ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನಯಾನಿಗಳಿಗೆ 10 ದಿನಗಳಲ್ಲಿ ಶುಭ ಸುದ್ದಿ ಸಿಗಲಿದೆ

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 25: ಭಾರತದ ಆಗಸದಲ್ಲಿ ಪ್ರಯಾಣಿಸುವ ವಿಮಾನಯಾನಿಗಳಿಗೆ 'ಹತ್ತು ದಿನಗಳಲ್ಲಿ ಶುಭ ಸುದ್ದಿ' ಸಿಗಲಿದೆ ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ಆರ್ ಎನ್ ಚೌಬೇ ಘೋಷಿಸಿದ್ದಾರೆ.

ಭಾರತದ ವಾಯುಪ್ರದೇಶದಲ್ಲಿ ಹಾರಾಟದಲ್ಲಿರುವ ವೇಳೆ ಪ್ರಯಾಣಿಕರು ವಿಮಾನದೊಳಗೆ ವೈ-ಫೈ ಬಳಸಲು ಅವಕಾಶ ಇನ್ಮುಂದೆ ಸಿಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಕೆಲ ದಿನಗಳಲ್ಲೇ ಆದೇಶ ಪ್ರಕಟವಾಗಲಿದೆ ಎಂದು ಚೌಬೇ ಅವರು ಬುಧವಾರ ಹೇಳಿದರು.[ತುಂಡುಡುಗೆ ತೊಟ್ಟಿದ್ದಕ್ಕೆ ವಿಮಾನಕ್ಕೆ 'ನೋ' ಎಂಟ್ರಿ]

Government may soon allow Wi-Fi use on flights

ಸದ್ಯ ಭಾರತದ ವಾಯುಪ್ರದೇಶದಲ್ಲಿ ವಿಮಾನ ಹಾರಾಟ ಸಂದರ್ಭದಲ್ಲಿ ಇಂಟರ್ನೆಟ್ ಬಳಕೆ ಸಾಧ್ಯವಿಲ್ಲ. ಸುರಕ್ಷತಾ ನಿಯಮಗಳನ್ನು ಪಾಲಿಸಿ ಕೂಡಾ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಮೂಲಕ ಇಂಟರ್ನೆಟ್ ಬಳಕೆ ಮಾಡಲು ಸಾಧ್ಯವಾಗುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.[ಇನ್ಮುಂದೆ ಚೆಕ್ ಇನ್ ಬ್ಯಾಗೇಜ್ ನಿಮ್ಮ ಕೈ ಕಚ್ಚಲ್ಲ]

ಈ ಮೂಲಕ ವಾಯ್ಸ್ ಕಾಲ್ ಮಾಡಲು ಅಥವಾ ಸ್ವೀಕರಿಸಲು ಕೂಡಾ ಸಾಧ್ಯವಾಗಲಿದೆ. ಟೆಲಿಕಾಂ ಇಲಾಖೆ ಕಾರ್ಯದರ್ಶಿಗಳು ಈ ಬಗ್ಗೆ ಗಮನ ಹರಿಸಿದ್ದು, ಕ್ಯಾಬಿನೆಟ್ ಅನುಮತಿ ಇಲ್ಲದೆ ವ್ಯವಸ್ಥೆ ಜಾರಿಗೊಳಿಸಬಹುದಾಗಿದೆ ಎಂದು ಚೌಬೇ ಹೇಳಿದರು. ಏರ್ ಪ್ಯಾಸೆಂಜರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ(ಎಪಿಎಐ) ದ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದರು.[ಕರ್ನಾಟಕದ ವಿಮಾನ ನಿಲ್ದಾಣಗಳು ಫುಲ್ ನಷ್ಟದಲ್ಲಿದೆಯಂತೆ!](ಪಿಟಿಐ)

English summary
Fliers may soon be able to use Wi-Fi facility when they are on flights in the Indian airspace, with the government on Tuesday indicating that a decision is likely in the coming days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X