ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ವಿತರಣೆಗೂ ಮುನ್ನ ಎದುರಾಗಿದೆ ಮತ್ತೊಂದು ಸಮಸ್ಯೆ

|
Google Oneindia Kannada News

ನವದೆಹಲಿ,ಡಿಸೆಂಬರ್ 29: ಕೊರೊನಾ ಲಸಿಕೆ ವಿತರಣೆಗೂ ಮುನ್ನ ಮತ್ತೊಂದು ಸಮಸ್ಯೆ ಎದುರಾಗಿದೆ.

ಕೊವಿಡ್-19 ಲಸಿಕೆಯನ್ನು ದೇಶದಲ್ಲಿ ವಿತರಿಸಲು ಕೇಂದ್ರ ಸರ್ಕಾರದ ಯೋಜನೆಗಳು ಸಿದ್ಧವಾಗಿದೆ. ಈಗಾಗಲೇ ಕೇಂದ್ರ ಸರ್ಕಾರವೇ ಹೇಳುವಂತೆ ಕೊಮೊರ್ಬಿಡಿಟಿ (ವಿವಿಧ ಆರೋಗ್ಯ ಸಮಸ್ಯೆಗಳು) ಹೊಂದಿರುವವ 50ಕ್ಕೂ ಹೆಚ್ಚಿನ ವಯಸ್ಸಿನವರಿಗೆ, ಕೊರೊನಾ ಹೆಲ್ತ್ ವಾರಿಯರ್ಸ್ ಗೆ ಆದ್ಯತೆಯ ಆಧಾರದಲ್ಲಿ ಲಸಿಕೆಗಳು ಲಭ್ಯವಾಗುತ್ತದೆ.

ಭಾರತದಲ್ಲಿ 6 ಮಂದಿಯಲ್ಲಿ ರೂಪಾಂತರಿತ ಕೊರೊನಾ ವೈರಸ್ ಪತ್ತೆಭಾರತದಲ್ಲಿ 6 ಮಂದಿಯಲ್ಲಿ ರೂಪಾಂತರಿತ ಕೊರೊನಾ ವೈರಸ್ ಪತ್ತೆ

ಈಗಾಗಲೇ ಕೆಲವು ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಯುವಜನತೆಯ ಕುರಿತ ಲೆಕ್ಕ ಸರ್ಕಾರದ ಬಳಿ ಇಲ್ಲ.

ಕೊರೊನಾ ವಾರಿಯರ್ಸ್ ಹಾಗೂ ವೃದ್ಧರಿಗೆ ಕೊರೊನಾ ಲಸಿಕೆ

ಕೊರೊನಾ ವಾರಿಯರ್ಸ್ ಹಾಗೂ ವೃದ್ಧರಿಗೆ ಕೊರೊನಾ ಲಸಿಕೆ

ಮೊದಲ ಹಂತದಲ್ಲಿ ಆರೋಗ್ಯ ರಕ್ಷಾ ಹಾಗೂ ಮುನ್ನಲೆಯಲ್ಲಿರುವ ಕೊರೊನಾ ವಾರಿಯರ್ಸ್, ವೃದ್ಧರಿಗೆ, ಈಗಾಗಲೇ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಿಗೆ ಮೊದಲ ಹಂತದಲ್ಲಿ ಕೋವಿಡ್-19 ಲಸಿಕೆಯನ್ನು ನೀಡುವುದಾಗಿ ಕೇಂದ್ರ ಸರ್ಕಾರ ಹೇಳಿದೆ.

ಆರೋಗ್ಯ ಕೇಂದ್ರದಲ್ಲಿ ನೋಂದಣಿಯಾಗಿಲ್ಲ

ಆರೋಗ್ಯ ಕೇಂದ್ರದಲ್ಲಿ ನೋಂದಣಿಯಾಗಿಲ್ಲ

ಆರೋಗ್ಯ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳದೇ ಖಾಸಗಿ ಕ್ಷೇತ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲು ಮನೆಮನೆಗಳ ಸಮೀಕ್ಷೆ ನಡೆಸಿ ವಿವರ ಸಂಗ್ರಹಿಸುವುದಕ್ಕೆ ರಾಜ್ಯಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಹಿರಿಯರ ಮಾಹಿತಿ ಮಾತ್ರ ಲಭ್ಯ

ಹಿರಿಯರ ಮಾಹಿತಿ ಮಾತ್ರ ಲಭ್ಯ

ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಸರ್ಕಾರದ ಬಳಿ ಸೆನ್ಸಸ್ ಆಫ್ ಇಂಡಿಯಾದ ವರದಿ ಆಧಾರದಲ್ಲಿ ಹಿರಿಯ ನಾಗರಿಕರ ಡೇಟಾ ಬೇಸ್ ಮಾತ್ರ ಲಭ್ಯವಿದ್ದು, ಕೊಮೊರ್ಬಿಡಿಟಿ ಎದುರಿಸುತ್ತಿರುವ ಯುವಜನತೆಯ ಲೆಕ್ಕ ಇಲ್ಲ ಎಂದು ಹೇಳಿದೆ.

ಮೂರನೇ ಆದ್ಯತೆಯ ಗುಂಪಿನಲ್ಲಿ ಯಾರ್ಯಾರಿದ್ದಾರೆ

ಮೂರನೇ ಆದ್ಯತೆಯ ಗುಂಪಿನಲ್ಲಿ ಯಾರ್ಯಾರಿದ್ದಾರೆ

ಮೇರನೇ ಗುಂಪಿನಲ್ಲಿ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಶ್ವಾಸಕೋಶ ಮತ್ತು ಮೂತ್ರಪಿಂಡ ಕಾಯಿಲೆ ಎದುರಿಸುತ್ತಿರುವವರು 50 ಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಎಂಬ ಲೆಕ್ಕಾಚಾರ ಹೊಂದಿದ್ದೇವೆ, ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

English summary
The Centre’s Covid-19 vaccination plan includes those with comorbidities, along with people above 50 as the third priority group, but the government does not have a concrete database of younger people with underlying diseases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X