ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಸ್ ಪೋರ್ಟ್ 'ಕೇಸರೀಕರಣ'ವಿಲ್ಲ! ನಿಲುವು ಬದಲಿಸಿದ ಸರ್ಕಾರ

|
Google Oneindia Kannada News

ನವದೆಹಲಿ, ಜನವರಿ 31: ಇನ್ನು ಮೇಲೆ ಅಡ್ರೆಸ್ ಪ್ರೋಫ್ ಗೆ ಪಾಸ್ ಪೋರ್ಟ್ ಬಳಸುವಂತಿಲ್ಲ ಎಂಬ ಹೊಸ ನಿಯಮವನ್ನು ಜಾರಿಗೆ ತರುವುದಾಗಿ ಇತ್ತೀಚೆಗೆ ತಾನೇ ಹೇಳಿದ್ದ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ.

ಹತ್ತನೇ ತರಗತಿ ಪಾಸಾಗದವರಿಗೆ 'ಕೇಸರಿ' ಬಣ್ಣದ ಪಾಸ್ ಪೋರ್ಟ್ ನೀಡುವ ಬಗ್ಗೆಯೂ ಸರ್ಕಾರ ಯೋಚಿಸಿತ್ತು. ಮತ್ತು ಪಾಸ್ ಪೋರ್ಟಿನ ಕೊನೆಯ ಪುಟ, ಅಂದರೆ ವಿಳಾಸವನ್ನು ಹೊಂದಿರುವ ಪುಟವನ್ನೇ ತೆಗೆದುಹಾಕಲು ತೀರ್ಮಾನಿಸಿತ್ತು.

ಮೂರೇ ದಿನಗಳಲ್ಲಿ ಪಾಸ್ ಪೋರ್ಟ್ ಪಡೆಯಿರಿ!ಮೂರೇ ದಿನಗಳಲ್ಲಿ ಪಾಸ್ ಪೋರ್ಟ್ ಪಡೆಯಿರಿ!

ಈ ಬಗ್ಗೆ ವಿರೋಧಪಕ್ಷ ಮಾತ್ರವಲ್ಲದೆ ಕೆಲ ಜನಸಾಮಾನ್ಯರೂ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ತಾರತಮ್ಯ ಎಸಗಿದಂತಾಗುತ್ತದೆ ಎಂದೂ ದೂರಲಾಗಿತ್ತು. ಅಷ್ಟೇ ಅಲ್ಲ, ಸರ್ಕಾರ ಪಾಸ್ ಪೋರ್ಟ್ ಅನ್ನೂ ಕೇಸರೀಕರಣಗೊಳಿಸಲು ಹೊರಟಿದೆ ಎಂದು ಲೇವಡಿ ಮಾಡಲಾಗಿತ್ತು.

Government drops orange passport plan

ಅಡ್ರೆಸ್ ಪ್ರೂಫ್ ಗೆ ಪಾಸ್ ಪೋರ್ಟ್ ಬಳಕೆ ಮಾಡುವಂತಿಲ್ಲ!ಅಡ್ರೆಸ್ ಪ್ರೂಫ್ ಗೆ ಪಾಸ್ ಪೋರ್ಟ್ ಬಳಕೆ ಮಾಡುವಂತಿಲ್ಲ!

2012ರಿಂದ ವಿತರಣೆಯಾದ ಪಾಸ್ಪೋರ್ಟ್ ಗಳಲ್ಲಿ ಬಾರ್ ಕೋಡ್ ಅಳವಡಿಸಲಾಗಿದೆ. ಹೀಗಾಗಿ, ಮಾಹಿತಿ ಕಲೆ ಹಾಕುವುದು ಸುಲಭ. ಕೊನೆಯ ಪುಟದಲ್ಲಿರುವ ವಿವರಗಳು ಪಾಸ್ಪೋರ್ಟ್ ಕಚೇರಿ ಅಥವಾ ವಲಸೆ ಇಲಾಖೆಗೆ ಬೇಕಾಗಿಲ್ಲ. ಹೀಗಾಗಿ, ಕೊನೆಯ ಪುಟವನ್ನು ಖಾಲಿಯಾಗಿಡಲು ಚಿಂತನೆ ನಡೆದಿತ್ತು.

English summary
Union Government of India has dropped it's decision of making orange coloured passports to those who have not passed class 10th examination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X