• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಧುನಿಕ ಭಾರತ ನಿರ್ಮಾತೃವಿಗೆ ಗೂಗಲ್ ಡೂಡಲ್‌ ನಮನ

By Nayana
|

ನವದೆಹಲಿ, ಮೇ 22: ಆಧುನಿಕ ಭಾರತದ ನಿರ್ಮಾತೃ ರಾಜಾರಾಮ್ ಮೋಹನ್ ರಾಯ್ ಅವರ 246ನೇ ಜಯಂತಿಯನ್ನು ದೇಶಾದ್ಯಂತ ಮಂಗಳವಾರ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೂಗಲ್ ಡೂಡಲ್ ರಾಜಾರಾಮ್ ಮೋಹನ್ ರಾಯ್ ಅವರ ಕೊಡುಗೆಗಳನ್ನು ಡೂಡಲ್‌ ಮೂಲಕ ಸ್ಮರಿಸಿದೆ.

ರಾಜಾರಾಮ್ ಮೋಹನ್‌ರಾಯ್ ಅವರು ಮೇ 22ರಂದು ಬಂಗಾಳದ ಬರ್ದ್ವಾನ್ ಜಿಲ್ಲೆಯ ರಾಧಾನಗರ ಅಥವಾ ರಘುನಾಥಮುರದಲ್ಲಿ ಜನಿಸಿದರು. ಇದು ಈಗ ಹೂಗ್ಲಿ ಜಿಲ್ಲೆಯ ಆರಂಬಾಗ್ ಕಾವಾಘಟ್ ಕೃಷ್ಣನಗರದ ಹತ್ತಿರದಲ್ಲಿದೆ. ತಂದೆ ರಮಾಕಾಂತ್ ರಾಯ್, ತಾಯಿ ತಾರಿಣಿದೇವಿ.

ಭಾರತದ ಮಹಾನ್ ನೃತ್ಯ ಕಲಾವಿದೆಗೆ ಗೂಗಲ್ ಡೂಡಲ್ ನಮನ

ಉಪನಿಷತ್‌ಗಳಲ್ಲಿರುವಂತೆ, ಹಿಂದೂ ಧರ್ಮಶಾಸ್ತ್ರದ ವೇದಾಂತ ಶಾಲೆಯ ಶುದ್ಧ ತತ್ವ ಮತ್ತು ಸಿದ್ಧಾಂತಗಳ ಆಧಾರಿತ ಪ್ರತಿಪಾದನೆಯ ಪುನರುಜ್ಜೀವನ ಪ್ರಭಾವಕ್ಕೆ ರಾಜಾ ರಾಮ್‌ ಮೋಹನ್‌ ರಾಯ್ರು ಭಾರತೀಯ ಆಧುನಿಕ ಚರಿತ್ರೆಗೆ ಕಾರಣರಾದರು. ಅವರು ಎಲ್ಲ ದೇವರು ಒಂದೇ ಎಂದು ಬೋಧಿಸಿದರು. ವೇದಗಳ ಶ್ಲೋಕಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿದರು.

ಕೋಲ್ಕತ್ತದ ಯುನಿಟೆರಿಯನ್ ಸಮಾಜದ ಸಹ ಸಂಸ್ಥಾಪಕರು ಹಾಗೂ ಬ್ರಹ್ಮ ಸಮಾಜದ ಸಂಸ್ಥಾಪಕರಾದರು. ಈ ಬ್ರಹ್ಮ ಸಮಾಜ ಆಧುನಿಕ ಭಾರತ ಸಮಾಜ ನಿರ್ಮಾಣದಲ್ಲಿ ಬಹುಮುಖ್ಯ ಪುನರುಜ್ಜೀವನ ಪಾತ್ರವನ್ನು ವಹಿಸಿದೆ. ಅತ್ಯಂತ ಯಶಸ್ವಿಯಾಗಿ ಸತಿ ಪದ್ಧತಿಯ ವಿರುದ್ಧ ಹೋರಾಡಿದರು. ವಿಧವೆಯರನ್ನು ಸುಡುವ ಕೆಟ್ಟ ಪದ್ಧತಿಯನ್ನು ನಿಲ್ಲಿಸಲು ಶ್ರಮಿಸಿದರು.

ನಮ್ಮ ದೇಶದ ಸಂಪ್ರದಾಯಗಳ ಜತೆಗೆ ಪಶ್ಚಿಮ ದೇಶದ ಸಂಸ್ಕೃತಿಯನ್ನೂ ಸಹ ಒಂದುಗೂಡಿಸಿದರು. ಭಾರತದಲ್ಲಿ ಹಲವಾರು ಶಾಲೆಗಳನ್ನು ತೆರೆದು ಆಧುನಿಕ ಪದ್ಧತಿಯನ್ನು ಜನಪ್ರಿಯಗೊಳಿಸಿದರು. ವಿಚಾರಾತ್ಮಕ, ಅಧಿಕಾರಯುಕ್ತವಲ್ಲದ, ವಾಸ್ತವ ಪ್ರಪಂಚದ ಹಾಗೂ ಸಾಮಾಜಿಕ ಬದಲಾವಣೆಯ, ಹಿಂದೂಯಿಸಮ್‌ ಗೆ ಪ್ರೋತ್ಸಾಹಿಸಿದರು. ಅವರ ಬರಹಗಳು ಬ್ರಿಟಿಷರ ಮತ್ತು ಅಮೇರಿಕಾದ ಯುನಿಟೇರಿಯನ್ಸ್ ಮೇಲೂ ಪ್ರಭಾವ ಬೀರಿತು.

ಇಂದು ನಾವಿರುವ ಸಮಾಜದಲ್ಲಿ ಯಾವುದಾದರೊಂದು ಸಮುದಾಯವನ್ನು ಅತಿಯಾಗಿ ದ್ವೇಷಿಸುವುದು, ಅವರ ಧರ್ಮದಲ್ಲಿ ಕೆಟ್ಟದ್ದನ್ನು ಕಾಣುವುದು, ಹಾಗೇ ತಮ್ಮ ಧರ್ಮವನ್ನು ಅತಿಯಾಗಿ ಕೊಂಡಾಡುವುದು ಕಾಣುತ್ತಿದ್ದೇವೆ.

ಆದರೆ ರಾಮಕೃಷ್ಣಪರಮಹಂಸ, ವಿವೇಕಾನಂದ, ಗಾಂಧೀಜಿ, ರಾಜಾರಾಮ್ ಮೋಹನ್‌ರಾಯರಂತಹ ಮಹಾಚೇತನಗಳು ವಿಶ್ವದಾದ್ಯಂತ ಎಲ್ಲೇ ಮಾನವಹಿತಕ್ಕೆ ಪ್ರೇರಕವಾದವುಗಳು ಸಿಕ್ಕರೂ ಅದನ್ನು ತಮ್ಮದಾಗಿಸಿ ಕೊಳ್ಳುತ್ತಿದ್ದರು. ಹಾಗಾಗಿ ಅವರ ಆಲೋಚನೆ-ನಡಾವಳಿಗಳು ಆಗಾಗ ವಿರೋಧಾಭಾಸಗಳಿಂದ ಕೂಡಿರುವಂತೆನ್ನಿಸುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tuesday marks the 246th birth anniversary of India's most celebrated social reformer Raja Ram Mohan Roy, remembered best as the 'Maker of Modern India and 'father of the Indian Renaissance'. Today's Google doodle reminds of his many contributions to the society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more