ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೂವಿಂದ ಹೂವಿಗೆ ಹಾರುವ ದುಂಬಿ: ವಿಶ್ವ ಭೂ ದಿನಕ್ಕೆ ಗೂಗಲ್ ವಿಶೇಷ

|
Google Oneindia Kannada News

ನವದೆಹಲಿ, ಏಪ್ರಿಲ್ 22: ಏಪ್ರಿಲ್ 22 ರಂದು ವಿಶ್ವದಾದ್ಯಂತ ವಿಶ್ವ ಭೂ ದಿನವನ್ನು ಆಚರಿಸಲಾಗುತ್ತಿದ್ದು, ಗೂಗಲ್ ವಿಶೇಷ ಡೂಡಲ್ ಚಿತ್ರಿಸುವ ಮೂಲಕ ಶುಭಾಶಯ ಕೋರಿದೆ.

ನಮ್ಮ ಭೂಮಿ ತುಂಬಾ ಚಿಕ್ಕದಾಗಿದ್ದು, ಈ ಭೂಮಿಯಲ್ಲಿನ ವಿಸ್ಮಯದಲ್ಲಿ ಅತೀ ಚಿಕ್ಕ ಹಾಗೂ ನಿರ್ಣಾಯಕ ಜೀವಿಯಾದ ಜೇನು ಹುಳುವಿಗೆ ವಿಶ್ವ ಭೂ ದಿನವನ್ನು ಗೂಗಲ್ ಅರ್ಪಿಸಿದೆ.

ಗೂಗಲ್ ಸೃಷ್ಟಿಸಿರುವ ಡೂಡಲ್ ನಲ್ಲಿ ಜೇನುನೊಣವೊಂದು ಕಂಡು ಬರುತ್ತಿದ್ದು, ಬಳಕೆದಾರರು ಅದರ ಮೇಲೆ ಕ್ಲಿಕ್ ಮಾಡಿದ ಕೂಡಲೇ ಒಂದು ಚಿಕ್ಕ ವಿಡಿಯೋ ಪ್ಲೇ ಆಗುತ್ತಿದೆ.
ಅದರಲ್ಲಿ ಜೇನುನೊಣಗಳು ಹೂವಿನಿಂದ ಹೂವಿಗೆ ಹಾರುವ ಮೂಲಕ ಪರಾಗಸ್ಪರ್ಶ ಮಾಡುವ ವಿಧಾನವನ್ನು ತೋರಿಸಲಾಗಿದೆ. ಜೊತೆಗೆ ಜೇನುನೊಣಗಳು ವಿಶ್ವದ ಮೂರನೇ ಎರಡರಷ್ಟು ಬೆಳೆಗಳನ್ನು ಕೊಡುಗೆಯಾಗಿ ನೀಡಿರುವುದರಿಂದ ಅವುಗಳ ಮಹತ್ವವನ್ನು ತೋರಿಸಲಾಗಿದೆ.

Google Gets Sweet On Bees With Interactive Earth Day Doodle

ಗ್ರಾಫಿಕ್ಸ್ ಹಾಗೂ ಅನಿಮೇಷನ್ ಬಳಸಿ ಡೂಡಲ್ ಗೂಗಲ್ ವಿಶ್ವ ಭೂ ದಿನವನ್ನು ವಿಶೇಷವಾಗಿ ಆಚರಣೆ ಮಾಡಿದೆ. ಜೇನುನೊಣಗಳು ಹೂವುಗಳನ್ನು ಪರಾಗಸ್ಪರ್ಶ ಮಾಡಿ ವಿಶ್ವದ ಸೇ.85 ರಷ್ಟು ಹೂವುಗಳ ಬೆಳವಣಿಗೆಗೆ ಕಾರಣವಾಗಿದೆ.

ಅವುಗಳಿಂದ ಹೂವಿನಿಂದ ಹೂವಿಗೆ ಹಾಕಿ ಮಾಡುವ ಪರಾಗಸ್ಪರ್ಶ ಕ್ರಿಯೆ ನಡೆಸುವುದು ಮತ್ತು ನಮ್ಮ ಭೂಮಿಯ ಕೆಲವೊಂದು ವಿಸ್ಮಯ ಸಂಗತಿಗಳನ್ನು ವಿವರಿಸಲಾಗಿದೆ.

English summary
Google is marking Earth Day this year by creating a little buzz about a busy little bee that helps keep us alive. Literally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X