ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರುಗಳಲ್ಲಿ 2 ಏರ್‌ಬ್ಯಾಗ್ ಕಡ್ಡಾಯಗೊಳಿಸಿದ ಕೇಂದ್ರ ಸರ್ಕಾರ

|
Google Oneindia Kannada News

ನವದೆಹಲಿ, ಮಾರ್ಚ್ 06: ಕೇಂದ್ರ ಸರ್ಕಾರವು ಕಾರುಗಳಲ್ಲಿ 2 ಏರ್‌ಬ್ಯಾಗ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಹೊಸ ಕಾರುಗಳಲ್ಲಿ ಇನ್ನುಮುಂದೆ ಎರಡೆರಡು ಏರ್ ಬ್ಯಾಗ್ ಗಳು ಇರುವುದು ಕಡ್ಡಾಯ ಎಂದು ಹೇಳಿದೆ.

ಒಂದೊಮ್ಮೆ ಅಪಘಾತ ಸಂಭವಿಸಿದಾಗ ಚಾಲಕ ಮಾತ್ರ ಬಚಾವ್ ಆಗಬಹುದಾಗಿದ್ದು, ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಅಪಾಯವಾಗುತ್ತಿತ್ತು. ಹೀಗಾಗಿ ಇಬ್ಬರ ಹಿತದೃಷ್ಟಿಯಿಂದ ಈ ನಿರ್ಧಾರ ಪ್ರಕಟಿಸಲಾಗಿದೆ.

ಪ್ರಯಾಣಿಕ ವಾಹನಗಳ ಮಾರಾಟ ಶೇಕಡಾ 11ರಷ್ಟು ಏರಿಕೆಪ್ರಯಾಣಿಕ ವಾಹನಗಳ ಮಾರಾಟ ಶೇಕಡಾ 11ರಷ್ಟು ಏರಿಕೆ

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಮಾರ್ಕ್ ಅಡಿಯಲ್ಲಿ ಏರ್‌ಬ್ಯಾಗ್‌ ಎಐಎಸ್ 145 ಗುಣಮಟ್ಟದ ಸಾಧನಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ.

 ಹಳೇ ವಾಹನ ಗುಜರಿಗೆ ಹಾಕಿ ಹೊಸತು ಕೊಳ್ಳುವವರಿಗೆ ಕೊಡುಗೆ? ಹಳೇ ವಾಹನ ಗುಜರಿಗೆ ಹಾಕಿ ಹೊಸತು ಕೊಳ್ಳುವವರಿಗೆ ಕೊಡುಗೆ?

 ಸುಪ್ರೀಂಕೋರ್ಟ್ ಸಲಹೆ ಆಧರಿಸಿ ನಿರ್ಧಾರ

ಸುಪ್ರೀಂಕೋರ್ಟ್ ಸಲಹೆ ಆಧರಿಸಿ ನಿರ್ಧಾರ

ರಸ್ತೆ ಸುರಕ್ಷತಾ ಮಾನದಂಡಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸಮಿತಿಯ ಸಲಹೆಗಳನ್ನು ಆಧರಿಸಿ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ ಎಂದು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ.

 ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ ಕೇಂದ್ರ ಸರ್ಕಾರ

ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ ಕೇಂದ್ರ ಸರ್ಕಾರ

ಈ ಬಗ್ಗೆ ಕೇಂದ್ರ ಸರ್ಕಾರ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದು, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ನಿಯಮವನ್ನು ಘೋಷಣೆ ಮಾಡಿದೆ. ಅದರಂತೆ ಇನ್ನು ಮುಂದೆ ಎಲ್ಲಾ ಹೊಸ ಕಾರುಗಳಲ್ಲಿ ಏಪ್ರಿಲ್ 1ರಿಂದ ಡ್ಯುಯಲ್‌ ಫ್ರಂಟ್‌ ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿದೆ.

 ಏರ್‌ ಬ್ಯಾಗ್‌ನಿಂದಾಗುವ ಅನುಕೂಲಗಳು

ಏರ್‌ ಬ್ಯಾಗ್‌ನಿಂದಾಗುವ ಅನುಕೂಲಗಳು

ಸಾಮಾನ್ಯವಾಗಿ ಕಾರು ಅಪಘಾತಗಳು ಸಂಭವಿಸಿದಾಗ ಕಾರಿನ ಮುಂಭಾಗದಲ್ಲಿ ಕುಳಿತವರಿಗೆ ತಲೆಗೆ ಪೆಟ್ಟಾಗಿ ಸಾಯುವ ಸಂಭವ ಹೆಚ್ಚು. ಆದರೆ ಇಂತಹ ಸಂದರ್ಭಗಳಲ್ಲಿ ಕಾರಿನಲ್ಲಿ ಅಳವಡಿಸಲಾಗುವ ಏರ್ ಬ್ಯಾಗ್‌ಗಳು ಅಪಘಾತದ ಸಂದರ್ಭದಲ್ಲಿ ತಲೆಗೆ ಆಗುವ ಸಂಭಾವ್ಯ ಪೆಟ್ಟನ್ನು ಬಹುತೇಕ ತಡೆಯುತ್ತದೆ. ಇದೇ ಕಾರಣಕ್ಕೆ ಏರ್ ಬ್ಯಾಗ್‌ಗಳನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.

 ಈಗಾಗಲೇ ನಿರ್ಮಿಸಿರುವ ಕಾರುಗಳಿಗೂ ಕಡ್ಡಾಯ

ಈಗಾಗಲೇ ನಿರ್ಮಿಸಿರುವ ಕಾರುಗಳಿಗೂ ಕಡ್ಡಾಯ

ಪ್ರಸ್ತುತ ಈಗಾಗಲೇ ನಿರ್ಮಾಣ ಮಾಡಿರುವ ಕಾರುಗಳಿಗೂ ಆಗಸ್ಟ್ ನಿಂದ ಡ್ಯುಯಲ್ ಏರ್ ಬ್ಯಾಗ್ ಗಳನ್ನು ಅಳವಡಿಸಿ ಮಾರಾಟ ಮಾಡುವಂತೆ ಸೂಚನೆ ನೀಡಿದೆ. ಅಲ್ಲದೆ ಈ ಸಂಬಂಧ ಗೆಜೆಟ್ ಅಧಿಸೂಚನೆ ಕೂಡ ಹೊರಡಿಸಿದೆ.

English summary
The Indian government has announced its decision to make the passenger side airbag mandatory in new cars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X