• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ವೈರಸ್: ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೂ ಮಾರ್ಗಸೂಚಿ ಅನ್ವಯ

|

ನವದೆಹಲಿ, ಮಾರ್ಚ್.17: ಕೊರೊನಾ ವೈರಸ್ ಸೋಂಕಿತರ ಮೇಲೆ ನಿಗಾ ವಹಿಸುವಂತೆ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕೆಲವು ಮಾರ್ಗಸೂಚಿ ಹೊರಡಿಸಿದೆ. ಮಾರಕ ಸೋಂಕು ತಗಲಿರುವ ಪ್ರತಿಯೊಬ್ಬ ಶಂಕಿತರ ಬಗ್ಗೆ ಗಮನ ಹರಿಸುವಂತೆ ಸೂಚಿಸಲಾಗಿದೆ.

ದೇಶದಲ್ಲಿ ಪ್ರತಿಯೊಬ್ಬ ಸೋಂಕಿತರೂ ಅಪಾಯಕಾರಿ ಎನ್ನುವುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಸೋಂಕಿತ ಲಕ್ಷಣಗಳು ಕಾಣಿಸಿಕೊಂಡ ವ್ಯಕ್ತಿಯ ಬಗ್ಗೆ ತಕ್ಷಣ ಮಾಹಿತಿ ನೀಡುವುದು. ಐಸೋಲೇಟೆಡ್ ವಾರ್ಡ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ಸ್ಥಿತಿ ಬಗ್ಗೆ ವರದಿ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೂ ಸೂಚನೆ ನೀಡಲಾಗಿದೆ.

ಕೊರೊನೊ ವೈರಸ್ ವೈದ್ಯಕೀಯ ವೈದ್ಯಕೀಯ ತಪಾಸಣೆಯ ಮಾರ್ಗಸೂಚಿ

ಖಾಸಗಿ ಆಸ್ಪತ್ರೆಗಳಲ್ಲಿ ಕೂಡಾ ಸೋಂಕಿತ ಲಕ್ಷಣಗಳು ಕಂಡು ಬಂದ ವ್ಯಕ್ತಿಯನ್ನು ಐಸೋಲೇಟೆಡ್ ವಾರ್ಡ್ ಗಳಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವುದು. ಶಂಕಿತನು ಪ್ರಾಥಮಿಕವಾಗಿ ಯಾರ ಜೊತೆಗೆ ಸಂಪರ್ಕ ಹೊಂದಿದ್ದ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಬೇಕು ಎಂದು ತಿಳಿಸಲಾಗಿದೆ.

ಶಿಷ್ಟಾಚಾರದ ಪ್ರಕಾರ ವೈದ್ಯಕೀಯ ಚಿಕಿತ್ಸೆ:

ಕೊರೊನಾ ವೈರಸ್ ನಿಯಂತ್ರಣಕ್ಕೆ ಸರ್ಕಾರಿ ಮತ್ತು ಖಾಸಗಿ ವೈದ್ಯರು ಹಾಗೂ ವೈದ್ಯಕೀಯ ಸಂಸ್ಥೆಗಳ ಸಹಕಾರ ಅತ್ಯಗತ್ಯವಾಗಿದೆ. ಸೋಂಕು ತಗಲಿರುವ ಬಗ್ಗೆ ತಿಳಿಯುತ್ತಿದ್ದಂತೆ ಸರ್ಕಾರದ ಮೂಲಗಳಿಗೆ ಈ ಕುರಿತು ಮಾಹಿತಿ ನೀಡಬೇಕು. ಈ ನಿಯಮವು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೂ ಅನ್ವಯವಾಗುತ್ತದೆ. ಏಕೆಂದರೆ ಪ್ರತಿಯೊಬ್ಬ ಸೋಂಕಿತನೂ ಕೂಡಾ ಅಪಾಯಕಾರಿ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Karnataka Health Dept - 080-46848600.

State Helpline - 104

Helpline - 080-6669200

National Helpline - 1075.

ಕೊರೊನಾ ವೈರಸ್ ನಿಂದ ಸಾವು: ಮೃತದೇಹಗಳ ನಿರ್ವಹಣೆಗೂ ಮಾರ್ಗಸೂಚಿ

ವೈದ್ಯಕೀಯ ತಪಾಸಣೆ ವೇಳೆ ಶಂಕಿತನು ವಿದೇಶಗಳಿಂದ ಆಗಮಿಸಿದ್ದನೇ ಅಥವಾ ವಿದೇಶದಿಂದ ಆಗಮಿಸಿದವರ ಜೊತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದನೇ ಇಲ್ಲವೇ ಎಂಬುದರ ಬಗ್ಗೆ ಮೊದಲು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಭಾರತದಲ್ಲಿ ಕೊರೊನಾ ಸೋಂಕಿತರ ಬಗ್ಗೆ ಮಾಹಿತಿಗಾಗಿ 1075 ಸಹಾಯವಾಣಿಯನ್ನು ತೆರೆಯಲಾಗಿದೆ. ಇದರ ಜೊತೆಗೆ ಆಯಾ ರಾಜ್ಯಗಳಲ್ಲೂ ಸಹಾಯವಾಣಿಗಳನ್ನು ತೆರಯಲಾಗಿದೆ.

ರಾಜ್ಯ ಸಹಾಯವಾಣಿ ಸಂಖ್ಯೆ

ಆಂಧ್ರಪ್ರದೇಶ 0866-2410978

ಅರುಣಾಚಲ ಪ್ರದೇಶ 9536055743

ಅಸ್ಸಾಂ 6913347770

ಬಿಹಾರ 104

ಛತ್ತೀಸ್ ಗಢ್ 077122-35091

ಗೋವಾ 104

ಗುಜರಾತ್ 104

ಹರಿಯಾಣ 8558893911

ಹಿಮಾಚಲ ಪ್ರದೇಶ 104

ಜಾರ್ಖಂಡ್ 104

ಕರ್ನಾಟಕ 104

ಕೇರಳ 2552056

ಮಧ್ಯಪ್ರದೇಶ 0755-2527177

ಮಹಾರಾಷ್ಟ್ರ 020-26127394

ಮಣಿಪುರ 3852411668

ಮೇಘಾಲಯ 108

ಮಿಜೋರಾಂ 102

ನಾಗಾಲ್ಯಾಂಡ್ 7005539653

ಒಡಿಶಾ 9439994859

ಪಂಜಾಬ್ 104

ರಾಜಸ್ಥಾನ 0141-2225624

ಸಿಕ್ಕಿಂ 104

ತಮಿಳುನಾಡು 044-29510500

ತೆಲಂಗಾಣ 104

ತ್ರಿಪುರಾ 0381-2315879

ಉತ್ತರಪ್ರದೇಶ 18001805145

ಉತ್ತರಾಖಂಡ್ 104

ಪಶ್ಚಿಮ ಬಂಗಾಳ 3323412600

ಕೊರೊನಾ ವೈರಸ್ ಮಾನವ ನಿರ್ಮಿತವೇ? ಇಲ್ಲಿದೆ ಉತ್ತರ

ಕೇಂದ್ರಾಡಳಿತ ಪ್ರದೇಶ ಸಹಾಯವಾಣಿ

ದೆಹಲಿ 011-22307145

ಜಮ್ಮು 1912520982

ಕಾಶ್ಮೀರ 0194-2440383

ಲಡಾಕ್ 01982-256462

ಲಕ್ಷದ್ವೀಪ 04896-263742

ಪುದುಚೇರಿ 104

ಅಂಡಮಾನ್ ಮತ್ತು ನಿಕೋಬಾರ್ 03192-232102

ಚಂಡೀಗಢ್ 9779558282

ಹವೇಲಿ 104

ದಿಯು ಮತ್ತು ಮದನ್ 104

English summary
Coronavirus: Guidelines For Notifying Affected Persons By Private Healthcare Institutions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X