ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತೋತ್ಸವದಲ್ಲಿ ವಿಶಿಷ್ಟವಾಗಿ ಭಾಗಿಯಾದ ಗೂಗಲ್

|
Google Oneindia Kannada News

ನವದೆಹಲಿ, ಏ.11: ದೇಶದ ಒಟ್ಟು 19 ರಾಜ್ಯ 91 ಕ್ಷೇತ್ರಗಳಲ್ಲಿ ಮೊದಲ ಹಂತದ ಲೋಕಸಭಾ ಸಭಾ ಚುನಾವಣೆಗೆ ಮತದಾನ ಆರಂಭಗೊಂಡಿದೆ. ಗೂಗಲ್ ಡೂಡಲ್‌ನಲ್ಲಿ ಮತದಾನ ಪ್ರಕ್ರಿಯೆ ಹಾಗೂ ಏಳು ಹಂತಗಳನ್ನು ವಿವರಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ತೋರು ಬೆರಳಿಗೆ ಶಾಯಿ ಹಚ್ಚಿದ ಚಿತ್ರವನ್ನು ಗೂಗಲ್​ ಡೂಡಲ್​ ತೋರಿಸಿದೆ. ಮತದಾನ ಮಾಡಿದ ಬೆರಳಿಗೆ ಶಾಯಿ ಹಚ್ಚಿದ ಚಿತ್ರದ ಮೇಲೆ ಕ್ಲಿಕ್​ ಮಾಡಿದರೆ ಅಲ್ಲಿ ಮತದಾನದ ಪ್ರಕ್ರಿಯೆಗಳ ವಿವರಣೆ ಇದೆ. ಅಷ್ಟೇ ಅಲ್ಲದೆ, ಇದೇ ಮೊದಲ ಬಾರಿಗೆ ಮತದಾನ ಮಾಡುವವರಿಗೆ ಅಗತ್ಯ ಮಾಹಿತಿಗಳನ್ನೂ ಗೂಗಲ್​ ಡೂಡಲ್​ ನೀಡಿದೆ.

ಲೋಕಸಭೆ ಚುನಾವಣೆ LIVE: ಮತದಾರರಿಗೆ ಪ್ರಧಾನಿ ಮೋದಿ ಕಳಕಳಿಯ ವಿನಂತಿಲೋಕಸಭೆ ಚುನಾವಣೆ LIVE: ಮತದಾರರಿಗೆ ಪ್ರಧಾನಿ ಮೋದಿ ಕಳಕಳಿಯ ವಿನಂತಿ

ಒಟ್ಟು ಏಳು ಹಂತದಲ್ಲಿ ನಡೆಯಲಿರುವ ಚುನಾವಣೆಯ ಮೊದಲ ಹಂತ ಇಂದು ಪ್ರಾರಂಭವಾಗಿದ್ದು, ಏಪ್ರಿಲ್​ 18, 23, 29, ಮೇ 6, ಮೇ 12 ಮತ್ತು ಮೇ 19ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.

Google Doodle Celebrates Beginning Of Worlds Largest Elections

ಒಂದೇ ಹಂತದಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಆಂಧ್ರ, ಅರುಣಾಚಲ, ಗೋವಾ, ಗುಜರಾತ್‌, ಹರ್ಯಾಣ, ಹಿಮಾಚಲ ಪ್ರದೇಶ, ಕೇರಳ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತೆಲಂಗಾಣ, ತಮಿಳುನಾಡು, ಉತ್ತರಾಖಂಡ್, ಅಂಡಮಾನ್- ನಿಕೋಬಾರ್, ದಾದ್ರಾ ನಗರ್‌ಹವೇಲಿ, ದಮನ್ ಅಂಡ್ ದಿಯು, ಲಕ್ಷದ್ವೀಪ, ದಿಲ್ಲಿ, ಪುದುಚೇರಿ, ಚಂಡೀಗಢ.

ಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿಲೋಕಸಭೆ ಚುನಾವಣೆ 2019ರ ಮಾಹಿತಿ ಅಂಕಿ- ಅಂಶಗಳಲ್ಲಿ

ಎರಡು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಕರ್ನಾಟಕ, ಮಣಿಪುರ, ರಾಜಸ್ಥಾನ, ತ್ರಿಪುರಾ. ಮೂರು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಅಸ್ಸಾಂ, ಛತ್ತೀಸ್‌ಗಢ , ನಾಲ್ಕುಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಜಾರ್ಖಂಡ್‌, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ , ಐದು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಜಮ್ಮು ಮತ್ತು ಕಾಶ್ಮೀರ ಏಳು ಹಂತಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳು: ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತದಾನ ನಡೆಯಲಿದೆ.

English summary
Google today marked the beginning of General Elections in India with a doodle. The Google doodle has a inked finger, when clicked on, leads users to a page that explains the voting procedure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X