ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೊದಲ ಪ್ರಧಾನಿ ಮೋದಿಯಂತೆ! ಇದೇನು 'ಗೂಗಲ'ಮ್ಮನ ಅವಾಂತರ!?

|
Google Oneindia Kannada News

Recommended Video

ಗೂಗಲ್ ಪ್ರಕಾರ ಭಾರತದ ಮೊದಲ ಪ್ರಧಾನಿ ನರೇಂದ್ರ ಮೋದಿಯಂತೆ | ಷಾಕಿಂಗ್ | Oneindia Kannada

ನವದೆಹಲಿ, ಏಪ್ರಿಲ್ 26: ಭಾರತದ ಮೊದಲ ಪ್ರಧಾನಿ ಯಾರು? ಪುಟ್ಟ ಮಗುವಾದರೂ ಅದಕ್ಕೆ ಥಟ್ ಅಂತ ಉತ್ತರಿಸಿಬಿಡುತ್ತದೆ, 'ಜವಹರಲಾಲ್ ನೆಹರು' ಎಂದು! ಆದರೆ ಮಾಹಿತಿಯ ಕಣಜ 'ಗೂಗಲಮ್ಮ' ನ ಬಳಿ ಇದೇ ಪ್ರಶ್ನೆ ಟೈಪಿಸಿ ನೋಡಿ! ಉತ್ತರವೇನೋ ನೆಹರು ಅಂತ ಬರುತ್ತೆ, ಸರಿ. ಆದರೆ ಚಿತ್ರ? ನೆಹರು ಅವರ ಚಿತ್ರದ ಬದಲು ನೆವರು ಕುಟುಂಬದ ರಾಜಕೀಯ ಬದ್ಧ ವೈರಿ ನರೇಂದ್ರ ಮೋದಿಯವರ ಚಿತ್ರ ಬರಬೇಕೇ?!

ಹೌದು ಗೂಗಲ್ ನಲ್ಲಿ 'India first PM' ಎಂದು ಟೈಪಿಸಿದರೆ ಜವಹರಲಾಲ್ ನೆಹರು ಎಂಬ ಉತ್ತರ ಬರುತ್ತದೆ. ಆದರೆ ಚಿತ್ರ ಮಾತ್ರ ಹಾಲಿ ಪ್ರಧಾನಿ ನರೇಂದ್ರ ಮೋದಿಯವರದ್ದು. ಇತ್ತೀಚೆಗಷ್ಟೆ ಗಮನಕ್ಕೆ ಬಂದ ಈ ಸಂಗತಿಯ ಕುರಿತು ಕ್ರಮ ಕೈಗೊಳ್ಳಲು ಗೂಗಲ್ ಆಡಳಿತ ಮಂಡಳಿ ಗಂಭೀರವಾಗಿಬಿಟ್ಟಿದೆಯೋ ಗೊತ್ತಿಲ್ಲ. ಆದರೆ ಟ್ವಿಟ್ಟಿಗರಿಗಂತೂ ಈ ಸ್ಕ್ರೀನ್ ಶಾಟ್ ಹಬ್ಬದೂಟ ಬಡಿಸಿದೆ!

ಆನ್ ಲೈನ್ ಸಮೀಕ್ಷೆ: ನರೇಂದ್ರ ಮೋದಿ ಏಕಮೇವಾದ್ವಿತೀಯ ಆನ್ ಲೈನ್ ಸಮೀಕ್ಷೆ: ನರೇಂದ್ರ ಮೋದಿ ಏಕಮೇವಾದ್ವಿತೀಯ

ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಸಾಕಷ್ಟು ಚರ್ಚೆ ಎದ್ದಿರುವ ಕಾರಣ ಎಚ್ಚೆತ್ತಿಕೊಂಡಿರುವ ಗೂಗಲ್ ಮೋದಿ ಚಿತ್ರವನ್ನು ಅಲ್ಲಿಂದ ಅಳಿಸಿದಂತಿದೆ. ಸದ್ಯಕ್ಕೆ ಮೋದಿ ಚಿತ್ರ ಅಲ್ಲಿ ಕಾಣಿಸುತ್ತಿಲ್ಲವಾದರೂ, ಚಾಲಾಕಿಗಳು ತೆಗೆದಿಟ್ಟ ಸ್ಕ್ರೀನ್ ಶಾತ್ ಗೂಗಲಮ್ಮನನ್ನು ಅಣುಕಿಸುತ್ತಿದೆ!

ಹೀಗಾದರೆ ಗೂಗಲ್ ಅನ್ನು ಹೇಗೆ ನಂಬೋದು?

ಇದು ಗೂಗಲ್ ಅತ್ಯಂತ ದೊಡ್ಡ ಪ್ರಮಾದ. ಇಂಡಿಯಾ ಫಸ್ಟ್ ಪಿಎಂ' ಎಂದು ಹುಡುಕಿದರೆ ಮೋದಿಯವರ ಚಿತ್ರ ಬರುತ್ತದೆ. ನಾವು ಎಲ್ಲ ಮಾಹಿತಿಗೂ ಗೂಗಲ್ ಮೇಲೆ ಕುರುಡಾಗಿ ಅವಲಂಬಿತವಾಗಿದ್ದೇವೆ. ಹೀಗಾದರೆ ಗೂಗಲ್ ಅನ್ನು ನಂಬುವುದು ಹೇಗೆ ಎಂದು ಕೇಳಿದ್ದಾರೆ ರವಿ ಎಸ್ ಪಾಂಡೆ.

ಗೂಗಲ್ ಇಂಡಿಯಾಕ್ಕೆ ರಮ್ಯಾ ಧಮ್ಕಿ!

ಏನಿದು? ನಿಮ್ಮ ಯಾವ ಅಲ್ಗಾರಿದಮ್ ಇದಕ್ಕೆ ಅನುಮತಿ ನೀಡಿದೆ? ಎಂದು ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ರಮ್ಯಾ ಗೂಗಲ್ ಇಂಡಿಯಾಕ್ಕೆ ಧಮ್ಕಿ ಹಾಕಿ ಪ್ರಶ್ನಿಸಿದ್ದಾರೆ!

ನೆಹರು ಥರ ಇದ್ದಾರಾ ಮೋದಿ?

ಬಹುಶಃ ಗೂಗಲ್ ಗೆ ನರೇಂದ್ರ ಮೋದಿಯವರು ಜವಹರಲಾಲ್ ನೆಹರು ಥರ ಕಾಣುತ್ತಾರೆ ಅನ್ನಿಸುತ್ತೆ ಎಂದು ಕಾಲೆಳೆದಿದ್ದಾರೆ ನವ್ ಅಗ್ನಿಹೋತ್ರಿ.

ಗೂಗಲ್ ಹೇಳುತ್ತಿರೋದು ಹೀಗೆ...

ಬಹುಶಃ ಗೂಗಲ್, ಯಾವ ಪ್ರಧಾನಿ 'India first' ಎಂಬ ಉದ್ದೇಶ ಇಟ್ಟುಕೊಂಡಿದ್ದಾರೋ ಅವರ ಚಿತ್ರ ತೋರಿಸುತ್ತಿದೆ ಎನ್ನಿಸುತ್ತದೆ ಎಂದಿದ್ದಾರೆ ಮೋದಿ ಅಭಿಮಾನಿಯೊಬ್ಬರು.

Array

ಮೋದಿ ಕೆಲಸವನ್ನು ಗೂಗಲ್ ಕೂಡ ಮೆಚ್ಚಿದೆ!

ಗೂಗಲ್ ನಲ್ಲಿ ಇಂಡಿಯಾ ಫಸ್ಟ್ ಪಿಎಂ ಎಂದು ಟೈಪಿಸಿ ನೋಡಿ. ಅದರಲ್ಲಿ ನೆಹರು ಚಿತ್ರದ ಬದಲಾಗಿ ಮೋದಿ ಚಿತ್ರ ಬರುತ್ತದೆ. ಅಂದರೆ ಗೂಗಲ್ ಸಹ ಮೋದಿಯವರ ಕೆಲಸವನ್ನು ಮೆಚ್ಚಿದೆ ಎಂದಾಯ್ತು ಎಂದಿದ್ದಾರೆ ದೇವ್.

English summary
Type 'India first PM' and Google is throwing up accurate results, with Jawaharlal Nehru's name appearing on the Wikipedia link. The only problem with this is the photo - it is of current Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X