ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್‌ಟಿಟಿಇ ನಿಷೇಧ ಅವಧಿ ಐದು ವರ್ಷ ವಿಸ್ತರಣೆ

|
Google Oneindia Kannada News

ನವದೆಹಲಿ, ಮೇ 14: ಎಲ್‌ಟಿಟಿಇ (ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಎಲಂ) ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಕೇಂದ್ರ ಸರ್ಕಾರವು ಇನ್ನೂ ಐದು ವರ್ಷಗಳ ಅವಧಿಗೆ ವಿಸ್ತರಣೆ ಮಾಡಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕಾನೂನು ಬಾಹಿರ ಚಟುವಟಿಕೆ ನಿಗ್ರಹ ಕಾಯ್ದೆ ಅಡಿ ಈ ನಿಷೇಧವನ್ನು ವಿಸ್ತರಣೆ ಮಾಡಲಾಗಿದ್ದು, ಹೊಸ ಆದೇಶವು ತತಕ್ಷಣದಿಂದ ಜಾರಿಯಾಗುವಂತೆ ಆದೇಶ ಹೊರಡಿಸಲಾಗಿದೆ.

ರಾಜೀವ್ ಹಂತಕರ ಬಿಡುಗಡೆ: ರಾಜ್ಯಪಾಲರ ಅಭಿಪ್ರಾಯ ಪಡೆಯಲು ಸೂಚನೆ ರಾಜೀವ್ ಹಂತಕರ ಬಿಡುಗಡೆ: ರಾಜ್ಯಪಾಲರ ಅಭಿಪ್ರಾಯ ಪಡೆಯಲು ಸೂಚನೆ

ಎಲ್‌ಟಿಟಿಇ ಯು ತನ್ನ ಹಿಂಸಾತ್ಮಕ ಕಾರ್ಯಗಳನ್ನು ಮುಂದುವರೆಸಿದ್ದು, ಅದು ಭಾರತದ ಅಖಂಡತೆ, ಸಾರ್ವಭೌಮತೆಗೆ ಧಕ್ಕೆ ತರುವ ಕಾರ್ಯವನ್ನು ಮಾಡುತ್ತಲೇ ಇದೆ, ಈ ಸಂಘವು ಭಾರತ ವಿರೋಧಿ ಮನೋಭಾವವನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದು, ಇದು ಭಾರತದ ಭದ್ರತೆಗೆ ಅಪಾಯಕಾರಿ ಆಗಿರುವ ಕಾರಣ ಎಲ್‌ಟಿಟಿಇ ಯನ್ನು ನಿಷೇಧಿಸಲಾಗುತ್ತಿದೆ ಎಂದು ಹೇಳಿದೆ.

Government extended ban on LTTE five more years

ತಮಿಳರಿಗೆ ಪ್ರತ್ಯೇಕ ದೇಶಬೇಕೆಂಬುದು ಎಲ್‌ಟಿಟಿಇಯ ಮೂಲ ಹೋರಾಟವಾಗಿತ್ತು, ಎಲ್‌ಟಿಟಿಇ ಯು 2009ರಲ್ಲಿ ಸೈನ್ಯದೊಂದಿಗೆ ನಡೆದ ಯುದ್ಧದಲ್ಲಿ ಹೀನಾಯ ಸೋಲು ಕಂಡಿತು, ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಅನ್ನು ಕೊಲ್ಲಲಾಯಿತು, ಇಷ್ಟಾದರೂ ಎಲ್‌ಟಿಟಿಇ ಯು ಪೂರ್ಣವಾಗಿ ನಿರ್ನಾಮವಾಗಿಲ್ಲ, ತಮಿಳರಿಗೆ ಪ್ರತ್ಯೇಕ ನೆಲಕ್ಕಾಗಿ ಹೋರಾಟ ಹಿಂಸಾತ್ಮಕ ಹೋರಾಟ ನಡೆಸುತ್ತಲೇ ಬಂದಿದೆ.

English summary
Central government extended ban on LTTE five years more. Home ministry today stated in notice that LTTE's continued violent and disruptive activities are prejudical to the integrity and sovereignty of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X