ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಪೋರ್ಟ್‌ನಲ್ಲಿ 'ಡ್ಯೂಟಿ ಫ್ರೀ' ಶಾಪಿಂಗ್‌ ಮಾಡೋರಿಗೆ ಶಾಕಿಂಗ್ ಸುದ್ದಿ

|
Google Oneindia Kannada News

Recommended Video

ನಿಯಮ ಮೀರಿ ಶಾಪಿಂಗ್ ಮಾಡಿದ್ರೆ ಟ್ಯಾಕ್ಸ್ | Airport | Dutyfree | Tax | Oneindia Kannada

ಬೆಂಗಳೂರು, ಜನವರಿ 21: ದೇಶದ ವಿಮಾನ ನಿಲ್ದಾಣಗಳಲ್ಲಿ 'ಡ್ಯೂಟಿ ಫ್ರೀ' ಶಾಪಿಂಗ್ ನಡೆಸುವವರಿಗೆ ಕೇಂದ್ರ ಸರ್ಕಾರ ಶಾಕಿಂಗ್ ನ್ಯೂಸ್ ನೀಡಲು ಸಿದ್ಧವಾಗುತ್ತಿದೆ.

ಮದ್ಯ, ಸಿಗರೇಟ್ ಸೇರಿ ಸುಂಕ ರಹಿತ ವಸ್ತುಗಳ ಖರೀದಿ ಮೇಲೆ ಮಿತಿ ಹೇರಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ.ಕೇಂದ್ರ ವಾಣಿಜ್ಯ ಸಚಿವಾಲಯವು ಸಿದ್ಧಪಡಿಸುತ್ತಿರುವ ನೂತನ ನಿಯಮದ ಕರಡು ಪ್ರತಿ ಪ್ರಕಾರ ವಿದೇಶದಿಂದ ಆಗಮಸಿದ ಓರ್ವ ಪ್ರಜೆಯು ವಿಮಾನ ನಿಲ್ದಾಣದಲ್ಲಿರುವ ಡ್ಯೂಟಿ ಫ್ರೀ ಅಂಗಡಿಯಲ್ಲಿ ಇನ್ನುಮುಂದೆ ಕೇವಲ ಒಂದು ಬಾಟಲಿ ಮದ್ಯ, ನೂರು ಸಿಗರೇಟ್‌ಗಳನ್ನು ಮಾತ್ರ ಕೊಳ್ಳಬಹುದಾಗಿದೆ. ಈ ಮಿತಿ ನಂತರದ ಖರೀದಿಗೆ ನಿಯಮಾನುಸಾರ ಸುಂಕವನ್ನು ಭರಿಸಬೇಕಾಗುತ್ತದೆ.

ರನ್‌ ವೇ ಬಿಟ್ಟು ವಿಮಾನ ಓಡಿಸಿ, ಮನೆಗೆ ಹೋದ ಪೈಲಟ್‌ಗಳು!ರನ್‌ ವೇ ಬಿಟ್ಟು ವಿಮಾನ ಓಡಿಸಿ, ಮನೆಗೆ ಹೋದ ಪೈಲಟ್‌ಗಳು!

ಒಂದು ಮದ್ಯದ ಬಾಟಲಿ ಮತ್ತು ನೂರು ಸಿಗರೇಟ್‌ಗಳಿಗೆ ಯಾವುದೇ ಮಿತಿ ಹೇರಲಾಗುವುದಿಲ್ಲ.ಸಾಮಾನ್ಯವಾಗಿ ವಿದೇಶದಿಂದ ಆಗಮಿಸುತ್ತಿದ್ದಂತೆ ಡ್ಯೂಟಿ ಫ್ರೀ ಅಂಗಡಿಗಳಲ್ಲಿ ಕೆಲ ವಸ್ತುಗಳ ಖರೀದಿಸಿ ಆಪ್ತರಿಗೆ ಉಡುಗೊರೆ ರೂಪದಲ್ಲಿ ನೀಡಲಾಗುತ್ತಿತ್ತು.

Government Moves Limit Duty Free Shopping In Airport

ಆಯಾ ಪ್ರದೇಶದಲ್ಲಿನ ಅಮೂಲ್ಯ ವಸ್ತುಗಳು ಅಥವಾ ಮದ್ಯಗಳನ್ನು ಈ ಅಂಗಡಿಗಳಲ್ಲಿ ಪ್ರಯಾಣಿಕರು ಖರೀದಿಸುತ್ತಿದ್ದರು. ಮೂಲಗಳ ಪ್ರಕಾರ ಮದ್ಯ ಹಾಗೂ ಸಿಗರೇಟ್ ಜೊತೆಗೆ ಇತರೆ ಉಡುಗೊರೆ ವಸ್ತುಗಳ ಮೇಲೂ ಮಿತಿ ಹೇರುವ ಸಾಧ್ಯತೆ ಇದೆ. ಓರ್ವ ವ್ಯಕ್ತಿ 50 ಸಾವಿರ ರೂ. ವರಗಿನ ವಸ್ತುಗಳನ್ನು ಮಾತ್ರ ಸುಂಕರಹಿತವಾಗಿ ಖರೀದಿಸಬಹುದಾಗಿದೆ.

English summary
Central Government Moves Limit Duty Free Shopping In Airport. The Commerce and industry ministry has proposed to reduce the number of alcoholbottles and cigarette packets that a passenger can buy at duty-free outlets when returning from an overseas trip.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X