ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಎಸ್, ಐಪಿಎಸ್ ಅಧಿಕಾರಿಗಳು ಗಿಫ್ಟ್ ಕಂಡ್ರೆ ಬೆಚ್ಚುವರಯ್ಯ!

By Mahesh
|
Google Oneindia Kannada News

ನವದೆಹಲಿ, ಏ.19: ದೇಶದ ಐಎಎಸ್, ಐಪಿಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳು ಇನ್ಮುಂದೆ ನೆಂಟರಿಷ್ಟರಿಂದ ಗಿಫ್ಟ್ ತೆಗೆದುಕೊಳ್ಳಬೇಕಾದರೆ ಹಿಂದು ಮುಂದು ನೋಡಬೇಕಾಗುತ್ತದೆ. 5 ಸಾವಿರ ರು.ಗೂ ಅಧಿಕ ಮೊತ್ತದ ಗಿಫ್ಟ್ ಪಡೆಯಬೇಕಾದರೆ ಕೇಂದ್ರ ಸರ್ಕಾರದ ಅನುಮತಿ ಬೇಕಾಗುತ್ತದೆ.

ಉಡುಗೊರೆ ಪಡೆಯಬೇಕಾದರೂ ಸರ್ಕಾರದ ಪರ್ಮಿಷನ್ ಪಡೆಯಬೇಕಾಗುವ ನಿಯಮವೊಂದಕ್ಕೆ ಇತ್ತೀಚೀಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಭಾರತೀಯ ಆಡಳಿತ ಸೇವೆಗಳ ನಿಯಮ 2015ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ.

ಹೊಸ ನಿಯಮದ ಪ್ರಕಾರ ಐಎಎಸ್, ಐಪಿಎಸ್ ಹಾಗೂ ಐಎಫ್‌ಎಸ್ ಗ್ರೇಡ್ ಅಧಿಕಾರಿಗಳು ಐದು ಸಾವಿರ ಮೌಲ್ಯದ ಉಡುಗೊರೆಯನ್ನು ಪಡೆಯುವ ಮುನ್ನ ಕೇಂದ್ರದಿಂದ ಒಪ್ಪಿಗೆ ಪಡೆದುಕೊಂಡೇ ಸ್ವೀಕರಿಸಬೇಕು. ಇಲ್ಲದಿದ್ದರೆ ಶಿಕ್ಷಾರ್ಹ ಅಪರಾಧವಾಗುತ್ತದೆ.

Government assent must for IAS, IPS officers before accepting gifts over Rs 5,000

ಇದುವರೆವಿಗೂ ಅಧಿಕಾರಿಗಳು 25 ಸಾವಿರ ರು ಮೌಲ್ಯದ ಉಡುಗೊರೆಗಳನ್ನು ಪಡೆಯಲು ಕಾನೂನಿನಲ್ಲಿ ಅವಕಾಶವಿತ್ತು.ಈಗ ಎನ್ ಡಿಎ ಸರ್ಕಾರ ನಿಯಮಾವಳಿಗೆ ತಿದ್ದುಪಡಿ ಮಾಡಿದ್ದು, 5 ಸಾವಿರದವರೆಗೆ ಮಾತ್ರ ಉಡುಗೊರೆ ಪಡೆಯಲು ಅವಕಾಶವಿದೆ.

ಸರ್ಕಾರದಿಂದ ಅನುಮತಿ ಪಡೆಯದೆ ಉಡುಗೊರೆ ಸ್ವೀಕರಿಸದೆ ಅದನ್ನು ಭ್ರಷ್ಟಾಚಾರವೆಂದು ಪರಿಗಣಿಸಿ ವಿಚಾರಣೆ ನಡೆಸಲು ಅನುಮತಿ ನೀಡುವ ಅವಕಾಶ ನಿಯಮಾವಳಿಯಲ್ಲಿದೆ. ವಿವಾಹ, ವಾರ್ಷಿಕೋತ್ಸವ, ಧಾರ್ಮಿಕ ಕಾರ್ಯಕ್ರಮಗಳು, ಹುಟ್ಟುಹಬ್ಬ ಸೇರಿದಂತೆ ಮತ್ತಿತರ ಯಾವುದೇ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳು ಹೆಚ್ಚು ಮೌಲ್ಯದ ಉಡುಗೊರೆಗಳನ್ನು ಸ್ವೀಕರಿಸದಂತೆ ಸೂಚನೆ ನೀಡಲಾಗಿದೆ.

ಮೂರು ಭಾರತೀಯ ಆಡಳಿತ ಸೇವೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಅಧಿಕಾರಿಗಳು ಸಚಿವರ ಗಮನಕ್ಕೆ ಉಡುಗೊರೆ ಪಡೆಯುವ ಮುನ್ನ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿದೆ.

ದೇಶದಲ್ಲಿ ಸುಮಾರು 4,802 ಐಎಎಸ್, 3,798 ಐಪಿಎಸ್ ಹಾಗೂ 2,668 ಐಎಫ್ ಒಎಸ್ ಅಧಿಕಾರಿಗಳು ದೇಶದ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿದ್ದಾರೆ. (ಪಿಟಿಐ)

English summary
IAS and IPS officers will now need to take prior permission from the central government before accepting gifts worth more than Rs 5,000. According to the recently amended all India services rules, they also need to inform government if they accept gifts of over Rs 25,000 from their relatives or friends.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X