ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವ ಸಂಭ್ರಮ ಹೆಚ್ಚಿಸಿದ ಗೂಗಲ್ ಡೂಡ್ಲ್

|
Google Oneindia Kannada News

ನವದೆಹಲಿ, ಜನವರಿ 26: ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಮುಖಪುಟದಲ್ಲಿ ಇಂದು ಭಾರತದ ಗಣತಂತ್ರ ದಿನದ ಅಂಗವಾಗಿ ವಿಶೇಷ ಡೂಡ್ಲ್ ಪ್ರದರ್ಶಿಸಿದೆ.

ಭಾರತದ ವಾಸ್ತುಶಿಲ್ಪ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಬಯೋ ವೈವಿಧ್ಯ ಸಾರುವ ಡೂಡ್ಲ್ ಇದಾಗಿದೆ. ಸಿಂಗಪುರ ಮೂಲದ ಕಲಾವಿದ ಮೀರೂ ಸೇಠ್ ಇದನ್ನು ರಚಿಸಿದ್ದಾರೆ. ರಾಷ್ಟ್ರಪತಿ ಭವನದ ಹಿನ್ನೆಲೆಯಲ್ಲಿ ಮರ, ಪ್ರಾಣಿ, ಪಕ್ಷಿಗಳ ಆವರಣವನ್ನು ತುಂಬಿದ್ದಾರೆ. ಜೊತೆಗೆ ಇಂಡಿಯಾ ಗೇಟ್, ತಾಜ್ ಮಹಲ್ ಇದೆ. ರಾಷ್ಟ್ರಪಕ್ಷಿ ನವಿಲು, ಸಾಂಪ್ರದಾಯಿಕ ಕಲೆ, ಜವಳಿ, ಸಂಗೀತ, ನೃತ್ಯ ವೈವಿಧ್ಯವನ್ನು ತುಂಬಿಕೊಂಡಿದೆ.

ಡೂಡ್ಲ್ ಚಿತ್ರ: ಭಾರತ ಸೇರಿದಂತೆ ವಿಶ್ವದ ಅನೇಕ ವಿದ್ಯಮಾನಗಳು, ಐತಿಹಾಸಿಕ ದಿನಗಳು, ಹಬ್ಬ ಹರಿದಿನಗಳು, ಆಚರಣೆಗಳ ಸಂದರ್ಭದಲ್ಲಿ ಗೂಗಲ್ ತನ್ನ ಡೂಡ್ಲ್ ರೇಖಾಚಿತ್ರದ ಮೂಲಕ ಸಾಧಕರನ್ನು ಸ್ಮರಿಸುವ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಬಂದಿದೆ.

Google marks Indias 71st Republic Day with doodle by Singapore-based illustrator

ಗೂಗಲ್ ಲೋಗೋವನ್ನು ಕಲಾತ್ಮಕವಾಗಿ ರೂಪಿಸುವುದಕ್ಕೆ ಡೂಡಲ್ಸ್ ಎನ್ನಲಾಗುತ್ತದೆ. ಪ್ರತಿ ವರ್ಷ ಶಾಲಾ ಮಕ್ಕಳಿಗೆ ಡೂಡ್ಲ್ ರಚನೆ ಸ್ಪರ್ಧೆ ಏರ್ಪಡಿಸಲಾಗುತ್ತದೆ.

English summary
Search engine giant Google is celebrating India's 71st Republic Day 2020 with a beautiful doodle depicting country's architectural and cultural legacy as well as its rich bio-diversity. The doodle is illustrated by Singapore-based artist Meroo Seth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X