ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

5 ವರ್ಷಕ್ಕೊಮ್ಮೆ ಸರ್ಕಾರ ಬದಲಾಗುತ್ತದೆ, ನಾವು ಅವರನ್ನು ಅವಲಂಬಿಸಿರಬಾರದು: RSS

|
Google Oneindia Kannada News

ನಾಗಪುರ, ಏಪ್ರಿಲ್ 16: ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಾಗುವ ಸಾಧ್ಯತೆಗಳಿರುತ್ತವೆ. ಸಾಮಾಜಿಕ ಸಂಘಟನೆಗಳು ನೆರವಿಗಾಗಿ ಅವರ ಮೇಲೆ ಅವಲಂಬಿತರಾಗಿರಬಾರದು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ಹೇಳಿದ್ದಾರೆ.

ಸಂಘಟನೆಯ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಮನಮಹೋಪಾಧ್ಯಾಯ ವಿವಿ ಮಿರಾಶಿ ಅವರ 125ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಮತ್ತು ಸಂಶೋಧನಾ ಸಂಘಟನೆಗಳು ಸಮಾಜದ ಕಲ್ಯಾಣಕ್ಕಾಗಿ ಕೆಲಸ ನಿರ್ವಹಿಸಲು ಪ್ರಬಲ ಮತ್ತು ಶಾಶ್ವತ ಮೂಲಗಳನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಿಂದೂಗಳ ಭಾವನೆ ಪರಿಗಣಿಸದ ಕೋರ್ಟ್: ಆರೆಸ್ಸೆಸ್ ಆಕ್ರೋಶ ಹಿಂದೂಗಳ ಭಾವನೆ ಪರಿಗಣಿಸದ ಕೋರ್ಟ್: ಆರೆಸ್ಸೆಸ್ ಆಕ್ರೋಶ

ಸರ್ಕಾರದೊಂದಿಗೆ ಮಾತನಾಡಲು ಬಯಸುವವರು ಅದನ್ನು ಸಂಪರ್ಕಿಸಬೇಕು. ಆದರೆ, ಸಾಮಾಜಿಕ ಸಂಘಟನೆಗಳು ಸರ್ಕಾರವನ್ನು ಅವಲಂಬಿಸಿರಬೇಕು ಎಂದು ನನಗೆ ಅನಿಸುವುದಿಲ್ಲ. ಏಕೆಂದರೆ ಸರ್ಕಾರಗಳು ಬದಲಾಗುತ್ತಿರುತ್ತವೆ. ಈ ಮುಂದೆ ರಾಜಮನೆತನದ ಸರ್ಕಾರಗಳು 30-50 ವರ್ಷಗಳಿಗೊಮ್ಮೆ ಬದಲಾಗುತ್ತಿದ್ದವು. ಈಗ ಪ್ರತಿ ಐದು ವರ್ಷಗಳಿಗೊಮ್ಮೆ ಸರ್ಕಾರ ಬದಲಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಯಾವುದೇ ನಂಬಿಕೆ ಇರುವುದಿಲ್ಲ. ಅಲ್ಲಿಯವರೆಗೂ ಅದನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

government changes every 5 years we should not depend on them rss chief Mohan bhagwat

ರಾಮಮಂದಿರ ವಿಚಾರ: ಮೋದಿ ಸರ್ಕಾರದ ಮೇಲೆ ಆರೆಸ್ಸೆಸ್ ಗೂ ಮುನಿಸು?ರಾಮಮಂದಿರ ವಿಚಾರ: ಮೋದಿ ಸರ್ಕಾರದ ಮೇಲೆ ಆರೆಸ್ಸೆಸ್ ಗೂ ಮುನಿಸು?

ಇಂದು ವಿವಿಧ ಉದ್ದೇಶಗಳಿಗೆ ಜ್ಞಾನವನ್ನು ಸಂಪಾದಿಸಲಾಗುತ್ತಿದೆ. ಜ್ಞಾನ ಸಂಪಾದನೆಯು ಸ್ವ ಆಸಕ್ತಿ ಅಥವಾ ಸಮಾಜದ ಕಲ್ಯಾಣಕ್ಕಾಗಿ ಇರಬಹುದು. ಶಾಶ್ವತ ಬದುಕಿಗಾಗಿ ಜ್ಞಾನವೇ ಮಾರ್ಗ. ವಾಸ್ತವವಾಗಿ ಜ್ಞಾನವೆಂಬುದು ಶಾಶ್ವತ ಮತ್ತು ಎಲ್ಲರಿಗೂ ಶಾಶ್ವತತೆಯನ್ನು ಹಂಚುವುದಾಗಿದೆ ಎಂದರು.

English summary
RSS chief Mohan Bhagwat said that, governments changes every five year, social organizations should not depend on it for help.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X