ತಿಗಳಿಗೆ ಮಾರ್ಗಸೂಚಿ ಮತ್ತು ಡಿಜಿಟಲ್ ಮೀಡಿಯಾದ ಸಿದ್ಧಾಂತ) ಮೂಲಕ ಡಿಜಿಟಲ್ ಸುದ್ದಿ ಮಾಧ್ಯಮಗಳು, ಓಟಿಟಿ ಹಾಗೂ ಸಾಮಾಜಿಕ ಜಾಲತಾಣಗಳನ್ನು ಹೇಗೆ ನಿಯಂತ್ರಿಸುವುದು ಎಂಬುದನ್ನು ಸೂಚಿಸುತ್ತಿದೆ.

ಹೊಸ ಕಾನೂನು: ಮಾಧ್ಯಮ ಸಂಸ್ಥೆಗಳಿಗೆ ಗೂಗಲ್, ಫೇಸ್‌ಬುಕ್‌ ಹಣ ನೀಡಬೇಕುಹೊಸ ಕಾನೂನು: ಮಾಧ್ಯಮ ಸಂಸ್ಥೆಗಳಿಗೆ ಗೂಗಲ್, ಫೇಸ್‌ಬುಕ್‌ ಹಣ ನೀಡಬೇಕು

ದೇಶದ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿ, ತಪ್ಪು ಸಂದೇಶಗಳ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೊಸ ನಿಯಮ ಮತ್ತು ನಿಯಂತ್ರಕಗಳನ್ನು ರೂಪಿಸಿದೆ. ಈ ನಿಯಮಗಳಲ್ಲಿ ಏನೆಲ್ಲ ಉಲ್ಲೇಖವಾಗಿದೆ. ಹೊಸ ನಿಯಮಗಳಲ್ಲಿ ಅಡಕವಾಗಿರುವ ಪ್ರಮುಖ ಅಂಶಗಳ ಕುರಿತು ಒಂದು ವರದಿ ಇಲ್ಲಿದೆ ನೋಡಿ.

Government Moves To Regulate Digital Content, Streaming With New Rules

ಸಾಮಾಜಿಕ ಜಾಲತಾಣಗಳಿಗೆ ಸರ್ಕಾರದ ಹೊಸ ಮಾರ್ಗಸೂಚಿ:

- ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕಾಗಿದ್ದು, ಅವರು 24 ಗಂಟೆಗಳಲ್ಲಿ ದೂರುಗಳನ್ನು ದಾಖಲಿಸಬೇಕು.

- ಯಾವುದೇ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮತ್ತು ಸಂದೇಶಗಳ ಮೂಲವನ್ನು ನ್ಯಾಯಾಲಯ ಮತ್ತು ಸರ್ಕಾರಿ ಪ್ರಾಧಿಕಾರಗಳು ಪ್ರಶ್ನಿಸಿದಾಗ ಸಾಮಾಜಿಕ ಜಾಲತಾಣಗಳು ಅದನ್ನು ಬಹಿರಂಗಪಡಿಸುವುದು ಅಗತ್ಯವಾಗಿದೆ.

- ಇದು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ವಿದೇಶಗಳೊಂದಿಗಿನ ಬಾಂಧವ್ಯ, ರಾಜ್ಯದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ, ಅತ್ಯಾಚಾರ, ಲೈಂಗಿಕ ವಿಷಯ ಸೇರಿದಂತೆ ಇತ್ಯಾದಿ ವಿಚಾರಗಳಲ್ಲಿ ಸ್ಪಷ್ಟವಾಗಿರಬೇಕು.

- ಮಹಿಳೆಯರು - ವ್ಯಕ್ತಿಗಳ ಖಾಸಗಿ ಭಾಗಗಳು ಅಥವಾ ನಗ್ನತೆ ಅಥವಾ ಲೈಂಗಿಕ ಕ್ರಿಯೆ ಇತ್ಯಾದಿಗಳನ್ನು ಬಹಿರಂಗಪಡಿಸಿದರೆ, ದೂರು ನೀಡಿದ 24 ಗಂಟೆಗಳ ಒಳಗೆ ಅದನ್ನು ತೆಗೆದುಹಾಕಬೇಕಾಗುತ್ತದೆ. ಮಹಿಳೆಯರ ಘನತೆ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಈ ನಿಯಮವನ್ನು ರೂಪಿಸಲಾಗಿದೆ.

- ಸಾಮಾಜಿಕ ಜಾಲತಾಣಗಳ ಮಧ್ಯವರ್ತಿಗಳಿಗೆ ಬಳಕೆದಾರರ ಸಂಖ್ಯೆಯನ್ನು ಆದಷ್ಟು ಬೇಗ ನೀಡುತ್ತೇವೆ. ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಹೊಂದಿರುವ ಅಧಿಕಾರಿಗಳಿಗೆ ದೂರು ನೀಡುವುದರ ಜೊತೆಗೆ ಮಧ್ಯವರ್ತಿ ಅಧಿಕಾರಿಯ ಹೆಸರನ್ನು ಉಲ್ಲೇಖಿಸಬೇಕು. 24 ಗಂಟೆಗಳಲ್ಲಿ ದೂರು ನೋಂದಾಯಿಸುವ ಅಧಿಕಾರಿ 15 ದಿನಗಳಲ್ಲಿ ಅವುಗಳ ವಿಲೇವಾರಿ ಮಾಡಬೇಕು.

- ಒಟಿಟಿ ಮತ್ತು ಡಿಜಿಟಲ್ ನ್ಯೂಸ್ ಮಾಧ್ಯಮಗಳು ತಮ್ಮ ವಿವರಗಳನ್ನು ಬಹಿರಂಗಪಡಿಸಬೇಕಾಗುತ್ತದೆ. ಸರ್ಕಾರವು ನೋಂದಣಿಯನ್ನು ಕಡ್ಡಾಯಗೊಳಿಸುತ್ತಿಲ್ಲ, ಆದರೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ.

- OTT ಗಾಗಿ ವಿಷಯ -13 ಪ್ಲಸ್, 16 ಜೊತೆಗೆ ಎ ವರ್ಗಗಳ ಸ್ವಯಂ-ವರ್ಗೀಕರಣ ಇರಬೇಕು. ಮಕ್ಕಳು ನೋಡುವುದಕ್ಕೆ ಆಗದ ರೀತಿಯಲ್ಲಿ ಯಾಂತ್ರಿಕ ವ್ಯವಸ್ಥೆಯನ್ನು ಪೋಷಕರು ಅನುಸರಣೆ ಮಾಡುವುದು.

English summary
Government Moves To Regulate Digital Content, Streaming With New Rules .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X