ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಗನಸಖಿ ಸಾವು: ಗೋಪಾಲ ಕಾಂಡಾಗೆ ಜಾಮೀನು ಮಂಜೂರು

By Mahesh
|
Google Oneindia Kannada News

ಹರ್ಯಾಣ, ಮಾ.4:ಮಾಜಿ ಗಗನಸಖಿ ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಹರ್ಯಾಣದ ಮಾಜಿ ಸಚಿವ ಗೋಪಾಲ್ ಗೋಯಲ್ ಕಾಂಡ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ದೆಹಲಿಯ ರೋಹಿಣಿ ಕೋರ್ಟ್ ಮಂಗಳವಾರ ಗೋಪಾಲ್ ಅವರಿಗೆ ಸಿಕ್ಕಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 14 ತಿಂಗಳುಗಳ ಜೈಲಿನಲ್ಲಿದ್ದ ಕಾಂಡ ಅವರು ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಈ ಮನವಿಯನ್ನು ಪುರಸ್ಕರಿಸಿದ ದೆಹಲಿಯ ಹೆಚ್ಚುವರಿ ಸೆಷನ್ಸ್ ಕೋರ್ಟ್ ಜಡ್ಜ್ ಎಂಸಿ ಗುಪ್ತಾ ಅವರು ಮಧ್ಯಂತರ ಜಾಮೀನು ನೀಡಿದ್ದರು. ಒಂದು ತಿಂಗಳ ಕಾಲ ಚುನಾವಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜೈಲಿಗೆ ಹಿಂತಿರುಗುವಂತೆ ಕೋರ್ಟ್ ಸೂಚಿಸಿತ್ತು.

Gopal Kanda gets bail in Geetika Sharma suicide case

ಗೀತಿಕಾ ಆತ್ಮಹತ್ಯಾ ಪ್ರಕರಣದ ಪ್ರಮುಖ ಆರೋಪಿ ಹರ್ಯಾಣದ ಮಾಜಿ ಸಚಿವ ಗೋಪಾಲ್ ಕಾಂಡ ಅವರ ವಿರುದ್ಧ ಹಾಕಿರುವ ಕೇಸುಗಳನ್ನು ಹಿಂಪಡೆಯುವಂತೆ ಗೀತಿಕಾ ಅವರ ಕುಟುಂಬದ ಮೇಲೆ ಭಾರಿ ಒತ್ತಡ ಹೇರಲಾಗಿತ್ತು. ಕಾಂಡ ಅವರ ಕಡೆಯವರ ಒತ್ತಡ ತಾಳಲಾರದೆ ಗೀತಿಕಾ ಅವರ ತಾಯಿ ಸಾವಿಗೆ ಶರಣಾಗಿದ್ದರು.

23 ವರ್ಷ ವಯಸ್ಸಿನ ಗೀತಿಕಾ ಅವರು ಗೋಪಾಲ್ ಕಾಂಡಾ ಒಡೆತನದ ಎಂಡಿಎಂಎಲ್ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿ ಕಾರ್ಯ ನಿರ್ವಹಿಸಿದ್ದರು. ಗೀತಿಕಾ ದೆಹಲಿಯ ವಾಯುವ್ಯ ಭಾಗದಲ್ಲಿರುವ ಅಶೋಕ್ ವಿಹಾರ್ ನ ಅಪಾರ್ಟ್ಮೆಂಟ್ ನಲ್ಲಿ ಆಗಸ್ಟ್ 5,2012ರಂದು ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಗೀತಿಕಾ ಅವರ ಸೂಸೈಡ್ ನೋಟ್ ನಲ್ಲಿ ಗೋಪಾಲ್ ಕಾಂಡಾ, ಕಾಂಡಾ ಬಂಟ ಅರುಣ್ ಚಡ್ಡಾ ಅವರ ಮೇಲೆ ಆರೋಪ ಎಲ್ಲಾ ರೀತಿಯ ಕಿರುಕುಳ ಹೊರೆಸಲಾಗಿತ್ತು. ಪ್ರಕರಣ ಕುತ್ತಿಗೆಗೆ ಬಂದ ಮೇಲೆ ಹರ್ಯಾಣದ ಸಚಿವ ಸ್ಥಾನಕ್ಕೆ ಗೋಪಾಲ್ ಕಾಂಡಾ ರಾಜೀನಾಮೆ ನೀಡಿದ್ದರು.

English summary
A Delhi court on Tuesday granted bail to former Haryana minister Gopal Kanda. Kanda is accused of abetting the suicide of a former airhostess, Geetika Sharma, who worked in the now defunct MDLR Airlines. The court had denied bail to Kanda in October last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X