ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹಾವಳಿ ನಡುವೆ ದುಡಿಯುವ ಕಾರ್ಮಿಕರಿಗೆ ಗೂಗಲ್ ನಮನ

|
Google Oneindia Kannada News

ನವದೆಹಲಿ, ಏಪ್ರಿಲ್.15: ವಿಶ್ವವನ್ನೇ ವ್ಯಾಪಿಸಿರುವ ಕೊರೊನಾ ವೈರಸ್ ಹಾವಳಿ ನಡುವೆಯೂ ಪ್ರಪಂಚದಾದ್ಯಂತ ಸಾರ್ವಜನಿಕರ ಮೂಲಭೂತ ಅಗತ್ಯತೆಗಳನ್ನು ಪೂರೈಸುವ ಸರಕು ಸಾಗಾಣಿಕೆ ಕಾರ್ಮಿಕರು, ವಿತರಕರಿಗೆ ಗೂಗಲ್ ವಿಶೇಷ ಗೌರವವನ್ನು ಅರ್ಪಿಸಿದೆ.

ಕೊವಿಡ್19 ಭೀತಿಯಲ್ಲಿ ಜನರು ಆತಂಕದಲ್ಲಿ ಕಾಲ ಕಳೆಯುತ್ತಿರುವ ಪರಿಸ್ಥಿತಿ ನಡುವೆ ಮನೆ ಮನೆಗೆ ಆಹಾರ ಪದಾರ್ಥವನ್ನು ವಿತರಿಸುತ್ತಿರುವ ವಿತರಕರು ಮತ್ತು ಮೂಲಭೂತ ಅಗತ್ಯ ವಸ್ತುಗಳನ್ನು ಸಾಗಾಣಿಕೆ ಮಾಡುತ್ತಿರುವ ಕಾರ್ಮಿಕರಿಗೆ ಗೂಗಲ್ ಡೂಡಲ್ ಮೂಲಕ ಧನ್ಯವಾದ ತಿಳಿಸಿದೆ.

ಡಾಕ್ಟರ್, ನರ್ಸ್, ವೈದ್ಯಕೀಯ ಸಿಬ್ಬಂದಿಗೆ ಗೂಗಲ್ ಧನ್ಯವಾದಡಾಕ್ಟರ್, ನರ್ಸ್, ವೈದ್ಯಕೀಯ ಸಿಬ್ಬಂದಿಗೆ ಗೂಗಲ್ ಧನ್ಯವಾದ

ಕಳೆದ ಮಾರ್ಚ್.13ರಂದು ಕೊರೊನಾ ವೈರಸ್ ವಿರುದ್ಧ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹಗಲಿರುಳು ದುಡಿಯುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಗೂಗಲ್ ಡೂಡಲ್ ಮೂಲಕ ಧನ್ಯವಾದ ತಿಳಿಸಿತ್ತು. ಇದರ ಬೆನ್ನಲ್ಲೇ ಬುಧವಾರ ಕಾರ್ಮಿಕ ವಲಯಕ್ಕೆ ಗೂಗಲ್ ಧನ್ಯವಾದ ಹೇಳಿದೆ.

Google Thanks To Packing, Shipping, Delivery Workers

ವಿಶ್ವದಾದ್ಯಂತ ಮಹಾಮಾರಿಗೆ 1.26 ಲಕ್ಷ ಮಂದಿ ಬಲಿ:

ಕೊರೊನಾ ವೈರಸ್ ಕೂಪಕ್ಕೆ ಸಿಲುಕಿ ಇದುವರೆಗೂ ವಿಶ್ವದಾದ್ಯಂತ 1,26,607 ಮಂದಿ ಪ್ರಾಣ ಬಿಟ್ಟಿದ್ದಾರೆ. 19,98,138 ಜನರಲ್ಲಿ ಮಾರಕ ಸೋಂಕು ಇರುವುದು ದೃಢಪಟ್ಟಿದ್ದು, ಇದುವರೆಗೂ 4,78,741 ಮಂದಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ಪೈಕಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಗ್ರಸ್ಥಾನದಲ್ಲಿದ್ದು ಮಾರಕ ರೋಗಕ್ಕೆ ಇದುವರೆಗೂ 26,047 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 6,13,886 ಮಂದಿಯಲ್ಲಿ ಕೊರೊನಾ ವೈರಸ್ ಇರುವುದು ಪತ್ತೆಯಾಗಿದೆ.

English summary
Coronavirus: Google Thanks To Packing, Shipping, Delivery Workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X