ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 6ರಿಂದ ಕಚೇರಿಯಲ್ಲಿ ಕೆಲಸ ಮಾಡಲು ಗೂಗಲ್ ಒಪ್ಪಿಗೆ

|
Google Oneindia Kannada News

ಬೆಂಗಳೂರು, ಮೇ 28 : ಗೂಗಲ್ ಜುಲೈ 6ರಿಂದ ಕಚೇರಿಯನ್ನು ತೆರೆಯುವುದಾಗಿ ಘೋಷಣೆ ಮಾಡಿದೆ. ಕಚೇರಿ ಆರಂಭವಾದರೂ ಶೇ 20ರಷ್ಟು ಸಿಬ್ಬಂದಿಗಳು ಮಾತ್ರ ಕಚೇರಿಯಿಂದ ಕೆಲಸ ಮಾಡಬೇಕಿದೆ. ಉಳಿದವರು ಮನೆಯಿಂದಲೇ ಕೆಲಸ ಮಾಡಬೇಕು.

ಮಾರ್ಚ್‌ನಲ್ಲಿ ಕೊರೊನಾ ಭೀತಿ ಹೆಚ್ಚಾದಾಗ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವಂತೆ ಗೂಗಲ್ ನಿರ್ದೇಶನ ನೀಡಿತ್ತು. ಈಗ ಜುಲೈ 6ರಿಂದ ಶೇ 20ರಷ್ಟು ಉದ್ಯೋಗಿಗಳು ಕಚೇರಿಯಿಂದ ಕೆಲಸ ಮಾಡಬಹುದು ಎಂದು ಹೇಳಿದೆ.

ಕೊರೊನಾ ಹಾವಳಿ ನಡುವೆ ದುಡಿಯುವ ಕಾರ್ಮಿಕರಿಗೆ ಗೂಗಲ್ ನಮನ ಕೊರೊನಾ ಹಾವಳಿ ನಡುವೆ ದುಡಿಯುವ ಕಾರ್ಮಿಕರಿಗೆ ಗೂಗಲ್ ನಮನ

ಕಚೇರಿಗೆ ಉದ್ಯೋಗಿಗಳು ಆಗಮಿಸುವುದನ್ನು ರೋಟೇಷನ್ ಆಧಾರದ ಮೇಲೆ ತೀರ್ಮಾನ ಮಾಡಲಾಗುತ್ತದೆ ಎಂದು ಗೂಗಲ್ ಹೇಳಿದೆ. ಪ್ರತಿ ವಾರ ಒಬ್ಬರ ಸರದಿ ಬದಲಾಗಲಿದೆ. ಸೆಪ್ಟೆಂಬರ್‌ನಲ್ಲಿ ಶೇ 30ರಷ್ಟು ಉದ್ಯೋಗಿಗಳು ಕಚೇರಿಗೆ ಬರಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದೆ.

ಹೂವಿಂದ ಹೂವಿಗೆ ಹಾರುವ ದುಂಬಿ: ವಿಶ್ವ ಭೂ ದಿನಕ್ಕೆ ಗೂಗಲ್ ವಿಶೇಷ ಹೂವಿಂದ ಹೂವಿಗೆ ಹಾರುವ ದುಂಬಿ: ವಿಶ್ವ ಭೂ ದಿನಕ್ಕೆ ಗೂಗಲ್ ವಿಶೇಷ

 Google To Reopen Office From July 6 With Limited Employees

ಮನೆಯಿಂದಲೇ ಕೆಲಸ ಮಾಡಲು ಗೂಗಲ್ ಉದ್ಯೋಗಿಗಳಿಗೆ ಪ್ರೋತ್ಸಾಹ ನೀಡಲಿದೆ. ಇದಕ್ಕಾಗಿ ಮನೆಯಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು 1000 ಯುಎಸ್ ಡಾಲರ್ ಹಣವನ್ನು ಉದ್ಯೋಗಿಗಳಿಗೆ ನೀಡಲಿದೆ.

ಸಂಸ್ಥೆಯಿಂದಲ್ಲದೆ, ವೈಯಕ್ತಿಕವಾಗಿಯೂ ಭಾರತಕ್ಕೆ ದೇಣಿಗೆ ನೀಡಿದ ಗೂಗಲ್ ಸಿಇಒಸಂಸ್ಥೆಯಿಂದಲ್ಲದೆ, ವೈಯಕ್ತಿಕವಾಗಿಯೂ ಭಾರತಕ್ಕೆ ದೇಣಿಗೆ ನೀಡಿದ ಗೂಗಲ್ ಸಿಇಒ

'ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಿದ ಮೇಲೆಯೂ ಮನೆಯಿಂದ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚನೆ ನೀಡಲಾಗುತ್ತದೆ" ಎಂದು ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

English summary
From July 6, 2020 google will allow limited employees to work from office. It also giving usd 1000 stipend for home office equipment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X