ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವರಸಾಯನಶಾಸ್ತ್ರಜ್ಞ ಹರಗೋಬಿಂದ್ ಖುರಾನಗೆ ಗೂಗಲ್ ನಮನ

By Mahesh
|
Google Oneindia Kannada News

ಬೆಂಗಳೂರು, ಜನವರಿ 09: ಇಂಡೋ ಅಮೆರಿಕನ್ ಜೀವರಸಾಯನಶಾಸ್ತ್ರಜ್ಞ ಹರಗೋಬಿಂದ್ ಖುರಾನ ಅವರ 96ನೇ ಹುಟ್ಟುಹಬ್ಬದ ಅಂಗವಾಗಿ ಡೂಡ್ಲ್ ಮೂಲಕ ಗೂಗಲ್ ನಮನ ಸಲ್ಲಿಸಿದೆ.

ಕೃತಕವಾಗಿ ವಂಶವಾಹಿಯನ್ನು ಸೃಷ್ಟಿಸಿ.ಎಲ್ಲಾ ಜೀವಿಗಳಲ್ಲೂ ಇರುವ ಸೂಕ್ಷ್ಮ ಜೀವಕೋಶಗಳ ಕೋಶಬಿಂದುವಿನಲ್ಲಿ 'ಡಿಅಕ್ಸಿರೈಬೊ ನ್ಯೂಕ್ಲಿಯಿಕ್ ಆಮ್ಲ'(DNA) ಎಂಬ ರಾಸಾಯನಿಕವಿರುತ್ತದೆ. ಈ ಆಮ್ಲವೇ 'ವಂಶಪಾರಂಪರತೆ' ಅಥವಾ 'ಅನುವಂಶೀಯತೆ'ಯನ್ನು ನಿರ್ಧರಿಸುತ್ತದೆ ಎಂದು ಪ್ರಪಂಚಕ್ಕೆ ಸಾರಿದ ವಿಜ್ಞಾನಿ ಹರಗೋಬಿಂದ್ ಅವರು ಪಂಜಾಬಿನ ರಾಯಪುರದವರು.

ರಸಋಷಿ ಕುವೆಂಪುಗೆ ಗೂಗಲ್ ಡೂಡಲ್ ನಮನರಸಋಷಿ ಕುವೆಂಪುಗೆ ಗೂಗಲ್ ಡೂಡಲ್ ನಮನ

ರಾಯಪುರದ ಬಡ ಕುಟುಂಬದಲ್ಲಿ ಜನಿಸಿದ ಹರಗೋಬಿಂದ್ ಅವರು ನಂತರ ಲಾಹೋರ್ ನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿದರು. ಪಂಜಾಬ್ ವಿವಿಯಲ್ಲಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಇಂಗ್ಲೆಂಡಿನ ಲಿವರ್ ಪೂಲ್ ವಿವಿಯಲ್ಲಿ ಪಿಎಚ್ ಡಿ ಪಡೆದರು.

Google honours Har Gobind Khorana on his 96th Birthday

ಕಿಣ್ವ ವಿಜ್ಞಾನ ಸಂಶೋಧಕರಾಗಿ, ಮಸ್ಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೂಡಾ ಕಾರ್ಯನಿರ್ವಹಿಸಿದರು. ರಾಬರ್ಟ್ ಹಾಲಿ ಮತ್ತು ಮಾರ್ಶಲ್ ನೈರೆನ್‌ಬರ್ಗ್ ಅವರೊಂದಿಗೆ ಜಂಟಿಯಾಗಿ 1986ರಲ್ಲಿ ವೈದ್ಯಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದರು. 1987ರಲ್ಲಿ ಅಮೆರಿಕಾ ಸರ್ಕಾರ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಿದೆ. 2011ರಲ್ಲಿ ಹರಗೋಬಿಂದ್ ನಿಧನರಾದರು.

ವಿಜ್ಞಾನಿ ಹರಗೋಬಿಂದ್ ಅವರ ಚಿತ್ರವಿರುವ ಗೂಗಲ್ ಡೂಡ್ಲ್ ಸುಮಾರು 13 ದೇಶಗಳಲ್ಲಿ ಇಂದು ಗೂಗಲ್ ಮುಖಪುಟದಲ್ಲಿ ಕಾಣಿಸಲಿದೆ.

English summary
Google honours Nobel Prize winner, Indian-American scientist Har Gobind Khorana on his 96th birthday today(Jan 09) with a doodle. Har Gobind Khorana is known for his work in the field of DNA and for constructing the first artificial gene.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X