ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮಲಾದೇವಿ ಚಟ್ಟೋಪಾಧ್ಯಾಯರಿಗೆ ಗೂಗಲ್ ಡೂಡಲ್ ನಮನ

|
Google Oneindia Kannada News

ನವದೆಹಲಿ, ಏಪ್ರಿಲ್ 03: ಸ್ವಾತಂತ್ರ್ಯ ಹೋರಾಟಗಾರ್ತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರ 115ನೇ ಜನ್ಮ ದಿನಾಚರಣೆಗೆ ಗೂಗಲ್ ಡೂಡಲ್ ಮೂಲಕ ನಮನ ಸಲ್ಲಿಸಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | 2018ರ ನಿಮ್ಮ ಕನಸಿನ ಸಂಪುಟವನ್ನು ಆಯ್ಕೆ ಮಾಡಿ

ಡೂಡಲ್ ನಲ್ಲಿ ಅವರ ಕಲೆಗಳು ಹಾಗೂ ಕೊಡುಗೆಯನ್ನು ಪರಿಚಯಿಸುವ ಸಣ್ಣ ಪ್ರಯತ್ನವೂ ನಡೆದಿದೆ. ಮಹಾತ್ಮಾ ಗಾಂಧೀಜಿ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಕರೆ ಕೊಟ್ಟ ಸಂದರ್ಭದಲ್ಲಿ ಮಹಿಳೆಯರ ಪರವಾಗಿ ಕಮಲಾದೇವಿಯವರು ಹೋರಾಟಕ್ಕೆ ನಿಂತರು, ತಾವು ಒಂದು ಹೆಣ್ಣು ಎನ್ನುವನ್ನು ಮರೆತು ಎಲ್ಲರಂತೆಯೇ ಹೋರಾಟದಲ್ಲಿ ಪಾಲ್ಗೊಂಡಿದ್ದರು.

ಚಿಪ್ಕೋ ಚಳವಳಿಗೆ ಗೂಗಲ್ ಡೂಡಲ್ ನಮನ ಚಿಪ್ಕೋ ಚಳವಳಿಗೆ ಗೂಗಲ್ ಡೂಡಲ್ ನಮನ

ಅವರು ಸಾಮಾಜಿಕ ನ್ಯಾಯ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ರಾಜಕೀಯ ಸ್ವಾತಂತ್ರ್ಯದ ಪರವಾಗಿ ಹೋರಾಟ ನಡೆಸಿದರು. ಜತೆಗೆ ಮಹಿಳೆಯರ ಉನ್ನತಿ ಹಾಗೂ ಅವರ ಹಕ್ಕಿಗಾಗಿ ತಾವು ಇರುವಷ್ಟೂ ದಿನ ಹೋರಾಟ ನಡೆಸಿದರು.

Google doodle celebrates Kamaladevi Chattopadhyay Birth Anniversary

ಕಮಲಾದೇವಿ ಹುಟ್ಟು, ವಿದ್ಯಾಭ್ಯಾಸ: ಕಮಲಾದೇವಿಯರು 1903, ಏಪ್ರಿಲ್ 3ರಂದು ಮಂಗಳೂರಿನಲ್ಲಿ ಜನಿಸಿದರು. ಅವರು 14 ವರ್ಷವಿದ್ದಾಗ ಮದುವೆಯಾದರು, ಮದುವೆಯಾಗಿ 2 ವರ್ಷದಲ್ಲೇ ಪತಿಯನ್ನು ಕಳೆದುಕೊಂಡು ವಿಧವೆ ಎನಿಸಿಕೊಂಡರು.

ನಂತರ ಲಂಡನ್‌ಗೆ ಬಂದು ನೆಲೆಸಿದರು. ಅಲ್ಲಿ ಶಿಕ್ಷಣ ಪೂರೈಸಿ ಭಾರತಕ್ಕೆ ಮರಳಿದರು. ನಂತರ 1927ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. 1930ರಲ್ಲಿ ನಿಷೇಧಿತ ಉಪ್ಪಿನ ಪ್ಯಾಕೇಟ್ ಗಳನ್ನು ಮಾರಲು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ಗೆ ಪ್ರವೇಶಿಸಿದ ಕ್ಕಾಗಿ ಬ್ರಿಟಿಷರಿಂದ ಬಂಧಿತರಾದ ಪ್ರಥಮ ಭಾರತೀಯ ಮಹಿಳೆಯರಾಗಿದ್ದರು.

ಕಮಲಾದೇವಿ ಅವರು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ, ಸಂಗೀತ ಅಕಾಡೆಮಿ, ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಎಂಪೋರಿಯಮ್ ಹಾಗೂ ಕ್ರ್ಯಾಫ್ಟ್ಸ್ ಕೌಂನ್ಸಿಲ್ ಆಫ್ ಇಂಡಿಯಾವನ್ನು ಸ್ಥಾಪಿಸಿದರು. ಅವರು ತಮ್ಮ 85ನೇ ವಯಸ್ಸಿನಲ್ಲಿ ಅಕ್ಟೋಬರ್ 29, 1988ರಲ್ಲಿ ನಿಧನರಾದರು.

English summary
Google Doodle today paid a tribute to Indian Freedom Fighter and feminist social reformer Kamaladevi chattopadhyay on her 115 birth anniversary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X