ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2022ರ ವೇಳೆಗೆ ಸರ್ವರಿಗೂ ಸ್ವಂತ ಸೂರು: ಮೋದಿ ಭರವಸೆ

By Manjunatha
|
Google Oneindia Kannada News

ನವ ದೆಹಲಿ, ಜೂನ್ 05: ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಗೆ ಸರ್ವರಿಗೂ ಸೂರು ನೀಡುವ ಕೇಂದ್ರ ಸರ್ಕಾರದ ಕನಸು ನನಸಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪುನರ್‌ ಉಚ್ಚರಿಸಿದ್ದಾರೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತನಾಡಿದ ಅವರು, 2022ರ ವೇಳೆಗೆ ದೇಶದಲ್ಲಿ ಮನೆ ಇಲ್ಲದ ಯಾವ ವ್ಯಕ್ತಿಯೂ ಇರಲಾರ ಎಂದು ಭರವಸೆಯನ್ನು ಮೋದಿ ನೀಡಿದರು.

ಮೋದಿ ಸರ್ಕಾರಕ್ಕೆ 4ರ ಸಂಭ್ರಮ, ಟಾಪ್ 15ಯೋಜನೆಗಳುಮೋದಿ ಸರ್ಕಾರಕ್ಕೆ 4ರ ಸಂಭ್ರಮ, ಟಾಪ್ 15ಯೋಜನೆಗಳು

ಜನರು ತಮ್ಮ ಸ್ವಂತ ಮನೆಗಳನ್ನು ಹೊಂದಲು ಯಾವುದೇ ಅಡ್ಡಿ-ಅಡಚಣೆಗಳಿಲ್ಲದೇ, ಮಧ್ಯವರ್ತಿಗಳು, ಭ್ರಷ್ಟಾಚಾರದಿಂದ ವಸತಿ ವಲಯವನ್ನು ಮುಕ್ತಗೊಳಿಸಲು ಕೇಂದ್ರ ಸರ್ಕಾರ ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂದು ಅವರು ಹೇಳಿದರು.

Government committed to provide housing to all by 2022: Modi

ವಿದ್ಯುತ್, ನೀರು, ಶೌಚಾಲಯಗಳಂತಹ ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದಿರುವಂತಹಾ ಮನೆಗಳನ್ನು ಕೇಂದ್ರ ಸರ್ಕಾರ ನಿರ್ಮಿಸುತ್ತಿದ್ದು, ಮನೆಗಳನ್ನು ನಿರ್ಮಿಸಲು ಅತ್ಯಾದುನಿಕ ತಂತ್ರಜ್ಞಾನವನ್ನು ಸರ್ಕಾರ ಬಳಸಲಿದೆ ಎಂದರು.

ಮಹಿಳೆಯರು, ದಿವ್ಯಾಂಗರು(ವಿಕಲ ಚೇತನರು), ಎಸ್‌ಸಿ, ಎಸ್‌ಟಿ, ಒಬಿಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಜನರಿಗೆ ವಸತಿ ನೀಡಿಕೆಯಲ್ಲಿ ಆದ್ಯತೆ ನೀಡಲಾಗುವುದು ಎಂದು ಮೋದಿ ಹೇಳಿದರು.

English summary
Narendra Modi said 'by 2022 every Indian will have own house'. He talked to interacting with lakhs of beneficiaries of the Pradhan Mantri Awas Yojana (PMAY) through video conferencing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X