ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರ ದಿನಾಚರಣೆ: ಎಲ್ಲಾ ಶಿಕ್ಷಕರಿಗೆ ಗೂಗಲ್ ಡೂಡಲ್ ಗೌರವ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 05: ಶಿಕ್ಷಕರ ದಿನಾಚರಣೆ ಅಂಗವಾಗಿ ಗೂಗಲ್ ಡೂಡಲ್ ದೇಶದ ಎಲ್ಲಾ ಶಿಕ್ಷಕರಿಗೆ ಗೌರವ ಸಲ್ಲಿಸಿದೆ.

ಪ್ರಸ್ತುತ ಕೊವಿಡ್ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಪ್ರತಿಯೊಬ್ಬ ಶಿಕ್ಷಕ ಕೂಡ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿರಿಕೊಂಡು, ಅವರ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.

ಮತ್ತೆ ಬಾಲ್ಯದ ನೆನಪುಗಳ ಸುತ್ತ ಗಿರಕಿಹೊಡೆಸಿದ ಗೂಗಲ್ ಡೂಡಲ್ ಮತ್ತೆ ಬಾಲ್ಯದ ನೆನಪುಗಳ ಸುತ್ತ ಗಿರಕಿಹೊಡೆಸಿದ ಗೂಗಲ್ ಡೂಡಲ್

ತಮಗೆ ತಿಳಿಯದಿದ್ದರೂ ಕಲಿತುಕೊಂಡು ಆನ್​ಲೈನ್ ತರಗತಿಗಳ ಮೂಲಕವೇ ಮಕ್ಕಳ ಶಿಕ್ಷಣ ಕುಂಠಿತವಾಗದಂತೆ ಶ್ರಮಿಸುತ್ತಿದ್ದಾರೆ.

Google Celebrates Teachers Day With A Doodle

ಶಿಕ್ಷಕರ ಶ್ರಮಕ್ಕೆ ಗೂಗಲ್ ಇಂದು ಗೌರವ ಸಲ್ಲಿಸುವ ಕೆಲಸ ಮಾಡಿದೆ. ಕೊರೊನಾ ಸಮಯದಲ್ಲಿ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿಶ್ರಮಿಸುತ್ತಿರುವ ಹೀರೋಗಳಿಗೆ ಡೂಡಲ್ ಮೂಲಕ ಗೂಗಲ್ ಗೌರವ ಸಲ್ಲಿಸಿದೆ. ಅನಿಮೇಟೆಡ್ ಡೂಡಲ್ ಇದಾಗಿದೆ.

ಪ್ರತಿ ವರ್ಷವೂ ಭಾರತದಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.

ಆದರೆ ಈ ಬಾರಿ ಕೊರೊನಾದಿಂದಾಗಿ ಶಾಲಾ-ಕಾಲೇಜುಗಳು ಮುಚ್ಚಿವೆ. ಹೀಗಾಗಿ ಈ ಬಾರಿ ಶಿಕ್ಷಕರ ದಿನಾಚರಣೆಯ ಸಂಭ್ರಮ ಕಡಿಮೆಯಾಗಿದೆ. ಆದರೂ ಸಹ ಕೊರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಹಿಂಜರಿಯದೇ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವ ದೇಶದ ಎಲ್ಲಾ ಶಿಕ್ಷಕರಿಗೆ ಗೂಗಲ್ ವಿಶೇಷ ಕೃತಜ್ಞತೆ ಸಲ್ಲಿಸಿದೆ.

1962ರಿಂದಲೂ ಪ್ರತಿವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ.

ಅವರು 1888ರ ಸೆಪ್ಟೆಂಬರ್​ 5ರಂದು ತಮಿಳುನಾಡಿನ ತಿರುತನಿಯಲ್ಲಿ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದರು. ರಾಧಾಕೃಷ್ಣ ಅವರು ಉತ್ತಮ ವಿದ್ಯಾರ್ಥಿಯಾಗಿದ್ದು, ಬಾಲ್ಯದಲ್ಲೇ ಓದಿನಲ್ಲಿ ಮುಂದೆ ಇದ್ದರು. ಬಳಿಕ ಮದ್ರಾಸ್​ನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಫಿಲಾಸಪಿ(ತತ್ವಶಾಸ್ತ್ರ)ಯಲ್ಲಿ ಎಂ.ಎ ಮಾಡಿದರು.

English summary
With an animated doodle, Google joined hands with India Saturday to celebrate Teacher’s Day. Since 1962, the day has been marked annually on September 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X