ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರದ್ದಾದ ನೋಟು ಬದಲಿಸಲು ಸಹಕಾರಿ ಬ್ಯಾಂಕುಗಳಿಗೆ ಅವಕಾಶ

|
Google Oneindia Kannada News

ನವದೆಹಲಿ, ಜೂನ್ 21 : ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್‌ ಗಳು ಸೇರಿದಂತೆ ಇತರ ಬ್ಯಾಂಕ್‌ ಗಳು ಹಾಗೂ ಅಂಚೆ ಕಚೇರಿಗಳು ಹಳೆಯ ನೋಟನ್ನು ಭಾರತೀಯ ರಿಸರ್ವ್‌ ಬ್ಯಾಂಕಿನಲ್ಲಿ ಬದಲಾಯಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ರದ್ದಾಗಿರುವ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಮುಂದಿನ 30 ದಿನಗಳ ಒಳಗೆ ಬದಲಾಯಿಸಲು ಅವಕಾಶ ಕಲ್ಪಿಸಿಕೊಟ್ಟಿದೆ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಗಳು ನವೆಂಬರ್‌ 10ರಿಂದ 14ರವರೆಗೆ ಸಂಗ್ರಹಿಸಿರುವ ನೋಟುಗಳನ್ನು ಹಾಗೂ ಇತರ ಬ್ಯಾಂಕ್‌ ಗಳು ಮತ್ತು ಅಂಚೆ ಕಚೇರಿಗಳು ಡಿಸೆಂಬರ್‌ 30 ಅಥವಾ ಅದಕ್ಕಿಂತ ಮುಂಚಿತವಾಗಿ ಸಂಗ್ರಹಿಸಿರುವ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.

Government Allows Co-Operative Banks To Deposit Old Notes With RBI

ಈ ಕುರಿತು ನಿಯಮ ರೂಪಿಸಲಾಗಿದ್ದು ಈ ನಿಯಮಕ್ಕೆ 'ನಿರ್ದಿಷ್ಟ ಬ್ಯಾಂಕ್‌ ಗಳ ನೋಟುಗಳ ನಿಯಮ, 2017' ಎಂದು ಹೆಸರಿಸಲಾಗಿದೆ.ರದ್ದಾದ ನೋಟುಗಳನ್ನು ಬದಲಿಸಲು ಡಿಸಿಸಿ ಬ್ಯಾಂಕ್‌ ಗಳಿಗೆ ಅವಕಾಶ ನೀಡಬೇಕೆಂದು ಶಿವ ಸೇನಾ ಮತ್ತು ಹಲವು ಸಂಘಟನೆಗಳು ಒತ್ತಾಯ ಮಾಡಿದ್ದವು.

English summary
The Finance Ministry on Tuesday allowed banks, post offices and district central cooperative banks to deposit the scrapped Rs. 500 and 1,000 rupee notes with the Reserve Bank of India within 30 days and exchange the value of notes deposit with the new notes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X