ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತರತ್ನ ಸರ್‌ಎಂ. ವಿಶ್ವೇಶ್ವರಯ್ಯನವರಿಗೆ ಗೂಗಲ್ ಡೂಡಲ್ ಗೌರವ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ 158ನೇ ಜನ್ಮದಿನವಾದ ಸೆಪ್ಟೆಂಬರ್ 15ರಂದು ಜಗತ್ತಿನ ಸರ್ಚ್ ಎಂಜಿನ್ ಗೂಗಲ್ ನಲ್ಲಿ ಸರ್.ಎಂ. ವಿ ರೇಖಾಚಿತ್ರ ಪ್ರಕಟಿಸುವ ಮೂಲಕ ಗೌರವ ಸಲ್ಲಿಸಿದೆ.

ಸರ್ ಎಂ ವಿಶ್ವೇಶ್ವರಯ್ಯ ಪ್ರಸಿದ್ಧರಾಗಿದ್ದು ಮೋಕ್ಷಗುಂಡಂ ವಿಶ್ವೇಶ್ವರಯ್ಯ ಎಂದು, ಅವರು ಮೈಸೂರು ಸಂಸ್ಥಾನದ ದಿವಾನರಾಗಿದ್ದರು. ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಬ್ರಾಹ್ಮಣ ಕುಟುಂಬವೊಂದರಲ್ಲಿ 1861ರ ಸೆಪ್ಟೆಂಬರ್ 15ರಂದು ಜನಿಸಿದರು. ವಿಶ್ವೇಶ್ವರಯ್ಯ ಅವರ ತಂದೆ ಶ್ರೀನಿವಾಸ ಸಂಸ್ಕೃತ ವಿದ್ವಾಂಸರಾಗಿದ್ದರು.

ಗಾಜಿನ ಮಹಿಳೆ ಮಾರ್ಗಾ ಫೌಲ್ ಸ್ಟಿಶ್‌ಗೆ ಗೂಗಲ್ ಗೌರವಗಾಜಿನ ಮಹಿಳೆ ಮಾರ್ಗಾ ಫೌಲ್ ಸ್ಟಿಶ್‌ಗೆ ಗೂಗಲ್ ಗೌರವ

ವಿಶ್ವೇಶ್ವರಯ್ಯ ಅವರ ಪ್ರಾಥಮಿಕ ಶಿಕ್ಷಣ ಚಿಕ್ಕಬಳ್ಳಾಪುರದಲ್ಲಿ, ಪ್ರೌಢಶಿಕ್ಷಣ ಬೆಂಗಳೂರಿನಲ್ಲಿ ಪಡೆದರು. ನಂತರ 1881ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಪಡೆದರು. ನಂತರ ಮುಂಬೈಗೆ ಬಂದು ಅಲ್ಲಿ ಲೋಕೋಪಯೋಗಿ ಇಲಾಖೆಯನ್ನು ಸೇರಿದರು.ಅವರು ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸವೊಂದನ್ನು ಕಂಡು ಹಿಡಿದು ಅದಕ್ಕೆ ಪೇಟೆಂಟ್ ಪಡೆದರು.

ಆನ್ಲೈನಲ್ಲಿ ಸ್ವತಂತ್ರ ಸಂಭ್ರಮ ಹೆಚ್ಚಿಸಿದ ಗೂಗಲ್ ಡೂಡ್ಲ್ಆನ್ಲೈನಲ್ಲಿ ಸ್ವತಂತ್ರ ಸಂಭ್ರಮ ಹೆಚ್ಚಿಸಿದ ಗೂಗಲ್ ಡೂಡ್ಲ್

Google doodle honour to Bharat Ratna Sir M Visvesvaraya

ಮೊದಲ ಬಾರಿಗೆ 1902 ರಲ್ಲಿ ಈ ಫ್ಲಡ್ ಗೇಟ್ ಗಳು ಪುಣೆಯ 'ಖಡಕ್ವಾಸ್ಲಾ' ಅಣೆಕಟ್ಟಿನಲ್ಲಿ ಸ್ಥಾಪಿತವಾದವು. ಇಲ್ಲಿ ಅವು ಯಶಸ್ವಿಯಾದ ನಂತರ 'ಗ್ವಾಲಿಯರ್ ನ ಟಿಗ್ರಾ ಅಣೆಕಟ್ಟು' ಮತ್ತು ಕರ್ನಾಟಕದ 'ಕೃಷ್ಣರಾಜಸಾಗರ' ಅಣೆಕಟ್ಟುಗಳಲ್ಲಿ ಸಹ ಉಪಯೋಗಿತವಾದವು. ಈ ಗೇಟ್ ಗಳ ಉದ್ದೇಶ ಅಣೆಕಟ್ಟಿಗೆ ಹಾನಿ ಮಾಡದೆ ಗರಿಷ್ಠ ಮಟ್ಟದ ನೀರನ್ನು ಶೇಖರಿಸಿಡುವುದೇ ಆಗಿತ್ತು.

ಅಪ್ಪಂದಿರ ದಿನಕ್ಕೆ ಆಕರ್ಷಕ ಡೂಡ್ಲ್ ರಚಿಸಿದ ಗೂಗಲ್!ಅಪ್ಪಂದಿರ ದಿನಕ್ಕೆ ಆಕರ್ಷಕ ಡೂಡ್ಲ್ ರಚಿಸಿದ ಗೂಗಲ್!

1908ರಲ್ಲಿ ಸ್ವಯಂ ನಿವೃತ್ತಿ ಘೋಷಿಸಿದ ಅವರು ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. 1917ರಲ್ಲಿ ಬೆಂಗಳೂರಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದರು. ಈ ಕಾಲೇಜಿಗೆ ಅವರ ಹೆಸರನ್ನೇ ಇಡಲಾಯಿತು. ಅವರು 1962ರಲ್ಲಿ ನಿಧನರಾದರು.

English summary
Google has dedicated its doodle to Bharat Ratna Sir M Visvesvaraya on his 158th birthday on September 15. The doodle has a color sketch of Sir MV with a sketch of a bridge in the background.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X