ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣತಂತ್ರದಿನಕ್ಕಾಗಿ ಐಕ್ಯತಾ ಡೂಡ್ಲ್ ರಚಿಸಿದ ಮುಂಬೈ ಕಲಾವಿದ

|
Google Oneindia Kannada News

ನವದೆಹಲಿ, ಜನವರಿ 26: ಪ್ರತಿ ವರ್ಷದಂತೆ ಈ ವರ್ಷ ಕೂಡಾ ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಮುಖಪುಟದಲ್ಲಿ ಜನವರಿ 26ರಂದು ಭಾರತದ ಗಣತಂತ್ರ ದಿನದ ಅಂಗವಾಗಿ ವಿಶೇಷ ಡೂಡ್ಲ್ ಪ್ರದರ್ಶಿಸಿದೆ. ಈ ವಿಶೇಷ ಡೂಡ್ಲ್ ರಚಿಸಿದ್ದು ಮುಂಬೈ ಮೂಲದ ಕಲಾವಿದ ಓಂಕಾರ್ ಫೊಂಡೆಕರ್.

ಡೂಡ್ಲ್ ಚಿತ್ರ: ಭಾರತ ಸೇರಿದಂತೆ ವಿಶ್ವದ ಅನೇಕ ವಿದ್ಯಮಾನಗಳು, ಐತಿಹಾಸಿಕ ದಿನಗಳು, ಹಬ್ಬ ಹರಿದಿನಗಳು, ಆಚರಣೆಗಳ ಸಂದರ್ಭದಲ್ಲಿ ಗೂಗಲ್ ತನ್ನ ಡೂಡ್ಲ್ ರೇಖಾಚಿತ್ರದ ಮೂಲಕ ಸಾಧಕರನ್ನು ಸ್ಮರಿಸುವ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಬಂದಿದೆ. ಗೂಗಲ್ ಲೋಗೋವನ್ನು ಕಲಾತ್ಮಕವಾಗಿ ರೂಪಿಸುವುದಕ್ಕೆ ಡೂಡಲ್ಸ್ ಎನ್ನಲಾಗುತ್ತದೆ. ಪ್ರತಿ ವರ್ಷ ಶಾಲಾ ಮಕ್ಕಳಿಗೆ ಡೂಡ್ಲ್ ರಚನೆ ಸ್ಪರ್ಧೆ ಏರ್ಪಡಿಸಲಾಗುತ್ತದೆ.

Republic Day 2021 Live Updates : ರಾಜಪಥದಲ್ಲಿ 72ನೇ ಗಣತಂತ್ರದಿನ ಸಂಭ್ರಮRepublic Day 2021 Live Updates : ರಾಜಪಥದಲ್ಲಿ 72ನೇ ಗಣತಂತ್ರದಿನ ಸಂಭ್ರಮ

ಕಲೆ ಸಂಸ್ಕೃತಿ ಬಿಂಬಿಸುವ ಡೂಡ್ಲ್: ವಿವಿಧತೆಯಲ್ಲಿ ಐಕ್ಯತೆ ಸಾರುವ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಡೂಡ್ಲ್ ಚಿತ್ರವನ್ನು ಓಂಕಾರ್ ರಚಿಸಿದ್ದಾರೆ.

Google Celebrates 72nd Republic Day With Doodle By Mumbai Artist Onkar

ಕ್ರಿಕೆಟರ್, ಭರತನಾಟ್ಯ ಪಟು, ಸಂಗೀತಗಾರ, ಆನೆ ಸವಾರಿ, ವಾಸ್ತುಶಿಲ್ಪ ಹೀಗೆ ವೈವಿಧ್ಯಮಯ ಕ್ಷೇತ್ರಗಳನ್ನು ಪ್ರತಿನಿಧಿಸುವ ಚಿತ್ರ ಇದಾಗಿದೆ. ಭಾರತವನ್ನು ಪ್ರತಿನಿಧಿಸುವ ಕಲೆ, ಸಂಸ್ಕೃತಿ, ವೈವಿಧ್ಯತೆ ಪ್ರತಿಬಿಂಬದಂಥ ಚಿತ್ರ ರಚಿಸುವ ಅವಕಾಶ ಸಿಕ್ಕಿದ್ದಕ್ಕೆ ಸಂತಸವಾಗಿದೆ. ಗೂಗಲ್ ಮೂಲಕ ವಿಶ್ವಕ್ಕೆ ನಮ್ಮ ಪರಂಪರೆ ಬಗ್ಗೆ ಇನ್ನಷ್ಟು ವಿಸ್ತರಿಸಲಿದೆ ಎಂದು ಕಲಾವಿದ ಓಂಕಾರ್ ಫೊಂಡೆಕರ್ ಪ್ರತಿಕ್ರಿಯಿಸಿದ್ದಾರೆ.

English summary
Google is celebrating India's 72nd Republic Day with a doodle illustration by Mumbai-based artist Onkar Fondekar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X