• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ ಮೊದಲ ಮಹಿಳಾ ಫೊಟೊಗ್ರಾಫರ್ ಗೆ ಗೂಗಲ್ ಗೌರವ

By Manjunatha
|

ಬೆಂಗಳೂರು, ಡಿಸೆಂಬರ್ 09: ಭಾರತದ ಮೊದಲ ಮಹಿಳಾ ಪೊಟೊಗ್ರಾಫರ್ ಹೋಮೈ ವ್ಯಾರವಲ್ಲಾ ಅವರ 104ನೇ ಜನುಮದಿನದಂದು (ಡಿಸೆಂಬರ್ 09) ಗೂಗಲ್ ತನ್ನ ಮುಖ ಮುಟದಲ್ಲಿ ಹೋಮೈ ಅವರ ಸ್ಮರಣಾರ್ಥ ಡೂಡಲ್ ಪ್ರಕಟಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿದೆ.

ಭಾರತ ಸ್ವಾತಂತ್ರ ಚಳುವಳಿ, ಪಾಕಿಸ್ತಾನ ವಿಭಜನೆ, ಮಹಾತ್ಮಾ ಗಾಂಧಿ ಅಂತಿಮ ಯಾತ್ರೆಯಂತಹಾ ಹತ್ತು ಹಲವು ಅನೇಕ ಪ್ರಮುಖ ಘಟನೆಗಳನ್ನು ತಮ್ಮ ಕೆಮೆರಾದಲ್ಲಿ ಸೆರೆ ಮಾಡಿದ ಹೆಗ್ಗಳಿಗೆ ಹೋಮೈ ಅವರದು.

ಬಾಲ್ಯವಿವಾಹದ ವಿರುದ್ಧ ಸಿಡಿದೆದ್ದ ವೈದ್ಯೆಗೆ ಗೂಗಲ್ ಡೂಡಲ್ ನಮನ

1930ರಲ್ಲಿ ಮೊದಲ ಬಾರಿಗೆ ಕ್ಯಾಮೆರಾ ಹಿಡಿದ ಅವರು ಮೊದಲು ಕೆಲಸ ಮಾಡಿದ್ದ ದಿ ಇಲ್ಲಸ್ಟ್ರೇಡ್ ವೀಕ್ಲಿ ಆಫ್ ಇಂಡಿಯಾ ಪತ್ರಿಕೆಗೆ, ವಿಶೇಷವೆಂದರೆ ಅಲ್ಲಿ ಅವರ ಚಿತ್ರಗಳು ಪ್ರಕಟವಾಗುತ್ತಿದಿದ್ದು ಅವರ ಪತಿಯ ಹೆಸರಿನಲ್ಲಿ. 12 ವರ್ಷಗಳ ಕಾಲ ತಮ್ಮದಲ್ಲದ ಗುರುತಿನಿಂದಲೇ ಚಿತ್ರ ಪ್ರಕಟಿಸಿದ ಅವರು ನಂತರ 1942ರಲ್ಲಿ ದೆಹಲಿಗೆ ಕಾರ್ಯಸ್ಥಾನ ಬದಲಿಸಿ ಬ್ರಿಟೀಶ್ ಇನ್ಟರ್ಮೇಶನ್ ಸರ್ವಿಸ್ ಸೇರಿಕೊಂಡರು.

ಅಲ್ಲೇ ಕೆಲಸ ಮಾಡುತ್ತಾ, ಭಾರತದ ಮಹಾನ್ ನಾಯಕರುಗಳೆನಿಸಿಕೊಂಡ ಮಹಾತ್ಮಾ ಗಾಂಧಿ, ಜವಹಾರ್ ಲಾಲ್ ನೆಹರು, ಮೊಹಮದ್ ಅಲಿ ಜಿನ್ನಾ, ಇಂದಿರಾಗಾಂಧಿ ಅವರ ಚಿತ್ರಗಳನ್ನೆಲ್ಲಾ ತೆಗೆದರು. ಸ್ವಾತಂತ್ರ್ಯ ಬಂದ ನಂತರ ಮೊದಲ ತ್ರಿವರ್ಣ ಧ್ವಜ ಹಾರಿಸಿದ ಚಿತ್ರ ತೆಗೆದದ್ದು ಇದೇ ಹೋಮೈ ವ್ಯಾರವಲ್ಲಾ ಅವರು.

ಮೊದಲ ಪ್ರಧಾನಿ ನೆಹರು ಅವರು ಬಾಯಲ್ಲಿ ಸಿಗರೇಟು ಇಟ್ಟುಕೊಂಡು ಬ್ರಿಟಿಶ್ ಮಹಿಳೆ ಶ್ರೀಮತಿ ಸಿಮೋನ್ ಗೆ ಸಿಗರೇಟು ಹೊತ್ತಿಸುತ್ತಿರುವ ಚಿತ್ರ ತೆಗೆದದ್ದು ಇದೇ ಹೋಮೈ ಅವರು. ಪಾಕಿಸ್ತಾನ ವಿಭಜನೆ, ಮಹಾತ್ಮಾ ಗಾಂಧಿ ಅವರ ಅಂತಿಮ ಯಾತ್ರೆಯ ಚಿತ್ರಗಳನ್ನು ತೆಗೆದದ್ದು ಹೋಮೈ ಅವರ ಅವಿಸ್ಮರಣೀಯ ಕ್ಷಣ ಎಂದು ಅವರೇ ಹೇಳಿಕೊಂಡಿದ್ದರು. ನೆಹರು-ಗಾಂಧಿ ಕುಟಕುಂಬದ ಬಹುತೇಕ ಚಿತ್ರಗಳನ್ನು ಹೋಮೈ ಅವರು ತೆಗೆದಿದ್ದಾರೆ.

ಭಾರತದ ಅನಸೂಯಾರ ಕೊಡುಗೆ ಸ್ಮರಿಸಿದ ಗೂಗಲ್ ಡೂಡಲ್

1970ರಲ್ಲಿ ಅವರ ಪತಿ ಕಾಲವಾದ ನಂತರ ಅವರು ಕೆಲಸಕ್ಕೆ ರಾಜಿನಾಮೆ ನೀಡಿ ಛಾಯಾಗ್ರಹಣಕ್ಕೆ ಸಲಾಮ ಹೊಡೆದುಬಿಟ್ಟರು. ತಮ್ಮ ವೃತ್ತಿಬದುಕಿನ ಉತ್ತುಂಗದಲ್ಲಿದ್ದಾಗಲೇ ಅವರು ಛಾಯಾಗ್ರಹಣ ಬಿಟ್ಟುಬಿಟ್ಟರು.

ತಮ್ಮ ಕೊನೆಯ ದಿನಗಳನ್ನು ಹುಟ್ಟೂರಾದ ಗುಜರಾತ್ ನ ವಡೋದರಾದಲ್ಲಿ ಕಳೆದ ಅವರು 2012ರ ಜನವರಿ 15ರಂದು ಇಹಲೋಕ ತ್ಯಜಿಸಿದರು. ಸಾಯುವುದಕ್ಕೆ ಕೆಲವು ವರ್ಷಗಳ ಮುಂದೆ ತಮ್ಮ ಅಸಂಖ್ಯ ಅತ್ಯಮೂಲ್ಯ ಚಿತ್ರಗಳನ್ನು ದೆಹಲಿಯ ಅಲ್ಕಜಿ ಫೌಂಡೇಶನ್ ಗೆ ನೀಡಿದ್ದರು.

English summary
Homai Vyarawalla is India’s first woman photojournalist whose lens earned her a reputation for the candid shots of India’s independence movement, the first tri-colour hoisting, the death of Mahatma Gandhi, and others which become a part of national archives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more