ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯನ್ನು ಕ್ರಿಮಿನಲ್ ಎಂದ ಗೂಗಲ್ ಗೆ ನೋಟಿಸ್

By Mahesh
|
Google Oneindia Kannada News

ಅಲಹಾಬಾದ್, ಜುಲೈ 20: ಸರ್ಚ್ ಇಂಜಿನ್ ಗೂಗಲ್ ನಲ್ಲಿ ವಿಶ್ವದ ಟಾಪ್ 10 ಕ್ರಿಮಿನಲ್ ಗಳ ಪಟ್ಟಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಕಾಣಿಸಿಕೊಂಡಿದ್ದು ಗೊತ್ತಿರಬಹುದು. ಈ ಪ್ರಮಾದಕ್ಕೆ ಈಗ ಗೂಗಲ್ ಸಂಸ್ಥೆ ಬೆಲೆ ತೆರಬೇಕಾಗಿದೆ. ಅಲಹಾಬಾದ್ ಕೋರ್ಟ್ ವೊಂದು ಗೂಗಲ್ ಸಂಸ್ಥೆ ಹಾಗೂ ಸಿಇಒ ಸುಮ್ದರ್ ಪಿಚೈ ಅವರಿಗೆ ನೋಟಿಸ್ ಜಾರಿಗೊಳಿಸಿದೆ.

ಅಲಹಾಬಾದ್ ನ್ಯಾಯಾಲಯವೊಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೂಗಲ್ ಸಂಸ್ಥೆಯ ಸಿಇಒ ಸುಂದರ್ ಪಿಚೈ ಹಾಗೂ ಭಾರತದ ಗೂಗಲ್ ಮುಖ್ಯಸ್ಥ ರಾಜನ್ ಆನಂದನ್​ಗೆ ನೋಟಿಸ್ ಕಳುಹಿಸಿದೆ.['ಸ್ಟ್ರೀಟ್‌ ವ್ಯೂ'ಗೆ ಅನುಮತಿ, ಉಗ್ರರಿಗೆ ಮಾಹಿತಿ?]

Google in Trouble For Listing PM Modi Among 'Top 10 Criminals Of The World'


ಅಪರಾಧಿಗಳ ಪಟ್ಟಿಯಿಂದ ಮೋದಿ ಹೆಸರು ತೆಗೆದುಹಾಕುವಂತೆ ಮಾಡಿದ ಮನವಿಗೆ ಗೂಗಲ್ ಉತ್ತರಿಸದ ಹಿನ್ನೆಲೆಯಲ್ಲಿ ಅರ್ಜಿದಾರರು ಪ್ರಕರಣದ ವಿಚಾರಣೆ ನಡೆಸುವಂತೆ ಕೋರ್ಟಿನಲ್ಲಿ ಮನವಿ ಮಾಡಿಕೊಂಡಿದ್ದರು. ವಿಚಾರಣೆ ಬಳಿಕ ನ್ಯಾಯಾಲಯ ಗೂಗಲ್​ಗೆ ನೋಟಿಸ್ ಜಾರಿ ಮಾಡಲಾಗಿದೆ.[ಕ್ರಿಮಿನಲ್ಸ್ ಜೊತೆ ಮೋದಿ ಚಿತ್ರ, ಗೂಗಲ್ ಕ್ಷಮೆ..ಆದರೆ]

2015 ಜೂನ್​ನಲ್ಲಿ ಈ ಪ್ರಮಾದವನ್ನು ಒಪ್ಪಿಕೊಂಡು ಗೂಗಲ್ ಸಂಸ್ಥೆ ಕ್ಷಮೆ ಕೇಳಿತ್ತು. ಆದರೆ, ಇದು ಗೂಗಲ್ ಸಂಸ್ಥೆಯ ಅಭಿಪ್ರಾಯವಲ್ಲ, ಹಲವು ವರದಿಗಳ ಆಧಾರದ ಮೇಲೆ ಗೂಗಲ್ ಸರ್ಚ್ ನೀಡುವ ಫಲಿತಾಂಶ ಇದಾಗಿದೆ. ಇಂಥ ತಪ್ಪುಗಳನ್ನು ತೆಗೆದುಹಾಕಲು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿತ್ತು.

English summary
An Allahabad court has issued a notice to search engine giant Google after PM Narendra Modi's image propped-up in the search for top 10 criminals of the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X