ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ನು ಮುಂದೆ ಸೇನಾ ಕ್ಯಾಂಟೀನ್‌ಗಳಲ್ಲಿ ಕಡಿಮೆ ದರದ ವಿದೇಶಿ ಮದ್ಯ ಸಿಗೊಲ್ಲ

|
Google Oneindia Kannada News

ನವದೆಹಲಿ, ಅಕ್ಟೋಬರ್ 24: ಸ್ವದೇಶಿ ಅಥವಾ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಉತ್ಪನ್ನಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ರಕ್ಷಣಾ ಸಿಬ್ಬಂದಿಯ ಕ್ಯಾಂಟೀನ್ ಸ್ಟೋರ್ಸ್ ಇಲಾಖೆಯಲ್ಲಿ (ಸಿಎಸ್‌ಡಿ) ನೇರ ಆಮದಾದ ಎಲ್ಲ ವಸ್ತುಗಳ ಮಾರಾಟವನ್ನು ಸರ್ಕಾರ ನಿಷೇಧಿಸಿದೆ. ಸಿಎಸ್‌ಡಿಯು ಸಬ್ಸಿಡಿ ದರದಲ್ಲಿ ಸರಕುಗಳು ದೊರಕುವ ಸೇನಾ ಕ್ಯಾಂಟೀನ್‌ಗಳನ್ನು ನಡೆಸುತ್ತದೆ.

ಬೇರೆ ದೇಶಗಳಿಂದ ಭಾರತಕ್ಕೆ ನೇರವಾಗಿ ಆಮದು ಮಾಡಿಕೊಳ್ಳಲಾದ ಅಂದರೆ, ಉತ್ಪನ್ನ ತಯಾರಿಸಿದ ಸಂಸ್ಥೆ ಅದನ್ನು ಮಾರಾಟ ಅಥವಾ ಹಂಚಿಕೆ ಮಾಡುವ ಮುನ್ನವೇ ತರಿಸಿಕೊಂಡ ವಸ್ತುಗಳು ಸೇನಾ ಕ್ಯಾಂಟೀನ್‌ನಲ್ಲಿ ಕಡಿಮೆ ಬೆಲೆಗೆ ಲಭ್ಯವಾಗುತ್ತವೆ. ಅವುಗಳಲ್ಲಿ ಪ್ರಮುಖವಾಗಿ ಮದ್ಯದ ಉತ್ಪನ್ನಗಳು ಸೇರಿವೆ. ಉದಾಹರಣೆಗೆ ಸ್ಕಾಟ್ಲೆಂಡ್‌ನಿಂದ ಆಮದು ಮಾಡಿಕೊಳ್ಳಲಾಗುವ ಸ್ಕಾಚ್ ವಿಸ್ಕಿ ಇನ್ನು ಮುಂದೆ ಸಿಎಸ್‌ಡಿಗಳಲ್ಲಿ ಲಭ್ಯವಾಗುವುದಿಲ್ಲ. ಆದರೆ ವಿದೇಶ ಪದಾರ್ಥಗಳನ್ನು ಒಳಗೊಂಡ, ಭಾರತದಲ್ಲಿ ತಯಾರಾದ ಯಾವುದೇ ಮದ್ಯ ಲಭ್ಯವಾಗಲಿದೆ.

ಚುನಾವಣೆ: ಅ.26 ರಿಂದ 4 ದಿನಗಳ ಕಾಲ ಮದ್ಯ ಮಾರಾಟ ಬಂದ್ಚುನಾವಣೆ: ಅ.26 ರಿಂದ 4 ದಿನಗಳ ಕಾಲ ಮದ್ಯ ಮಾರಾಟ ಬಂದ್

ವಿದೇಶಿ ಉತ್ಪನ್ನಗಳ ಬಳಕೆಯನ್ನು ಆದಷ್ಟು ತಗ್ಗಿಸಿ ಆತ್ಮನಿರ್ಭರ ಭಾರತವನ್ನು ಸೃಷ್ಟಿಸುವ ಸರ್ಕಾರದ ಪ್ರಯತ್ನದ ಮಧ್ಯೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಿಎಸ್‌ಡಿ ಮಳಿಗೆಗಳಲ್ಲಿ ಚೀನಾದಿಂದ ಬಲ್ಕ್‌ನಲ್ಲಿ ಆಮದು ಮಾಡಿಕೊಳ್ಳಲಾಗುವ ವಸ್ತುಗಳೇ ಹೆಚ್ಚಿದ್ದವು. ಇವುಗಳಲ್ಲಿ ಎಲೆಕ್ಟ್ರಿಕ್ ಬ್ರಶ್‌ಗಳು, ಎಲೆಕ್ಟ್ರಿಕ್ ಕೆಟ್ಲ್, ಲೇಡೀಸ್ ಬ್ಯಾಗ್, ಸ್ಯಾಂಡ್‌ವಿಚ್ ಟೋಸ್ಟರ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು ಸೇರಿದ್ದವು.

Government Bans Sale Of Direct Imported Items In Army Canteens

ಈ ಕ್ಯಾಂಟೀನ್‌ಗಳಲ್ಲಿ 5,500ಕ್ಕೂ ಅಧಿಕ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದ್ದು. ಅವುಗಳಲ್ಲಿ ಸುಮಾರು 420 ಉತ್ಪನ್ನಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಸೇನೆಯಲ್ಲಿರುವ ಸಿಬ್ಬಂದಿಯ ನಂಟು ಹೊಂದಿರುವ ಅನೇಕರು ಕಡಿಮೆ ದರದಲ್ಲಿ ಉತ್ಪನ್ನಗಳನ್ನು ಸೇನಾ ಕ್ಯಾಂಟೀನ್ ಮೂಲಕ ತರಿಸಿಕೊಳ್ಳುವುದು ಸಾಮಾನ್ಯ. ಅದರಲ್ಲಿಯೂ ವಿದೇಶಿ ಮದ್ಯ ಕಡಿಮೆ ಬೆಲೆಗೆ ಸಿಗುವುದರಿಂದ ಅವುಗಳಿಗೆ ಬೇಡಿಕೆ ಹೆಚ್ಚು.

English summary
Government has banned the sale of direct imported or finished imported items at CSD of army.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X