ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಹಾದಿಯಲ್ಲಿ ಭಾರತ, ಪೋರ್ನ್ ಸೈಟ್ಸ್ ಬಂದ್

By Mahesh
|
Google Oneindia Kannada News

ನವದೆಹಲಿ, ಆಗಸ್ಟ್ 03: ವೀಕೆಂಡ್ ನಲ್ಲಿ ಗೂಗಲ್ ನಲ್ಲಿ ಅಂಥ ಚಿತ್ರಗಳ ವಿಡಿಯೋ ಹುಡುಕಾಟ ನಡೆಸಿ ಏನೂ ಕಾಣಿಸದೆ ಪಡ್ಡೆಗಳು ಕೈಕೈ ಹಿಸುಕಿಕೊಂಡ ಪರಿಸ್ಥಿತಿ ದೇಶದೆಲ್ಲೆಡೆ ನಡೆದಿದ್ದರೆ ಅಚ್ಚರಿ ಪಡಬೇಕಾಗಿಲ್ಲ. ಭಾನುವಾರ ದಿಂದಲೇ ನೂರಾರು ಅಶ್ಲೀಲ ವೆಬ್ ತಾಣಗಳು ಬಂದ್ ಆಗಿವೆ. ಚೀನಾದಂತೆ ಭಾರತ ಕೂಡಾ ಪೋರ್ನ್ ಸೈಟ್ ವಿರುದ್ಧ ಸಮರ ಸಾತಿದೆ.

ನೀಲಿಚಿತ್ರ ಪ್ರಿಯರಿಗೆ ಈ ಸಮಸ್ಯೆ ಎದುರಾಗಲು ಕಾರಣ ಜುಲೈ 31ರಂದು ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ನೀಡಿದ ಆದೇಶ. ಸುಮಾರು 857 ಪೋರ್ನ್ ಸೈಟ್ ಗಳನ್ನು ಬ್ಲಾಕ್ ಮಾಡುವಂತೆ ಸೂಚಿಸಿತ್ತು. [ಪೋರ್ನ್ ಬ್ಯಾನ್ ಮಾಡಿದರೆ ಅನಾಹುತ: ಆರ್ ಜಿವಿ]

Government directs internet providers to block over 800 porn sites

ಅದರಂತೆ, ಏರ್ ಟೆಲ್, ವೊಡಾಫೋನ್, ಎಂಟಿಎನ್‌ಎಲ್, ಎಸಿಟಿ, ಹಾಥ್‌ವೇ ಮತ್ತು ಬಿಎಸ್ಸೆನ್ನೆಲ್ ಸೇರಿದಂತೆ ಹೆಚ್ಚಿನ ಟೆಲಿಕಾಂ ಕಂಪೆನಿಗಳ ಇಂಟರ್ನೆಟ್ ಸೇವಾ ವಿಭಾಗ ಬ್ಲೂ ಫಿಲ್ಮ್ ವೀಕ್ಷಣೆಗೆ ನಿರ್ಬಂಧ ಹೇರಿದ್ದವು.

ಶನಿವಾರ ತಡರಾತ್ರಿಯಿಂದಲೇ ದೇಶದ ಅನೇಕ ಕಡೆ ಅಶ್ಲೀಲ ವೆಬ್‌ಸೈಟ್‌ಗಳನ್ನು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂಬ ವಿಷಯ ಕಾಡ್ಗಿಚ್ಚಿನಂತೆ ಹರಡಿತ್ತು. ಜನಪ್ರಿಯ ಪೋರ್ನ್ ಸೈಟ್‌ಗಳಾದ ಪೋರ್ನ್‌ಹಬ್ ಮತ್ತು ರೆಡ್‌ಟ್ಯೂಬ್‌ ಗಳಲ್ಲಿ ಬೆತ್ತಲೆ ಪೋಸ್ ಹುಡುಕಾಡಿದವರಿಗೆ ಬೆತ್ತಲೆ ಪುಟವಷ್ಟೇ ಸಿಕ್ಕಿದೆ.

ಪೋರ್ನ್ ಸೈಟ್ ವೀಕ್ಷಿಸಲಾಗದವರು ಈ ವಿಷಯವನ್ನು ಬೆಳಕಿಗೆ ತರಲು ಟ್ವಿಟ್ಟರ್ ಮತ್ತು ರೆಡಿಟ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭಿಸಿದರು. ನಿರ್ದಿಷ್ಟ ಪೋರ್ನ್ ಸೈಟ್‌ನ್ನು 'ಭಾರತ ಸರಕಾರದ ದೂರಸಂಪರ್ಕ ಇಲಾಖೆಯ ನಿರ್ದೇಶಗಳಂತೆ ತಡೆ ಹಿಡಿಯಲಾಗಿದೆ' ಎಂಬ ಸಂದೇಶವುಳ್ಳ ತನ್ನ ಮಾನಿಟರ್ ಸ್ಕ್ರೀನ್‌ನ ಚಿತ್ರವನ್ನು ರೆಡಿಟ್ ಬಳಕೆದಾರನೋರ್ವ ಪೋಸ್ಟ್ ಮಾಡಿದ್ದ. ಚರ್ಚೆ ಮುಂದುವರೆದಿದೆ.

English summary
If reports are to be believed, the government has crack the whip on pornographic websites in the country, directing internet providers to block over 800 porn websites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X