ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ 'ಚಹಾ'ಕ್ಕೆ ರಾಹುಲ್ 'ಹಾಲು' ಬೆರೆಸಿ ಸೇವಿಸಿ

By Mahesh
|
Google Oneindia Kannada News

ಲಕ್ನೋ, ಫೆ.20: 'ರಾಮ ನಾಮ ಪಾಯಸಕ್ಕೆ, ಕೃಷ್ಣ ನಾಮ ಸಕ್ಕರೆ | ವಿಠ್ಠಲ ನಾಮ ತುಪ್ಪವ ಸೇರಿಸಿ, ಬಾಯಿ ಚಪ್ಪರಿಸಿರೋ' | ಎಂದು ಪುರಂದರದಾಸರು ಹಾಡಿದ್ದು ನೆನಪಿರಬಹುದು. ಈಗ ಲೋಕಸಭೆ ಚುನಾವಣೆ ವೇಳೆಯಲ್ಲಿ ಸಾರ್ವಜನಿಕರಿಗೆ ಚಹಾ ಮಾರಲು ಹೊರಟಿರುವ ಮೋದಿಗೆ ವಿರುದ್ಧವಾಗಿ ರಾಹುಲ್ ಹಾಲು ಮಾರಲು ಹೊರಟ್ಟಿದ್ದಾರೆ. ಈಗ ಮೋದಿ 'ಚಹಾ'ಕ್ಕೆ ರಾಹುಲ್ 'ಹಾಲು' ಬೆರೆಸಿ ಸೇವಿಸಿರೋ ಎನ್ನುವ ಕಾಲ. ಜತೆಗೆ ಸಕ್ಕರೆ ಸಿಕ್ಕರೆ ಜನತೆ ಎಲ್ಲವನ್ನು ಬೆರೆಸಿ ಸೇವಿಸಿ ಆನಂದಿಸಬಹುದು.

ಹೌದು, ಬಿಜೆಪಿ ಪ್ರಧಾನಿ ಅಭ್ಯರ್ಥಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಪ್ರಚಾರ ತಂತ್ರಗಳು ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರ ತಂತ್ರಗಳು ಒಂದನ್ನೊಂದು ಹೋಲುತ್ತವೆ ಎಂಬ ಕೂಗು ಇರುವ ನಡುವೆಯೇ ಎರಡರಿಂದ ಜನಕ್ಕೆ ಏನು ಲಾಭ ಎಂಬ ಪ್ರಶ್ನೆಯೂ ಇದ್ದೇ ಇದೆ.

ಮೋದಿ ಅವರು 'ಚಾಯ್ ಪೇ ಚರ್ಚಾ' ಆರಂಭಿಸಿ ದೇಶದೆಲ್ಲೆಡೆ ಸಾವಿರಕ್ಕೂ ಅಧಿಕ ಚಹಾದಂಗಡಿ ಆರಂಭಿಸಿ ಬಿಜೆಪಿಯತ್ತ ಜನರನ್ನು ಸೆಳೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಕಾಂಗೆರ್ಸ್ ಈಗ ಹಾಲು ಮಾರಲು ಹೊರಟಿದೆ. ಲಕ್ನೋ, ಗೋರಖ್ ಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಹೆಸರಿನಲ್ಲಿ ಉಚಿತವಾಗಿ ಕಾಗದದ ಕಪ್ ಗಳಲ್ಲಿ ಹಾಲು ಹಂಚಿರುವ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

Now RaGa milk to counter NaMo tea!

ಉತ್ತರಪ್ರದೇಶದ ಪೂರ್ವ ಭಾಗದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿ ಸಮಾಜವಾದಿ ಪಕ್ಷದ ಧುರೀಣ ಮುಲಾಯಂ ಸಿಂಗ್ ಯಾದವ್ ನಂತರ ನರೇಂದ್ರ ಮೋದಿ ಅವರು ಚುನಾವಣೆ ಪ್ರಚಾರ ಮಾಡಿದ್ದರು. ಇದಾದ ನಂತರ ಹಾಲು ಮಾರುವ ತಂತ್ರವನ್ನು ಕಾಂಗ್ರೆಸ್ಸಿಗರು ಹಮ್ಮಿಕೊಂಡಿದ್ದಾರೆ.

ಮೋದಿ ಅವರ ತಂತ್ರಕ್ಕೆ ಪ್ರತಿತಂತ್ರ ಹೂಡುವುದೇ ನಮ್ಮ ಉದ್ದೇಶ. ಬ್ಲಾಕ್ ಮಟ್ಟದಿಂದ ಹಾಲು ಹಂಚಿಕೆ ಆರಂಭಿಸಲಿದ್ದೇವೆ ದಿನಕ್ಕೆ 50 ಲೀಟರ್ ನಷ್ಟು ಉಚಿತವಾಗಿ ಹಾಲು ನೀಡುತ್ತೇವೆ ಎಂದು ಕಾಂಗ್ರೆಸ್ಸಿನ ಗೋರಖ್ ಪುರ ಜಿಲ್ಲಾಧ್ಯಕ್ಷ ಸಯ್ಯದ್ ಜಮಾಲ್ ಹೇಳಿದ್ದಾರೆ. ಹಾಲು ಹಂಚಿಕೆ ಜತೆಗೆ ಚಹಾ ಆರೋಗ್ಯಕ್ಕೆ ಹಾನಿಕರ ಅದರಂತೆ ಮೋದಿ ಕೂಡಾ, ರಾಹುಲ್ ಹಾಲಿನಷ್ಟೇ ಪರಿಶುದ್ಧರು ಹಾಲು ಸೇವಿಸಿ ರಾಹುಲ್ ಗೆಲ್ಲಿಸಿ ಎಂದು ಪ್ರಚಾರ ಮಾಡಲಾಗುತ್ತಿದೆ. ಒಟ್ಟಾರೆ ಹಾಲು, ಚಹಾ ಸೇವಿಸಿ ಜನರು ಸಂತೃಪ್ತಿ ಹೊಂದುತ್ತಿದ್ದಾರೆ. ಎರಡು ಪಕ್ಷಗಳ ವ್ಯವಹಾರ ಕಂಡು ಸಮಾಜವಾದಿ ಪಕ್ಷ ಕೂಡಾ ಬೇರೆ ರೀತಿ ತಂತ್ರ ಹೆಣೆಯಲು ಸಿದ್ಧತೆ ನಡೆಸಿದೆ(ಐಎಎನ್ ಎಸ್)

English summary
The Congress is seeking to counter NaMo chai with RaGa (Rahul Gandhi) milk. A week after BJP's prime ministerial candidate Narendra Modi held a 'Chai Chaupal' and interacted with people at 1,000 places in the country, Congress leaders here have begun to sell milk in an one-upmanship campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X